ravindra jadeja : ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ರವೀಂದ್ರ ಜಡೇಜಾ

ravindra jadeja :ಐಪಿಎಲ್​ ಎಂದಾಕ್ಷಣ ನೆನಪಾಗುವ ಹೆಸರಾಂತ ತಂಡಗಳ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಕೂಡ ಹೌದು. ಆದರೆ ಈ ಬಾರಿಯ ಸೀಸನ್​ನಲ್ಲಿ ಮಾತ್ರ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಭಾರೀ ಹಿನ್ನೆಡೆಯನ್ನು ಅನುಭವಿಸಿತ್ತು. ಈ ಬಾರಿ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್​ಕೆ ಹೀನಾಯ ಪ್ರದರ್ಶನ ನೀಡಿದ ಬಳಿಕ ತಮ್ಮ ನಾಯಕತ್ವವನ್ನು ಜಡಾಜಾ ಪುನಃ ಧೋನಿಗೆ ಹಿಂದಿರುಗಿಸಿದ್ದರು. ಆದರೆ ಇದೀಗ ಸಿಕ್ಕಿರುವ ಮಾಹಿತಿಯ ಪ್ರಕಾರ ಸಿಎಸ್​ಕೆ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ 2021 ಹಾಗೂ 2022ರ ಐಪಿಎಲ್​ ಟೂರ್ನಿಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಿಂದ ಡಿಲೀಟ್​ ಮಾಡಿದ್ದಾರೆ. ಇದು ಸಾಕಷ್ಟು ಅನುಮಾಗಳಿಗೆ ದಾರಿ ಮಾಡಿಕೊಟ್ಟಿದೆ.


ಐಪಿಎಲ್​ 15ನೇ ಆವೃತ್ತಿ ಆರಂಭಗೊಳ್ಳಲು ಇನ್ನೇನು 2 ದಿನ ಬಾಕಿ ಇದ್ದಾಗ ಧೋನಿ ತಂಡದ ನಾಯಕತ್ವದಿಂದ ಕೆಳಗೆ ಇಳಿದಿದ್ದರು. ಹೀಗಾಗಿ ಸಿಎಸ್​ಕೆ ನಾಯಕತ್ವವನ್ನು ರವೀಂದ್ರ ಜಡೇಜಾರಿಗೆ ನೀಡಲಾಗಿತ್ತು. ಆದರೆ ಇದಾದ ಬಳಿಕ ಸಿಎಸ್​ಕೆ ಅತ್ಯಂತ ಹೀನಾಯವಾಗಿ ಪ್ರದರ್ಶನವನ್ನು ನೀಡಿತ್ತು. ಆಡಿದ ಎಂಟು ಪಂದ್ಯಗಳಲ್ಲಿ ಆರು ಪಂದ್ಯಗಳಲ್ಲಿ ಸಿಎಸ್​ಕೆ ಸೋಲನ್ನು ಕಂಡಿತ್ತು. ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತ ರವೀಂದ್ರ ಜಡೇಜಾ ಪುನಃ ಸಿಎಸ್​ಕೆ ತಂಡದ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಿದ್ದರು. ಇದಾದ ಬಳಿಕ ಗಾಯದ ಕಾರಣಗಳಿಂದಾಗಿ ಜಡೇಜಾ ತಂಡದಿಂದಲೂ ಹೊರಗುಳಿದಿದ್ದರು. ಸಿಎಸ್​ಕೆ ತಂಡವೇ ಜಡೇಜಾರನ್ನು ತಂಡದಿಂದ ಹೊರಗಿಟ್ಟಿದೆ ಎಂಬ ಗುಮಾನಿ ಕೂಡ ಎಲ್ಲೆಡೆ ಹಬ್ಬಿತ್ತು .

ಇದಾದ ಬಳಿಕ ರವೀಂದ್ರ ಜಡೇಜಾರನ್ನು ಮೇ ತಿಂಗಳಲ್ಲಿ ಸಿಎಸ್​ಕೆ ತಂಡದ ಇನ್​ಸ್ಟಾಗ್ರಾಂ ಖಾತೆಯಿಂದ ಅನ್​ಫಾಲೋ ಮಾಡಲಾಗಿತ್ತು, 10 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲೇ ಇರುವ ಜಡೇಜಾರನ್ನೇ ಅನ್​ಫಾಲೋ ಮಾಡಿದ ಸಿಎಸ್​ಕೆ ನಡೆ ಭಾರೀ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದಾದ ಬಳಿಕ ಸಿಎಸ್​ಕೆ ಸಿಇಓ ಸೋಶಿಯಲ್​ ಮೀಡಿಯಾ ಬಗ್ಗೆ ಗೊತ್ತಿಲ್ಲ. ಆದರೆ ಜಡೇಜಾ ಸಿಎಸ್​ಕೆ ತಂಡದಲ್ಲಿಯೇ ಮುಂದುವರಿಯಲಿದ್ದಾರೆ ಎಂದು ಹೇಳಿದ್ದರು.


ಇದಾದ ನಂತರ ಮೊನ್ನೆ ಮೊನ್ನೆ ನಡೆದ ಧೋನಿ ಬರ್ತಡೇಗೂ ಜಡೇಜಾ ಶುಭಾಶಯ ತಿಳಿಸಿರಲಿಲ್ಲ. ಇದರ ಬೆನ್ನಲ್ಲೇ ಇದೀಗ ಸಿಎಸ್​ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನೂ ಜಡೇಜಾ ಡಿಲೀಟ್​ ಮಾಡಿದ್ದಾರೆ. ಇವೆಲ್ಲವೂ ಜಡೇಜಾ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಡುವೆ ಏನೋ ಸರಿ ಎಂಬುದನ್ನು ಬಿಂಬಿಸುತ್ತಿರೋದಂತೂ ಸತ್ಯ.

ಇದನ್ನು ಓದಿ : elon musk : ಟ್ವಿಟರ್​ ಖರೀದಿಯಿಂದ ಹಿಂದೆ ಸರಿದ ಎಲಾನ್​ ಮಸ್ಕ್​ : ಕಾನೂನು ಸಮರಕ್ಕೆ ಮುಂದಾದ ಟ್ವಿಟರ್​​

ಇದನ್ನೂ ಓದಿ : Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ

ravindra jadeja deletes posts related to csk in instagram

Comments are closed.