ಮುಂಬೈ ಇಂಡಿಯನ್ಸ್‌ ಗೆಲುವಿಗೆ ಆರ್‌ಸಿಬಿ ಫ್ಯಾನ್ಸ್‌ ಪ್ರಾರ್ಥನೆ : ಏನಿದು ಐಪಿಎಲ್‌ ಲೆಕ್ಕಾಚಾರ

ಮುಂಬೈ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಂತಿಮ ಘಟ್ಟ ತಲುಪಿದೆ. ಈಗಾಗಲೇ ಗುಜರಾತ್‌ ಟೈಟಾನ್ಸ್‌ ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡಗಳು ಪ್ಲೇ ಆಫ್‌ ಪ್ರವೇಶಿಸಿವೆ. ರಾಜಸ್ಥಾನ ರಾಯಲ್ಸ್‌ ಕೂಡ ಪ್ಲೇ ಆಫ್‌ಗೆ ಎಂಟ್ರಿಯಾಗೋದು ಬಹುತೇಕ ಖಚಿತ. ಆದ್ರೀಗ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ಲೇ ಆಫ್‌ ಪ್ರವೇಶಕ್ಕೆ ಇನ್ನೂ ಅವಕಾಶವಿದೆ. ಹೀಗಾಗಿಯೇ ಮುಂಬೈ ಇಂಡಿಯನ್ಸ್‌ ಗೆಲುವಿಗಾಗಿ ಆರ್‌ಸಿಬಿ ಫ್ಯಾನ್ಸ್‌ (RCB fans Pray Mumbai Indians victory ) ಪ್ರಾರ್ಥಿಸುತ್ತಿದ್ದಾರೆ. ಏನಿದು ಲೆಕ್ಕಾಚಾರ ಅಂದ್ರಾ ಹಾಗಾದ್ರೆ ಈ ಸ್ಟೋರಿ ಓದಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್‌ ಪಂದ್ಯಾವಳಿಯಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಗುಜರಾತ್‌ ತಂಡದ ವಿರುದ್ದ ಆಡಲಿದೆ. ಈ ಪಂದ್ಯವನ್ನು ಗೆದ್ದರೆ ಪ್ಲೇ ಆಫ್‌ ಪ್ರವೇಶಕ್ಕೆ ಅವಕಾಶವನ್ನು ಪಡೆಯಲಿದೆ. ಆದರೆ ಅದು ಖಚಿತವಾಗ ಆಗಬೇಕಾದ್ರೆ ನಾಳೆ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ನಡುವಿನ ಪಂದ್ಯ ನಿರ್ಣಾಯಕವಾಗಲಿದೆ. ಒಂದೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ ಭರ್ಜರಿ ಗೆಲುವನ್ನು ದಾಖಲಿಸಿದ್ರೆ ಡೆಲ್ಲಿ ಕ್ಯಾಪಿಟಲ್ಸ್‌ ಪ್ಲೇ ಆಫ್‌ ನಿಂದ ಹೊರ ಹೋಗುವುದು ಖಚಿತವಾಗಲಿದೆ.

ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಈ ಬಾರಿ ಒಟ್ಟು 13 ಪಂದ್ಯಗಳನ್ನು ಆಡಿದ್ದು 7 ಪಂದ್ಯಗಳಲ್ಲಿ ಜಯಿಸಿದ್ದು, 14 ಅಂಕಗಳನ್ನು ಕಲೆ ಹಾಕಿದೆ. ಆದರೆ ರನ್‌ ರೇಟ್‌ 0.322 ಇರುವುದು ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆಯಲು ಇಂದಿನ ಪಂದ್ಯದಲ್ಲಿ ದೊಡ್ಡ ಮಟ್ಟದ ಗೆಲುವು ಆರ್‌ಸಿಬಿಗೆ ಅನಿವಾರ್ಯ. ಡೆಲ್ಲಿ ಕ್ಯಾಪಿಟಲ್ಸ್‌ ತಂಡ 13 ಪಂದ್ಯಗಳನ್ನು ಆಡಿದ್ದು 7 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ರನ್‌ ರೇಟ್‌ +0.255 ಇದೆ. ಒಂದೊಮ್ಮೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮುಂಬೈ ವಿರುದ್ದ ಗೆಲುವು ದಾಖಲಿಸಿದ್ರೆ ಪ್ಲೇ ಆಫ್‌ ಪ್ರವೇಶ ಪಡೆಯೋದು ಖಚಿತ.

ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿಯ ಐಪಿಎಲ್‌ನಿಂದ ಹೊರ ಬಿದ್ದಿದೆ. ಆಡಿದ 13 ಪಂದ್ಯಗಳ ಪೈಕಿ ಕೇವಲ 3 ಪಂದ್ಯಗಳನ್ನು ಮಾತ್ರವೇ ಜಯಿಸಿದೆ. ಹೀಗಾಗಿ ಅಂತಿಮ ಪಂದ್ಯವನ್ನಾದ್ರೂ ಗೆಲ್ಲುವ ತುಡಿತದಲ್ಲಿದೆ ರೋಹಿತ್‌ ಶರ್ಮಾ ಪಡೆ. ಜೊತೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ನಾಲ್ಕು ಪಂದ್ಯಗಳಲ್ಲಿ ಜಯ ಕಂಡಿದೆ. ಇನ್ನು ಸನ್‌ರೈಸಸ್‌ ಹೈದ್ರಾಬಾದ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳು ಬಹುತೇಕ ಪ್ಲೇ ಆಫ್‌ ನಿಂದ ಹೊರ ಬಿದ್ದಿವೆ. ಆದರೆ ಎರಡೂ ತಂಡಗಳು ಅಂತಿಮ ಪಂದ್ಯವನ್ನು ಹೆಚ್ಚು ಅಂತರದಿಂದ ಗೆಲುವು ಸಾಧಿಸಿದ್ರೆ, ಇನ್ನೊಂದೆಡೆಯಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಸೋಲನ್ನು ಕಂಡ್ರೆ ಪ್ಲೇ ಆಫ್‌ ಗೆ ಅವಕಾಶವಿದೆ. ಒಟ್ಟಿನಲ್ಲಿ ಪ್ಲೇ ಆಫ್‌ ಪ್ರವೇಶಕ್ಕಾಗಿ ನಾಲ್ಕು ತಂಡಗಳು ಹೋರಾಟ ನಡೆಸುತ್ತಿವೆ.

ಇದನ್ನೂ ಓದಿ : VVS Laxman Team India coach : ಟೀಮ್ ಇಂಡಿಯಾಕ್ಕೆ ವಿ.ವಿ.ಎಸ್ ಲಕ್ಷ್ಮಣ್ ಕೋಚ್‌

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ನಾಯಕ

RCB fans Pray Mumbai Indians victory in IPL 2022

Comments are closed.