ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರಾಹುಲ್‌ ದ್ರಾವಿಡ್‌ ಕೋಚ್‌ : 2 ವರ್ಷ ಒಪ್ಪಂದ ಮುಂದುವರಿಕೆ ?

Rahul Dravid Team india Coach : ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ (Rahul Dravid) ಅವರು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ದದ ಪ್ರವಾಸಕ್ಕೆ ಕೋಚ್‌ ಆಗಿ ಮುಂದುವರಿಕೆ ಆಗಲಿದ್ದಾರೆ.

Rahul Dravid Team india Coach : ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿರುವ ರಾಹುಲ್‌ ದ್ರಾವಿಡ್‌ (Rahul Dravid) ಅವರು ಮುಂದಿನ ದಕ್ಷಿಣ ಆಫ್ರಿಕಾ ವಿರುದ್ದದ ಪ್ರವಾಸಕ್ಕೆ ಕೋಚ್‌ ಆಗಿ ಮುಂದುವರಿಕೆ ಆಗಲಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯಶಾ ಈಗಾಗಲೇ ದ್ರಾವಿಡ್‌ ಜೊತೆ ಮಾತುಕತೆ ನಡೆಸಿದ್ದು, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಒಪ್ಪಂದವಿಲ್ಲದೇ ಅವರು ಮುಂದುವರಿಯುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅವಧಿ ಮುಕ್ತಾಯವಾಗಿತ್ತು. ಇದರ ಬೆನ್ನಲ್ಲೇ ರಾಹುಲ್‌ ದ್ರಾವಿಡ್‌ ಅವರು ಟೀಂ ಇಂಡಿಯಾದ ಕೋಚ್‌ ಆಗಿ ಮುಂದುವರಿಯುವುದಿಲ್ಲ ಎನ್ನಲಾಗುತ್ತಿತ್ತು. ಅಲ್ಲದೇ ರಾಹುಲ್‌ ದ್ರಾವಿಡ್‌ ಐಪಿಎಲ್‌ ತಂಡದ ಕೋಚ್‌ ಮುಂದುವರಿಯುವ ಕುರಿತು ಮಾತುಗಳು ಕೇಳಿಬಂದಿತ್ತು.

Rahul Dravid to continue as coach for South Africa tour, BCCI 2-year contract extension possible
Image Credit to Original Source

ಆದರೆ ಇದೀಗ ರಾಹುಲ್‌ ದ್ರಾವಿಡ್‌ ಅವರನ್ನು ಬಿಸಿಸಿಐ ಎರಡು ವರ್ಷಗಳ ಕಾಲ ಕೋಚ್‌ ಆಗಿ ಮುಂದುವರಿಸುವ ಸಾಧ್ಯತೆಯಿದೆ. ಅಲ್ಲದೇ ಮತ್ತೊಂದು ಅವಧಿಗೂ ಕೂಡ ಕೋಚ್‌ ಆಗಿ ಅವರು ನೇಮಕವಾಗಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಆಗುವುದು ಬಹುತೇಕ ಖಚಿತ.

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಅವರ ಅವಧಿಯಲ್ಲಿ ಭಾರತ ಕ್ರಿಕೆಟ್‌ ತಂಡ, ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಮತ್ತು ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ಜಯಿಸಿತ್ತು. ಅಲ್ಲದೇ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ ತಂಡ ಉತ್ತಮ ಸಾಧನೆಯನ್ನು ಮಾಡಿದೆ.

ಇದನ್ನೂ ಓದಿ : ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

ಇದೇ ಕಾರಣಕ್ಕೆ ಬಿಸಿಸಿಐ ರಾಹುಲ್‌ ದ್ರಾವಿಡ್‌ ಅವರನ್ನು ಕೋಚ್‌ ಆಗಿ ಮುಂದುವರಿಕೆ ಮಾಡಲು ಉತ್ಸುಕವಾಗಿದೆ. ಭಾರತ ಕ್ರಿಕೆಟ್‌ ತಂಡದ ಭವಿಷ್ಯದ ದೃಷ್ಟಿಯಿಂದಲೂ ರಾಹುಲ್‌ ದ್ರಾವಿಡ್‌ ಕೋಚ್‌ ಆಗಿ ಮುಂದುವರಿಯುವುದು ಉತ್ತಮ. ಇದೀಗ ಭಾರ ಕ್ರಿಕೆಟ್‌ ತಂಡ ಡಿಸೆಂಬರ್‌ 10, 2023 ಮತ್ತು ಜನವರಿ 7, 2024ರ ನಡುವೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆಯಲ್ಲಿ ಭಾರತ ಮೂರು T20I, ODIಗಳು ಮತ್ತು ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ.

ಕಳೆದ ವಾರವಷ್ಟೇ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರು ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಹೊಸ ಒಪ್ಪಂದದಂತೆ ಕೆಲಸ ಮಾಡಲು ರಾಹುಲ್‌ ದ್ರಾವಿಡ್‌ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ವೇಳೆಯಲ್ಲಿ ರಾಹುಲ್‌ ದ್ರಾವಿಡ್‌ ಅವರು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗುತ್ತಿದೆ.

Rahul Dravid to continue as coach for South Africa tour, BCCI 2-year contract extension possible
Image Credit to Original Source

ಒಪ್ಪಂದಕ್ಕೆ ಸಹಿ ಹಾಕದೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳುತ್ತಾರಾ ದ್ರಾವಿಡ್‌ ?

ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅವಧಿ ಮುಕ್ತಾಯಗೊಂಡಿದ್ದು, ಅವರ ಒಪ್ಪಂದವೂ ಮುಗಿದಿದೆ. ಹೀಗಾಗಿ ಹೊಸ ಒಪ್ಪಂದದ ಪ್ರಕಾರ ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಆಗಿ ಮುಂದುವರಿಕೆ ಆಗಬೇಕಾಗಿದೆ. ಆದರೆ ಮುಂದಿನ ತಿಂಗಳು ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಟಿ೨೦ ವಿಶ್ವಕಪ್‌ ಹಿನ್ನೆಲೆಯಲ್ಲಿ ಈ ಪ್ರವಾಸ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಅಲ್ಲದೇ ರಾಹುಲ್‌ ದ್ರಾವಿಡ್‌ ಹೊಸ ಒಪ್ಪಂದಕ್ಕೆ ಸಹಿಹಾಕದೆ ದಕ್ಷಿಣ ಆಫ್ರಿಕಾಕ್ಕೆ ತೆರಳಿತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಕೋಚ್‌ ರೇಸ್‌ನಲ್ಲಿರುವ ವಿವಿಎಸ್‌ ಲಕ್ಷ್ಮಣ್‌ ಅವರು ಸದ್ಯ ಎನ್‌ಸಿಎ ಮುಖ್ಯಸ್ಥರಾಗಿದ್ದು, ಅದೇ ಹುದ್ದೆಯಲ್ಲೇ ಅವರು ಮುಂದುವರಿಕೆ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : IPL 2024 : RCBಗೆ ವಿರಾಟ್‌ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ ಕೊಹ್ಲಿ

U19 ವಿಶ್ವಕಪ್ ವಿಶ್ವಕಪ್‌ ಸಮೀಪಿಸುತ್ತಿದ್ದು, ವಿವಿಎಸ್‌ ಲಕ್ಷ್ಮಣ್‌ ಅವರು ಭಾರತ ಎ ತಂಡದ ಕೋಚ್‌ ಜವಾಬ್ದಾರಿಯ ಜೊತೆಗೆ ಕಿರಿಯರ ತಂಡವನ್ನೂ ಕೂಡ ವಿಶ್ವಕಪ್‌ಗೆ ಸಜ್ಜಾಗಬೇಕಾಗಿದೆ. ಎನ್‌ಸಿಎಯನ್ನು ಇನ್ನಷ್ಟು ಅಭಿವೃದ್ದಿ ಪಡಿಸುವ ಸಲುವಾಗಿ ಲಕ್ಷ್ಮಣ್‌ ಅವರು ತೀರಾ ಅಗತ್ಯ ಎನಿಸಿದ್ದಾರೆ.

ರಾಹುಲ್‌ ದ್ರಾವಿಡ್‌ ಅವರು ಕೋಚ್‌ ಹುದ್ದೆಯಲ್ಲಿ ಮುಂದುವರಿಕೆ ಆಗದೇ ಇದ್ರೆ ವಿವಿಎಸ್‌ ಲಕ್ಷ್ಮಣ್‌ ಟೀಂ ಇಂಡಿಯಾದ ಕೋಚ್‌ ಆಗುವ ಸಾಧ್ಯತೆಯಿದೆ. ಆದರೆ ರಾಹುಲ್‌ ದ್ರಾವಿಡ್‌ ಅವರು ತಮ್ಮ ನಿರ್ಧಾರವನ್ನು ಇನ್ನೂ ಪ್ರಕಟಿಸಿಲ್ಲ. ಐಪಿಎಲ್‌ ಫ್ರಾಂಚೈಸಿಗಳು ಟೀಮ್‌ ಡೈರೆಕ್ಟರ್/ಟೀಮ್ ಮೆಂಟರ್ ಹುದ್ದೆಗೆ ಆಫರ್‌ ನೀಡುತ್ತಿವೆ.

ಫ್ಯಾಮಿಲಿ ಜೊತೆಗೆ ಸಮಯ ಕಳೆಯುವ ಸಲುವಾಗಿ ಐಪಿಎಲ್‌ ಮೆಂಟರ್‌ ಆಗುತ್ತಾರೆ ಎನ್ನಲಾಗುತ್ತಿದೆ. ಆದರೆ ಟೀಂ ಇಂಡಿಯಾಕ್ಕೆ ರಾಹುಲ್‌ ದ್ರಾವಿಡ್‌ ಅವರ ಅಗತ್ಯತೆ ಇದೆ. ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ.

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್‌ ಪಾಂಡ್ಯ ಅಥವಾ ರೋಹಿತ್‌ ಶರ್ಮಾ ?

ರಾಹುಲ್‌ ದ್ರಾವಿಡ್‌ ಅವರ ಜೊತೆಗೆ ಉಳಿದ ಸಿಬ್ಬಂದಿಗಳ ಹುದ್ದೆಯೂ ಕೂಡ ಮುಂದುವರಿಕೆ ಆಗಲಿದೆ. ಮುಂದಿನ T20 ವಿಶ್ವಕಪ್ ಗಮನದಲ್ಲಿ ಇರಿಸಿಕೊಂಡು ಎರಡು ವರ್ಷದ ಅವಧಿಗೆ ಅಥವಾ WTC ಚಾಂಪಿಯನ್‌ ಶಿಪ್‌ ಹಾಗೂ ಚಾಂಪಿಯನ್ಸ್ ಟ್ರೋಫಿಯ ವರೆಗೆ ಮುಂದುವರಿಕೆ ಆಗಬಹುದು ಎನ್ನಲಾಗುತ್ತಿದೆ.

Rahul Dravid to continue as coach for South Africa tour, BCCI 2-year contract extension possible

Comments are closed.