Border-Gavaskar test series : ರೋಹಿತ್ ಸೆಂಚುರಿ, ಜಡೇಜಾ-ಅಕ್ಷರ್ ಭರ್ಜರಿ ಬ್ಯಾಟಿಂಗ್; ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ

ಮುಂಬೈ: (Ravindra Jadeja Akshara Patel) ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) ಮೊದಲ ಪಂದ್ಯದಲ್ಲಿ ಭಾರತದ 2ನೇ ದಿನವೇ ಗೆಲುವಿನ ಹಾದಿಯಲ್ಲಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗುರುವಾರ ಆರಂಭಗೊಂಡಿದ್ದ ಪ್ರಥಮ ಟೆಸ್ಟ್ (India Vs Australia test series) ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ ಕೇವಲ 177 ರನ್ನಿಗೆ ಆಲೌಟಾಗಿತ್ತು. ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಭಾರತ, ಮೊದಲ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 77 ರನ್ ಗಳಿಸಿತ್ತು. 2ನೇ ದಿನ ಆಟ ಮುಂದುವರಿಸಿದ ಟೀಮ್ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ( Rohit Sharma century) ಶತಕದೊಂದಿಗೆ ಆಸರೆಯಾದರು.

ಬ್ಯಾಟಿಂಗ್’ಗೆ ಕಷ್ಟವಾಗಿದ್ದ ಪಿಚ್’ನಲ್ಲಿ ದಿಟ್ಟ ಆಟವಾಡಿದ ರೋಹಿತ್ ಶರ್ಮಾ ಟೆಸ್ಟ್ ವೃತ್ತಿಜೀವನದಲ್ಲಿ 9ನೇ ಶತಕದೊಂದಿಗೆ ಮಿಂಚಿದರು. ಚೇತೇಶ್ವರ್ ಪೂಜಾರ(7) ಮತ್ತು ವಿರಾಟ್ ಕೊಹ್ಲಿ(12) ವೈಫಲ್ಯದ ಮಧ್ಯೆ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರೋಹಿತ್ 212 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 120 ರನ್ ಗಳಿಸಿ ಔಟಾದರು.

ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್ ಯಾದವ್(8) ಮತ್ತು ಕೆ.ಎಸ್ ಭರತ್(8) ಚೊಚ್ಚಲ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ವಿಫಲರಾದರು. ಆದರೆ ಕೆಳ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್’ಮನ್’ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅಜೇಯ ಅರ್ಧಶತಕಗಳೊಂದಿಗೆ ತಂಡಕ್ಕೆ ಆಸರೆಯಾದರು. ಬೌಲಿಂಗ್’ನಲ್ಲಿ ಮಿಂಚಿ 5 ವಿಕೆಟ್ ಪಡೆದಿದ್ದ ಜಡೇಜಾ ಬ್ಯಾಟಿಂಗ್’ನಲ್ಲೂ ಮಿಂಚಿ ಅಜೇಯ 66 ರನ್ ಗಳಿಸಿದ್ರೆ, ಅಕ್ಷರ್ ಪಟೇಲ್ ಅಜೇಯ 52 ರನ್’ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. 2ನೇ ದಿನದಂತ್ಯಕ್ಕೆ ಭಾರತ 7 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದ್ದು, 144 ರನ್’ಗಳ ಮುನ್ನಡೆಯಲ್ಲಿದೆ. ಆಸ್ಟ್ರೇಲಿಯಾ ಪರ ಪದಾರ್ಪಣೆಯ ಪಂದ್ಯದಲ್ಲೇ ಮಿಂಚಿದ ಯುವ ಆಫ್’ಸ್ಪಿನ್ನರ್ ಟಾಡ್ ಮರ್ಫಿ 82 ರನ್ನಗೆ 5 ವಿಕೆಟ್ ಉರುಳಿಸಿದರು.

ಇದನ್ನೂ ಓದಿ : Rishabh Pant health update: ಹೇಗಿದ್ದಾರೆ ಗೊತ್ತಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಹೀರೋ ರಿಷಭ್ ಪಂತ್?

ಇದನ್ನೂ ಓದಿ : Ranji Trophy semifinal : ಚಿನ್ನಸ್ವಾಮಿಯಲ್ಲಿ ಸೌರಾಷ್ಟ್ರ ಸವಾರಿ, ಕರ್ನಾಟಕದ ಫೈನಲ್ ಕನಸು ಬಹುತೇಕ ಭಗ್ನ

Rohit Sharma century Ravindra Jadeja Akshara Patel batting brilliantly Team India on the way to victory

Comments are closed.