Pippali Benefits : ಮಸಾಲಾ ಪದಾರ್ಥಗಳಲ್ಲಿ ಒಂದಾದ ಪಿಪ್ಪಲಿಯ ಪ್ರಯೋಜನಗಳು ನಿಮಗೆ ಗೊತ್ತಾ…

ಭಾರತ ಮಸಾಲಾ ಪದಾರ್ಥ (Spices) ಗಳಿಗೆ ಹೆಸರುವಾಸಿಯಾದ ದೇಶ. ಇಲ್ಲಿನ ಅಡುಗೆಗಳಲ್ಲಿ ಆರೋಗ್ಯಕ್ಕೆ ಉತ್ತಮವಾದ ಮಸಾಲಾ ಪದಾರ್ಥಗಳನ್ನು ಉಪಯೋಗಿಸಲಾಗುತ್ತದೆ. ಬೇರೆ ಬೇರೆ ರುಚಿ ಮತ್ತು ಪರಿಮಳ ನೀಡುವ ಇವುಗಳಿಂದ ಬಗೆ ಬಗೆಯ ಅಡುಗೆಗಳನ್ನು ಮಾಡಿ ಸೇವಿಸುತ್ತಾರೆ. ರುಚಿಯೇ ಇಲ್ಲದ ಅಡುಗೆಗಳನ್ನು ಸ್ವಾದಿಷ್ಟವಾಗಿಸುವ ಗುಣ ಇವುಗಳಿಗಿದೆ. ಹೀಗೆ ರುಚಿಗಾಗಿ ಬಳಸುವ ಮಸಾಲೆಗಳಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ (Health Benefits). ಔಷಧೀಯ ಗುಣಗಳಿರುವ ಪಿಪ್ಪಲಿಯನ್ನು ಸಾಮಾನ್ಯವಾಗಿ ಹಿಪ್ಪಲಿ, ಪೀಪ್ಲಿ ಎಂದೆಲ್ಲಾ ಕರೆಯುತ್ತಾರೆ. ಇದರಲ್ಲಿ ಪ್ರೋಟೀನ್‌, ಆಂಟಿ–ಇನ್ಫ್ಲಮೇಟರಿ ಕೊಬ್ಬು, ಕಾರ್ಬೋಹೈಡ್ರೇಟ್‌, ವಿಟಮಿನ್‌, ಮತ್ತು ಅಮೈನೋ ಆಸಿಡ್‌ ಗಳಿರುತ್ತವೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ (Pippali Benefits). ಪಿಪ್ಪಲಿಯು ಉಷ್ಣ ಪರಿಣಾಮವನ್ನುಂಟು ಮಾಡುವ ಮಸಾಲ ಪದಾರ್ಥವಾಗಿದೆ.

  • ಚಳಿಗಾಲದಲ್ಲಿ ಶೀತ, ಕೆಮ್ಮಗಳಿದ್ದರೆ ಪಿಪ್ಪಲಿಯನ್ನು ಸೇವಿಸುವುದು ಉತ್ತಮ. ಪಿಪ್ಪಲಿಯನ್ನು ಪುಡಿ ಮಾಡಿ ಸ್ವಲ್ಪ ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಕೆಮ್ಮು ನಿವಾರಣೆಯಾಗುವುದು. ಪಿಪ್ಪಲಿಯು ಉಷ್ಣ ಪರಿಣಾಮವನ್ನುಂಟು ಮಾಡುವುದರಿಂದ ಅದನ್ನು ಮಿತಿಯಾಗಿ ಸೇವಿಸಬೇಕು.
  • ಪಿಪ್ಪಲಿಯು ಮಲಬದ್ದತೆಯನ್ನು ಹೋಗಲಾಡಿಸುತ್ತದೆ. ಪೀಪ್ಲಿಯೊಳಗಿನ ಪೋಷಕಾಂಶಗಳು ಮತ್ತು ಖನಿಜಗಳು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಬಹಳ ಪರಿಣಾಮಕಾರಿಯಾಗಿದೆ.
  • ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆ ಇದ್ದರೆ ಪಿಪ್ಪಲಿಯ ಕಷಾಯವು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ದಿನಕ್ಕೆ ಒಮ್ಮೆ ಸೇವಿಸಿದರೆ ಸಾಕು.

ಎಲ್ಲೆಲ್ಲಿ ಪಿಪ್ಪಲಿಯನ್ನು ಉಪಯೋಗ ಮಾಡಲಾಗುತ್ತದೆ?

ಸಂಶೋಧಕರ ಪ್ರಕಾರ ಪಿಪ್ಪಲಿಯ ಸಸ್ಯದಲ್ಲಿ ಕ್ಯಾನ್ಸರ್‌ ವಿರೋಧಿ ಗುಣಗಳು ಪತ್ತೆಯಾಗಿವೆ. ಪಿಪ್ಪಲಿಯಲ್ಲಿ ಕಂಡುಬರುವ ಪೈಪರ್‌ಲಾಂಗುಮೈನ್ ಎಂಬ ರಾಸಾಯನಿಕವು ಶ್ವಾಸಕೋಶ, ಸ್ತನ, ಲ್ಯುಕೇಮಿಯಾ ಮತ್ತು ಮೆದುಳಿನ ಗೆಡ್ಡೆಗಳಂತಹ ಅನೇಕ ರೀತಿಯ ಕ್ಯಾನ್ಸರ್‌ಗಳಲ್ಲಿ ಬಹಳ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಲ್ಲದೇ ಹಲ್ಲು ನೋವಿನ ಸಮಸ್ಯೆ ಇದ್ದರೆ ಪಿಪ್ಪಲಿ ಪುಡಿಗೆ ಉಪ್ಪು, ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಬೆರೆಸಿ ಹಲ್ಲು ನೋವು ಇರುವ ಜಾಗಕ್ಕೆ ಹಚ್ಚಿದರೆ ಅದರಿಂದ ಸಾಕಷ್ಟು ಪರಿಹಾರ ಸಿಗುತ್ತದೆ. ಪಿಪ್ಪಲಿಯನ್ನು ಚೂರ್ಣಗಳಲ್ಲಿ ಬಳಸಲಾಗುತ್ತದೆ. ಆದರೆ ಪಿಪ್ಪಲಿಯು ಉಷ್ಣ ಗುಣಧರ್ಮದ ಪದಾರ್ಥವಾಗಿದೆ. ಹಾಗಾಗಿ ಅದನ್ನು ಮಿತವಾಗಿ ಬಳಸಬೇಕಾಗುತ್ತದೆ.

ಇದನ್ನೂ ಓದಿ : Tulsi Seed:ತುಳಸಿ ಬೀಜದಲ್ಲಿದೆ ಅದ್ಬುತ ಶಕ್ತಿ, ನಿತ್ಯ ಸೇವನೆ ಮಾಡಿ ಹಲವು ಸಮಸ್ಯೆಯಿಂದ ದೂರವಿರಿ

ಇದನ್ನೂ ಓದಿ : Broccoli Health Tips :ಅಲರ್ಜಿ ಸಮಸ್ಯೆಯಿಂದ ಬಳಲುತ್ತಿದ್ದರೆ ಬ್ರೊಕೋಲಿಯಿಂದ ದೂರವಿರಿ

(Pippali Benefits in winter cold days you will get relief from cough and cold)

Comments are closed.