Rishabh Pant health update: ಹೇಗಿದ್ದಾರೆ ಗೊತ್ತಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಹೀರೋ ರಿಷಭ್ ಪಂತ್?

ಮುಂಬೈ: Rishabh Pant health update : ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ( Border-Gavaskar test series) ಮೊದಲ ಪಂದ್ಯದಲ್ಲಿ ಭಾರತ ಗೆಲುವಿನ ಹಾದಿಯಲ್ಲಿದ್ರೆ, ಅತ್ತ ಕಳೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಹೀರೋ ರಿಷಭ್ ಪಂತ್ (Rishabh Pant) ತಮ್ಮ ಆರೋಗ್ಯದ ಕುರಿತಾಗಿ ಮಹತ್ವದ ಅಪ್’ಡೇಟ್ ಕೊಟ್ಟಿದ್ದಾರೆ. ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ 2021-22ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ಟೆಸ್ಟ್ ಸರಣಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರಿಷಭ್ ಪಂತ್ ಸಾಹಸದಿಂದ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1ರ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಆದರೆ ಕಳೆದ ವರ್ಷಾಂತ್ಯದಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಪ್ರಸಕ್ತ ಸಾಲಿನ ಬಾರ್ಡರ್ -ಗವಾಸ್ಕರ್ ಟೆಸ್ಟ್ ಸರಣಿಗೆ ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಬಲಗಾಲಿನ ಗಾಯಕ್ಕೆ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪಂತ್, ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ರಿಷಬ್ ಪಂತ್, ವಾಕರ್ ಮೂಲಕ ನಡೆಯುತ್ತಿರುವ ಫೋಟೋವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ರಿಷಭ್ ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ಬೆಳಗ್ಗೆ 5.30ಕ್ಕೆ ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ನಿದ್ದೆಯ ಮಂಪರಿನಲ್ಲಿ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಅಪಘಾತದಲ್ಲಿ ಪ್ರಾಣ ಉಳಿದದ್ದೇ ಅದೃಷ್ಟ. ಅಪಘಾತವಾಗುತ್ತಿದ್ದಂತೆ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಟ್ರಕ್ ಚಾಲಕರೊಬ್ಬರು ಪಂತ್ ಅವರನ್ನು ಉರಿಯುತ್ತಿದ್ದ ಕಾರಿನಿಂದ ಹೊರಗೆಳೆದು ಪ್ರಾಣ ಕಾಪಾಡಿದ್ದರು. ನಂತರ ಆಸ್ಪತ್ರೆಗೆ ಸೇರಿಸಿದ್ದರು. ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಾಗಿದ್ದ ರಿಷಭ್ ಪಂತ್ ಅವರನ್ನು ನಂತರ ಬಿಸಿಸಿಐ ಮುಂಬೈನ ಕೊಕಿಲಾ ಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿತ್ತು.

ಇದನ್ನೂ ಓದಿ : Ranji Trophy semifinal : ಚಿನ್ನಸ್ವಾಮಿಯಲ್ಲಿ ಸೌರಾಷ್ಟ್ರ ಸವಾರಿ, ಕರ್ನಾಟಕದ ಫೈನಲ್ ಕನಸು ಬಹುತೇಕ ಭಗ್ನ

ಇದನ್ನೂ ಓದಿ : Ball Tampering : ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್: ರವೀಂದ್ರ ಜಡೇಜಾ ಮಾಡಿದ್ದೇನು ? ಇಲ್ಲಿದೆ ಸಂಪೂರ್ಣ ವಿವರ

Rishabh Pant health update Border-Gavaskar Trophy Test hero

Comments are closed.