ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಬರೆದ ರೋ’ಹಿಟ್‌’ಮ್ಯಾನ್

ಅಹ್ಮದಾಬಾದ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma 17000 Runs ) ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅಮೋಘ ದಾಖಲೆಯೊಂದನ್ನು ಬರೆದಿದ್ದಾರೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (Border-Gavaskar test series) 4ನೇ ಪಂದ್ಯದ 3ನೇ ದಿನದಾಟದಲ್ಲಿ ಹಿಟ್’ಮ್ಯಾನ್ ಹೊಸತೊಂದು ಮೈಲುಗಲ್ಲು ನೆಟ್ಟಿದ್ದಾರೆ.

4ನೇ ಟೆಸ್ಟ್ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 480 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಉಸ್ಮಾನ್ ಖವಾಜ 180 ಹಾಗೂ ಕ್ಯಾಮರೂನ್ ಗ್ರೀನ್ ಅಮೋಘ 114 ರನ್ ಬಾರಿಸಿದ್ದರು. ಕಾಂಗರೂಗಳ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಭಾರತದ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್’ಗೆ 74 ರನ್’ಗಳ ಜೊತೆಯಾಟವಾಡಿತು. ಬಿರುಸಿನ ಆಟವಾಡುತ್ತಿದ್ದ ನಾಯಕ ರೋಹಿತ್ ಶರ್ಮಾ 35 ರನ್ ಗಳಿಸಿ ಆಸೀಸ್’ನ ಯುವ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮಾನ್’ಗೆ ವಿಕೆಟ್ ಒಪ್ಪಿಸಿದರು.

3ನೇ ದಿನದಾಟದ ವೇಳೆ ರೋಹಿತ್ ಶರ್ಮಾ 21 ರನ್ ಗಳಿಸಿದ್ದ ವೇಳೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 17 ಸಾವಿರ ರನ್ ಪೂರ್ತಿಗೊಳಿಸಿದ ಸಾಧನೆ ಮಾಡಿದರು (Rohit Sharma completes 17,000 runs in international cricket). ಈ ಸಾಧನೆ ಮಾಡಿದ ಭಾರತದ 6ನೇ ಆಟಗಾರನೆಂಬ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾದರು. 36 ವರ್ಷದ ರೋಹಿತ್ ಶರ್ಮಾ 2007ರ ಜೂನ್ 23ರಂದು ಐರ್ಲೆಂಡ್’ನ ಬೆಲ್’ಫಾಸ್ಟ್’ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು.

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಸಾಧನೆ :
ಟೆಸ್ಟ್ ಕ್ರಿಕೆಟ್: 3,379 ರನ್ (49 ಪಂದ್ಯ, 9 ಶತಕ, 14 ಅರ್ಧಶತಕ)
ಏಕದಿನ ಕ್ರಿಕೆಟ್: 9782 ರನ್ (241 ಪಂದ್ಯ, 30 ಶತಕ, 48 ಅರ್ಧಶತಕ)
ಟಿ20 ಕ್ರಿಕೆಟ್: 3853 ರನ್ (148 ಪಂದ್ಯ, 4 ಶತಕ, 29 ಅರ್ಧಶತಕ)
ಒಟ್ಟು ಪಂದ್ಯ: 438, ರನ್: 17014, ಶತಕ: 43, ಅರ್ಧಶತಕ: 91

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಭಾರತ ಪರ 17,000+ ರನ್ ಗಳಿಸಿದರು
ಸಚಿನ್ ತೆಂಡೂಲ್ಕರ್: 34357 ರನ್ (664 ಪಂದ್ಯ)
ವಿರಾಟ್ ಕೊಹ್ಲಿ: 25047 ರನ್ (494 ಪಂದ್ಯ)
ರಾಹುಲ್ ದ್ರಾವಿಡ್: 24064 ರನ್ (504 ಪಂದ್ಯ)
ಸೌರವ್ ಗಂಗೂಲಿ: 18433 ರನ್ (421 ಪಂದ್ಯ)
ಎಂ.ಎಸ್ ಧೋನಿ: 17092 ರನ್ (535 ಪಂದ್ಯ)
ರೋಹಿತ್ ಶರ್ಮಾ: 17014 ರನ್ (438 ಪಂದ್ಯ)

ಇದನ್ನೂ ಓದಿ : KL Rahul : ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್‌ನಲ್ಲಿ ಕನ್ನಡಿಗನನ್ನು ಆಡಿಸಲು ಸೂಪರ್ ಪ್ಲಾನ್, ಕೆ.ಎಲ್ ರಾಹುಲ್ ಆಡೋದು ಪಕ್ಕಾ!

ಇದನ್ನೂ ಓದಿ : ಆರ್‌ಸಿಬಿ ಜೊತೆ “ವಿರಾಟ” ಪಯಣಕ್ಕೆ 15 ವರ್ಷ, ಕಿಂಗ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಬಾಂಧವ್ಯಕ್ಕೆ ರಾಯಲ್ ಚಾಲೆಂಜರ್ಸ್ ಭಾವುಕ ಸಂದೇಶ

ಇದನ್ನೂ ಓದಿ : Border-Gavaskar test series: ಆಸ್ಟ್ರೇಲಿಯಾ ಬೃಹತ್ ಮೊತ್ತ, ಟೀಮ್ ಇಂಡಿಯಾ ಮುಂದಿದೆ ಬಿಗ್ ಚಾಲೆಂಜ್

Rohit Sharma 17000 Runs : Rohit’man who wrote a great record in international cricket

Comments are closed.