Prithwi Shaw: ಪ್ರೇಮಿಗಳ ದಿನದಂದೇ ಭಾವೀ ಪತ್ನಿಯನ್ನು ಜಗತ್ತಿಗೆ ಪರಿಚಯಿಸಿದ ಪೃಥ್ವಿ ಶಾ, ಒಂದೇ ನಿಮಿಷದಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಡಿಲೀಟ್

ಮುಂಬೈ: ಫೆಬ್ರವರಿ 14 ಪ್ರೇಮಿಗಳ ದಿನ. ಈ ದಿನವನ್ನು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಮುಂಬೈನ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್, 2018ರ ಐಸಿಸಿ ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ, ಪ್ರೇಮಿಗಳ ದಿನದಂದೇ ತಮ್ಮ ಭಾವೀ ಮಡದಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಸ್ಫೋಟಕ ಬ್ಯಾಟರ್ ಪೃಥ್ವಿ ಶಾ ಕಳೆದ ಕೆಲ ವರ್ಷಗಳಿಂದ ನಟಿ ಕಮ್ ಮಾಡೆಲ್ ನಿಧಿ ತಪಾಡಿಯಾ (Prithwi Shaw girl friend Nidhi Tapadia) ಅವರನ್ನು ಪ್ರೀತಿಸುತ್ತಿದ್ದಾರೆ.

ಇಷ್ಟು ದಿನ ಗುಟ್ಟಾಗಿದ್ದ ಈ ಪ್ರೀತಿ ಈಗ ಜಗಜ್ಜಾಹೀರಾಗಿದೆ. ತಮ್ಮ ಪ್ರಿಯತಮೆಗೆ ಪ್ರೇಮಿಗಳ ದಿನದಂದು ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಪ್ರಿಯತಮೆಯ ಜೊತೆಗಿರುವ ಚಿತ್ರವನ್ನು ಪೃಥ್ವಿ ಶಾ ಪ್ರಕಟಿಸಿದ್ದಾರೆ. ಫೋಟೋಗೆ ಕೊಟ್ಟಿರುವ ಕ್ಯಾಪ್ಷನ್ ಮತ್ತಷ್ಟು ಇಂಟ್ರೆಸ್ಟಿಂಗ್.“ಪ್ರೇಮಿಗಳ ದಿನದ ಶುಭಾಶಯಗಳು ನನ್ನ ಮುದ್ದಿನ ಹೆಂಡತಿ” ಎಂದು ಪೃಥ್ವಿ ಶಾ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ತಮ್ಮ ಗೆಳತಿಯ ಫೋಟೋ ಹಾಕಿದ್ದ ಪೃಥ್ವಿ ಶಾ ಒಂದೇ ನಿಮಿಷದಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರೊಳಗೆ ಅದು ವೈರಲ್ ಆಗಿದೆ.

ಇದನ್ನೂ ಓದಿ : Virat Kohli – Smriti Mandhana: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ನಂ.18 ಸಮಾಗಮ

ಇದನ್ನೂ ಓದಿ : WPL Auction 2023: ರಾಯಲ್ ಚಾಲೆಂಜರ್ಸ್ ತಂಡ ಸೇರಿದ ಸ್ಮೃತಿ ಮಂಧನ, RCB ಟೀಮ್’ಗೆ ಆಸೀಸ್’ನ ಮೋಹಕ ತಾರೆ; ಯಾವ ತಂಡಕ್ಕೆ ಯಾರ್ಯಾರು..?

ಇದನ್ನೂ ಓದಿ : ಬೆಳಗಾವಿ ಕ್ರಿಕೆಟಿಗನ ಫೀಲ್ಡಿಂಗ್‌ಗೆ ಫಿದಾ ಆದ್ರು ತೆಂಡೂಲ್ಕರ್, ಅದ್ಭುತ ಕ್ಯಾಚ್‌ಗೆ ಬಹುಪರಾಕ್ ಅಂದ್ರು ಕ್ರಿಕೆಟ್ ದಿಗ್ಗಜರು

23 ವರ್ಷದ ಪೃಥ್ವಿ ಶಾ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದ್ದ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಆಜರೆ 8 ತಿಂಗಳ ನಂತರ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದರೂ, ಆಡುವ ಅವಕಾಶ ಸಿಕ್ಕಿರಲಿಲ್ಲ.ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಆಗಿರುವ ಪೃಥ್ವಿ ಶಾ ಭಾರತ ಪರ ಇದುವರೆಗೆ 5 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.37ರ ಸರಾಸರಿಯಲ್ಲಿ ಒಂದು ಶತಕ, 2 ಅರ್ಧಶತಕ ಸಹಿತ 339 ರನ್ ಕಲೆ ಹಾಕಿದ್ದಾರೆ. ಟೀಮ್ ಇಂಡಿಯಾ ಪರ ಆರು ಏಕದಿನ ಪಂದ್ಯಗಳನ್ನೂ ಆಡಿರುವ ಪೃಥ್ವಿ 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. ಆಡಿರುವ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಪೃಥ್ವಿ ಮೊದಲ ಎಸೆತದಲ್ಲೇ ಶೂನ್ಕ್ಕೆ ಔಟಾಗಿದ್ದರು.

Prithwi Shaw girl friend Nidhi Tapadia : Prithwi Shaw, who introduced his future wife to the world on Valentine’s Day, deleted the Instagram post within a minute.

Comments are closed.