RCB vs GT : ವಿರಾಟ್‌ ಕೊಹ್ಲಿ ಸಿಡಿಲಬ್ಬರದ ಶತಕ, ಗುಜರಾತ್‌ ಗೆ 198 ರನ್‌ ಸವಾಲು

ಬೆಂಗಳೂರು : (RCB vs GT) ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಅಂತಿಮ ಲೀಗ್‌ (IPL 2023) ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸವಾಲಿನ ಮೊತ್ತ ಪೇರಿಸಿದೆ. ವಿರಾಟ್‌ ಕೊಹ್ಲಿ (Virat Kohli) ಅವರ ಅಬ್ಬರದ ಶತಕದ ನೆರವಿನಿಂದ ಬೆಂಗಳೂರು ತಂಡ ಗುಜರಾತ್‌ ಟೈಟಾನ್ಸ್‌ಗೆ ಬರೋಬ್ಬರಿ 198 ರನ್‌ ಸವಾಲು ನೀಡಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟಾನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ನಡುವಿನ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಗಿತ್ತು. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕಣಕ್ಕೆ ಇಳಿದಿದ್ದ ವಿರಾಟ್‌ ಕೊಹ್ಲಿ ಹಾಗೂ ಫಾಪ್‌ ಡೂಪ್ಲಸಿಸ್‌ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 67 ರನ್‌ ಗಳಿಸಿತ್ತು. 28 ರನ್‌ ಗಳಿಸಿದ ಡುಪ್ಲಸಿಸ್‌ ನೂರ್‌ ಅಹಮದ್‌ಗೆ ವಿಕೆಟ್‌ ಒಪ್ಪಿಸಿದ್ರೆ, ನಂತರ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಆಟ ಕೇವಲ 11 ರನ್‌ಗಳಿಗೆ ಸೀಮಿತವಾಯ್ತು. ಯುವ ಆಟಗಾರ ಮಹಿಪಾಲ್‌ 3 ಎಸೆತ ಎದುರಿಸಿ ಕೇವಲ ಒಂದು ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದಾರೆ.

ಇದನ್ನೂ ಓದಿ :IPL 2023 : ಐಪಿಎಲ್‌ಗೆ ಮಹೇಂದ್ರ ಸಿಂಗ್‌ ಧೋನಿ ಗುಡ್‌ಬೈ

ಒಂದೆಡೆಯಲ್ಲಿ ವಿಕೆಟ್‌ ಉರುಳುತ್ತಿದ್ದರೂ ಕೂಡ ಕೆಚ್ಚೆದೆಯ ಆಟವನ್ನು ಪ್ರದರ್ಶಿಸಿದ ವಿರಾಟ್‌ ಕೊಹ್ಲಿ (Virat Kohli) 61ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 101ರನ್‌ ಗಳಿಸಿದ್ದಾರೆ. ಇನ್ನು ಮೈಕಲ್‌ ಬ್ರೆಸ್‌ವೆಲ್‌ 16 ಎಸೆತಗಳಲ್ಲಿ 26 ರನ್‌ ಗಳಿಸಿದ್ರೆ, ಅನುಜ್‌ ರಾವತ್‌ 15 ಎಸೆತಗಳಲ್ಲಿ 23 ರನ್‌ ಸಿಡಿಸಿ ತಂಡ ಉತ್ತಮ ಮೊತ್ತ ನೆರವೇರುವಲ್ಲಿ ಸಹಕಾರ ನೀಡಿದ್ರು. ಆದರೆ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಮೊದಲ ಎಸೆತಗಳಲ್ಲಿಯೇ ಯಶ್‌ ದುಲ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.

ಗುಜರಾತ್‌ ತಂಡದ (RCB vs GT) ಪರ ನೂರ್‌ ಅಹಮದ್‌ 3 , ಮೊಹಮದ್‌ ಶೆಮಿ, ಯಶ್‌ ದುಲ್‌, ರಶೀದ್‌ ಖಾನ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಸವಾಲಿನ ಮೊತ್ತವನ್ನು ಗುಜರಾತ್‌ ಟೈಟಾನ್ಸ್‌ ತಂಡ ಬೆನ್ನತ್ತಿ ಗೆಲುವಿನ ದಡ ಸೇರಿದ್ರೆ ಆರ್‌ಸಿಬಿ ತಂಡ ಪ್ಲೆ ಆಫ್‌ ನಿಂದ ಹೊರ ಬೀಳಲಿದೆ. ಒಂದೊಮ್ಮೆ ಆರ್‌ಸಿಬಿ ಗೆಲುವು ದಾಖಲಿಸಿದ್ರೆ ಪ್ಲೇ ಆಫ್‌ ಹಂತಕ್ಕೆ ಪ್ರವೇಶ ಪಡೆಯಲಿದ್ದು, ಮುಂಬೈ ಐಪಿಎಲ್‌ ಪ್ರಸಕ್ತ ಋತುನಿನಿಂದ ಹೊರ ಬೀಳಲಿದೆ.

ಇದನ್ನೂ ಓದಿ :Commentators in RCB team: ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಆಡುತ್ತಿದ್ದಾರೆ ಇಬ್ಬರು ಕಾಮೆಂಟೇಟರ್ಸ್ !

Comments are closed.