IPL 2024 : RCBಗೆ ವಿರಾಟ್‌ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್‌ ಕೊಹ್ಲಿ

IPL 2024 RCB Team Virat Kohli : ರಾಯಲ್‌ ಚಾಲೆಂಜರ್ಸ್‌ ತಂಡವನ್ನು ತೊರೆಯಲು ವಿರಾಟ್‌ ಕೊಹ್ಲಿ (Virat Kohli) ಮನಸ್ಸು ಮಾಡಿದ್ದಾರೆ ಎಂಬ ವಿಚಾರ ಇದೀಗ ಬಯಲಾಗಿದೆ. ಅಷ್ಟಕ್ಕೂ ವಿರಾಟ್‌ ಕೊಹ್ಲಿ ಯಾವೆಲ್ಲಾ ವಿಚಾರವನ್ನು ಮಾತನಾಡಿದ್ದಾರೆ ಅನ್ನೋ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

IPL 2024 RCB Team Virat Kohli  : ಐಪಿಎಲ್‌ ಆರಂಭದಿಂದಲೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು  (Royal Chanllengers Bangalore) ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್‌ ಕೊಹ್ಲಿ ಸ್ಪೋಟ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ತಂಡವನ್ನು ತೊರೆಯಲು ವಿರಾಟ್‌ ಕೊಹ್ಲಿ (Virat Kohli) ಮನಸ್ಸು ಮಾಡಿದ್ದಾರೆ ಎಂಬ ವಿಚಾರ ಇದೀಗ ಬಯಲಾಗಿದೆ. ಅಷ್ಟಕ್ಕೂ ವಿರಾಟ್‌ ಕೊಹ್ಲಿ ಯಾವೆಲ್ಲಾ ವಿಚಾರವನ್ನು ಮಾತನಾಡಿದ್ದಾರೆ ಅನ್ನೋ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ವಿರಾಟ್‌ ಕೊಹ್ಲಿ.. ಭಾರತ ಕ್ರಿಕೆಟ್‌ ತಂಡ ಭರವಸೆಯ ಆಟಗಾರ. ಇತ್ತೀಚೆಗಷ್ಟೇ ಏಕದಿನ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನೇ ಅಳಿಸಿ ಹಾಕಿದ್ದರು. ಸದ್ಯ ಕೊಹ್ಲಿ ಐಪಿಲ್‌ ಮೂಡ್‌ನಲ್ಲಿದ್ದಾರೆ.

IPL 2024 RCB Team Virat Kohli Plan To Leave Royal Chanllengers Bangalore
Image Credit to Original Source

ವಿರಾಟ್‌ ಕೊಹ್ಲಿ 2022 ರಲ್ಲಿ ಆರ್‌ಸಿಬಿ ತೊರೆದು ಬೇರೊಂದು ಪ್ರಾಂಚೈಸಿ ಸೇರಲು ಮನಸ್ಸು ಮಾಡಿದ್ದಾರಂತೆ. ಈ ವಿಚಾರವನ್ನು ಖುದ್ದಿ ಕೊಹ್ಲಿ ಹಂಚಿಕೊಂಡಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದುವರೆಗೂ ಪ್ರಶಸ್ತಿಯನ್ನು ಜಯಿಸಿಲ್ಲ. ಇದೇ ಕಾರಣದಿಂದಲೇ ವಿರಾಟ್‌ ಕೊಹ್ಲಿ ಆರ್‌ಸಿಬಿ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

೨೦೨೨ರಲ್ಲಿ ನಡೆದ ಐಪಿಎಲ್‌ ಹರಾಜಿಗೂ ಮೊದಲೇ ವಿರಾಟ್‌ ಕೊಹ್ಲಿ ಅವರು ಆರ್‌ಸಿಬಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ ಇತರ ತಂಡಗಳು ವಿರಾಟ್‌ ಕೊಹ್ಲಿ ಅವರನ್ನು ಸಂಪರ್ಕ ಮಾಡಿದ್ದವು. ವಿರಾಟ್‌ ಕೊಹ್ಲಿ ಕೂಡ ಆರ್‌ಸಿಬಿ ತಂಡದ ಬದಲು ಬೇರೆಯ ತಂಡದಲ್ಲಿ ಆಡಲು ಮನಸ್ಸು ಮಾಡಿದ್ದರು.

ಇದನ್ನೂ ಓದಿ : ಐಪಿಎಲ್ 2024 : ಗುಜರಾತ್‌ ಟೈಟಾನ್ಸ್‌ಗೆ ಶುಭಮನ್‌ ಗಿಲ್‌ ನಾಯಕ

ಆದರೆ ಕೊನೆಯ ಗಳಿಗೆಯಲ್ಲಿ ವಿರಾಟ್‌ ಕೊಹ್ಲಿ ಆರ್‌ಸಿಬಿ ತಂಡದಲ್ಲಿಯೇ ಉಳಿದುಕೊಂಡಿದ್ದರು. ಪಾಪ್‌ ಡುಪ್ಲಸಿಸ್‌ ಆರ್‌ಸಿಬಿ ತಂಡದ ನಾಯಕರಾಗಿ ಕಳೆದ ಎರಡು ಋತುವಿನಲ್ಲಿಯೂ ತಂಡವನ್ನು ಮುನ್ನೆಡೆಸಿದ್ದರು. ಆದರೂ ಕೂಡ ಆರ್‌ಸಿಬಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ವಿರಾಟ್‌ ಕೊಹ್ಲಿ ತಂಡದ ಭಾಗವಾಗಿದ್ದರು.

ವಿರಾಟ್‌ ಕೊಹ್ಲಿ ಹೇಳಿದ್ದೇನು ?
ಆರ್‌ಸಿಬಿ ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ವಿರಾಟ್‌ ಕೊಹ್ಲಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ನಿಜ ಹೇಳಬೇಕೆಂದರೆ, ನಾನು ತಂಡವನ್ನು ತೊರೆಯುವ ಬಗ್ಗೆ ಯೋಚನೆ ಮಾಡಿದ್ದೇ. ಹಲವು ಪ್ರಾಂಚೈಸಿಗಳು ನನ್ನನ್ನು ಸಂಪರ್ಕ ಮಾಡಿದ್ದವು. ಆದರೆ ಕೊನೆಯಗಳಿಗೆಯಲ್ಲಿ ಮನಸ್ಸು ಬದಲಾಯಿಸಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : IPL 2024 RCB Team : ಐಪಿಎಲ್‌ ಹರಾಜು, ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಆರ್‌ಸಿಬಿ : ಯಾರು ಔಟ್‌ ? ಯಾರು ಇನ್‌ ?

ಯಾವುದೇ ತಂಡಗಳು ನನ್ನ ಮೇಲೆ ನಂಬಿಕೆ ಇಡದೇ ಇರುವ ಹೊತ್ತಿನಲ್ಲಿಯೇ ಆರ್‌ಸಿಬಿ ತಂಡ ತನ್ನ ಮೇಲೆ ನಂಬಿ ಇಟ್ಟು ನಾಯಕತ್ವದ ಜವಾಬ್ದಾರಿಯನ್ನು ನೀಡಿತ್ತು. ತಾನು ಕೂಡ ಆರ್‌ಸಿಬಿ ಮೇಲೆ ಇಟ್ಟಿದ್ದ ನಂಬಿಕೆಯ ಕುರಿತು ಮಾತನಾಡಿದ್ದಾರೆ. ನನಗೆ ಅಂತಿಮವಾಗಿ ಪತ್ನಿ ಅನುಷ್ಕಾ ಶರ್ಮಾ ಅವರ ಅಭಿಪ್ರಾಯ ಮುಖ್ಯವಾಗಿತ್ತು. ಆದರೆ ಬೇರೆ ಅವರ ಅಭಿಪ್ರಾಯದ ಕುರಿತು ತಲೆ ಕೆಡಿಸಿಕೊಳ್ಳಲಾರೆ ಎಂದಿದ್ದಾರೆ.

IPL 2024 RCB Team Virat Kohli Plan To Leave Royal Chanllengers Bangalore
Image Credit to Original Source

IPL 2024 ರಲ್ಲಿ ಆರ್‌ಸಿಬಿ ಪರ ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ ಮುಂದಿನ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಲಿದ್ದಾರೆ. ಡಿಸೆಂಬರ್‌ ೧೯ರಂದು ಐಪಿಎಲ್‌ ಹರಾಜು ಪ್ರಕ್ರಿಯೆ ನಡೆಯಲಿದೆ. ಆರ್‌ಸಿಬಿ ತಂಡ ಹಜಲ್‌ವುಡ್‌ ಅವರನ್ನು ಬಿಡುಗಡೆ ಮಾಡಿದ್ದು, ಕ್ಯಾಮರೂನ್‌ ಗ್ರೀನ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ ಸೇರಿದ ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ

ಅಷ್ಟೇ ಅಲ್ಲ ಆರ್‌ಸಿಬಿ ತಂಡ ಕೈಬಿಟ್ಟಿರುವ ಆಟಗಾರರ ಪಟ್ಟಿಯಲ್ಲಿ ಹರ್ಷಲ್‌ ಪಟೇಲ್‌, ವನಿಂದು ಹಸರಂಗ ಕೂಡ ಸೇರ್ಪಡೆಯಾಗಿದ್ದಾರೆ. ಬೌಲಿಂಗ್ ಆಲ್-ರೌಂಡರ್‌ಗಳಾದ ಡೇವಿಡ್ ವಿಲ್ಲಿ ಮತ್ತು ವೇಯ್ನ್ ಪಾರ್ನೆಲ್, ನ್ಯೂಜಿಲೆಂಡ್ ಜೋಡಿಯಾದ ಫಿನ್ ಅಲೆನ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಅವರನ್ನು ಕೈಬಿಟ್ಟಿದೆ. ಭಾರತದ ಆಯ್ಕೆಗಳಾದ ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್ ಮತ್ತು ಕೇದಾರ್ ಜಾಧವ್ ಅವರನ್ನೂ ಬಿಡುಗಡೆ ಮಾಡಲಾಗಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ :  ಫಾಫ್ ಡು ಪ್ಲೆಸಿಸ್ (ಸಿ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಆಕಾಶ್ ದೀಪ್ ಮೊಹಮ್ಮದ್ ಸಿರಾಜ್, ರೀಸ್ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ಕುಮಾರ್.

IPL 2024 RCB Team Virat Kohli Plan To Leave Royal Chanllengers Bangalore

Comments are closed.