Rishabh Pant is out of danger: ಮೆದುಳು, ಬೆನ್ನು ಹುರಿ ಸೇಫ್, ರಿಷಭ್ ಪಂತ್ ಔಟ್ ಆಫ್ ಡೇಂಜರ್ : ಇಂದು ನಿರ್ಧಾರವಾಗಲಿದೆ ಕ್ರಿಕೆಟ್ ಭವಿಷ್ಯ

ಡೆಹ್ರಾಡೂನ್: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ದೊಡ್ಡ ಕಂಟಕದಿಂದ ಪಾರಾಗಿದ್ದಾರೆ (Rishabh Pant car accident).ರಿಷಭ್ ಪಂತ್ ಅವರ ಮೆದುಳು ಮತ್ತು ಬೆನ್ನು ಹುರಿಯ MRI ಸ್ಕ್ಯಾನ್ ನಡೆದಿದ್ದು, ನಾರ್ಮಲ್ ರಿಸಲ್ಟ್ ಬಂದಿದ್ದು (Rishabh Pant is out of danger) ಯಾವುದೇ ಅಪಾಯ ಕಂಡು ಬಂದಿಲ್ಲ. ಅಪಘಾತದಲ್ಲಿ ರಿಷಭ್ ಪಂತ್ ಅವರ ಮುಖದ ಮೇಲೆ ಸೀಳಿದ ಗಾಯಗಳಾಗಿದ್ದು, ಪ್ಲಾಸ್ಟಿಕ್ ಸರ್ಜರಿ ನಡೆದಿದೆ.

ಮೆದುಳು ಮತ್ತು ಬೆನ್ನು ಹುರಿಗೆ (brain and spinal cord) ಯಾವುದೇ ಹಾನಿಯಾಗದೇ ಇರುವುದು ರಿಷಭ್ ಪಂತ್ ಮತ್ತು ಅವರ ಅಭಿಮಾನಿಗಳಿಗೆ ಶುಭ ಸುದ್ದಿ. ಆದರೆ ಪಂತ್ ಅವರ ಕ್ರಿಕೆಟ್ ಭವಿಷ್ಯ ನಿರ್ಧಾರವಾಗಲಿರೋದು ಶನಿವಾರ. ಅಪಘಾತದಲ್ಲಿ ಪಂತ್ ಅವರ ಮೊಣಕಾಲು ಮತ್ತು ಪಾದಗಳಿಗೆ ಗಾಯವಾಗಿದ್ದು, ಇದರ MRI ಸ್ಕ್ಯಾನ್ ಇಂದು ನಡೆಯಲಿದೆ. ಮೊಣಕಾಲು ಮತ್ತು ಪಾದದ ಭಾಗದಲ್ಲಿ ಗಂಭೀರ ಪ್ರಮಾಣದ ಗಾಯವಾಗದೇ ಇದ್ದರೆ ಇನು ಆರು ತಿಂಗಳಲ್ಲಿ ರಿಷಬ್ ಪಂತ್ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ. ಒಂದು ವೇಳೆ ಈ ಭಾಗದಲ್ಲಿ ಮೂಳೆ ಮುರಿತವಾಗಿದ್ದರೆ, ಚೇತರಿಸಿಕೊಳ್ಳಲು ಕನಿಷ್ಠ ಒಂದು ವರ್ಷ ಹಿಡಿಯಲಿದೆ.

25 ವರ್ಷದ ರಿಷಭ್ ಪಂತ್ ಶುಕ್ರವಾರ ಬೆಳಗ್ಗೆ ಐದೂವರೆಗೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ರಸ್ತೆ ಅಫಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಹೈಸ್ಪೀಡ್’ನಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರಿಷಭ್ ಪಂತ್ ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಬೆಳ್ಳಂಬೆಳಗ್ಗೆ ಡೆಹ್ರಾಡೂನ್’ನಲ್ಲಿ ತಾಯಿ ಮತ್ತು ತಂಗಿಯನ್ನು ಭೇಟಿಯಾಗಲು ದೆಹಲಿಯಿಂದ ಡೆಹ್ರಾಡೂನ್’ಗೆ ಹೊರಟಿದ್ದ ರಿಷಭ್ ಪಂತ್, ಸ್ವತಃ ತಾವೇ ಕಾರು ಚಲಾಯಿಸುತ್ತಿದ್ದರು. ಮುಂಜಾನೆಯಾಗಿದ್ದ ಕಾರಣ ನಿದ್ದೆಯ ಮಂಪರಿನಲ್ಲಿದ್ದ ಪಂತ್ ಎಚ್ಚರ ತಪ್ಪಿದ ಕಾರಣ ಕಾರು ಡಿವೈಡರ್’ಗೆ ಅಪ್ಪಳಿಸಿತ್ತು.

ಇದನ್ನೂ ಓದಿ : Rishabh Pant deadly accident : ಭೀಕರ ಅಪಘಾತದಲ್ಲಿ ರಿಷಭ್ ಪಂತ್ ಬದುಕುಳಿದದ್ದೇ ಹೆಚ್ಚು, ಡೆಡ್ಲಿ ಆ್ಯಕ್ಸಿಡೆಂಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಇದನ್ನೂ ಓದಿ : Rishabh Pant car accident : ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್‌ನನ್ನು ಹೊರಗೆಳೆದು ಪ್ರಾಣ ಉಳಿಸಿದ್ದು ಬಸ್ ಡ್ರೈವರ್

ಇದನ್ನೂ ಓದಿ : Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

ಅಪಘಾತ ನಡೆದ ಕೂಡಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ರಿಷಭ್ ಪಂತ್ ಸುಟ್ಟು ಕರಕಲಾಗುವ ಮೊದಲೇ ಹರ್ಯಾಣದ ಟ್ರಕ್ ಡ್ರೈವರ್ ಒಬ್ಬರು ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪ್ರಾಣ ಉಳಿಸಿದ್ದಾರೆ. ಪಂತ್ ಜೀವ ಉಳಿಸಿದ ಆ ಡ್ರೈವರ್ ಹೆಸರು ಸುಶೀಲ್ ಕುಮಾರ್. ಪಂತ್ ಅವರನ್ನು ಉರಿಯುತ್ತಿದ್ದ ಕಾರಿನಿಂದ ಹೊರಗೆಳೆದ ಸುಶೀಲ್ ಕುಮಾರ್, ಪಂತ್ ದೇಹಕ್ಕೆ ಬೆಡ್ ಶೀಟ್ ಸುತ್ತಿ ಬೆಂಕಿ ಆರಿಸಿದ್ದಾರೆ. ನಂತರ ಆಂಬ್ಯುಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ. ಸುಶೀಲ್ ಕುಮಾರ್ ಅವರ ಸಾಹಸಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಸುಶೀಲ್ ಜೀ, ನಿಮ್ಮ ನಿಸ್ವಾರ್ಥ ಸೇವೆಗಾಗಿ ನಾವು ನಿಮಗೆ ಋಣಿಯಾಗಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.

Rishabh Pant is out of danger: brain, spinal cord safe, Rishabh Pant out of danger: the future of cricket will be decided today

Comments are closed.