ಆರ್‌ಸಿಬಿ ಜೊತೆ “ವಿರಾಟ” ಪಯಣಕ್ಕೆ 15 ವರ್ಷ, ಕಿಂಗ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಬಾಂಧವ್ಯಕ್ಕೆ ರಾಯಲ್ ಚಾಲೆಂಜರ್ಸ್ ಭಾವುಕ ಸಂದೇಶ

ಬೆಂಗಳೂರು : ಟೀಮ್ ಇಂಡಿಯಾದ ಮಾಜಿ ನಾಯಕ, ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ (Virat Kohli) ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಜೊತೆಗಿನ ಬಾಂಧವ್ಯಕ್ಕೆ 15 ವರ್ಷ (Virat Kohli completes 15 years with RCB) ತುಂಬಿದೆ. ಕಿಂಗ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಬಾಂಧವ್ಯಕ್ಕೆ 15 ವರ್ಷ ತುಂಬಿರುವ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಟ್ವಿಟರ್’ನಲ್ಲಿ ಭಾವುಕ ಸಂದೇಶವನ್ನು ಹಂಚಿಕೊಂಡಿದೆ.

2008ರಲ್ಲಿ ಭಾರತ ತಂಡದ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೊಹ್ಲಿ ಅವರನ್ನು ಐಪಿಎಲ್ ಹರಾಜಿನಲ್ಲಿ ಖರೀದಿಸಿತ್ತು.2008ರ ಮಾರ್ಚ್ 11ರಂದು ನಡೆದ 2ನೇ ದಿನ ಐಪಿಎಲ್ ಆಟಗಾರರ ಹರಾಜಿನಲ್ಲಿ ವಿರಾಟ್ ಕೊಹ್ಲಿ ಅವರನ್ನು ಆರ್’ಸಿಬಿ ಖರೀದಿ ಮಾಡಿತ್ತು. ಆ ನೆನಪನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿರುವ ಆರ್’ಸಿಬಿ ಫ್ರಾಂಚೈಸಿ “ಆರ್’ಸಿಬಿ ಬಣ್ಣದಲ್ಲಿ ಕಿಂಗ್ ಕೊಹ್ಲಿ ಪ್ರಯಾಣಕ್ಕೆ 15 ವರ್ಷ ತುಂಬಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ನೀವು ಆಡಿದ್ದಕ್ಕೆ, ಹೆಮ್ಮೆ ಪಡುವಂತೆ ಮಾಡಿದ್ದಕ್ಕೆ ಮತ್ತು ಅದನ್ನು ಮುಂದುವರಿಸಲಿರುವುದಕ್ಕೆ ನಿಮಗೆ ಧನ್ಯವಾದಗಳು ವಿರಾಟ್ ಕೊಹ್ಲಿ” ಎಂದು ಟ್ವೀಟ್ ಮಾಡಿದೆ.

2008ರಿಂದಲೂ ಒಂದೇ ಫ್ರಾಂಚೈಸಿ ಪರ ಆಡುತ್ತಿರುವ ಏಕೈಕ ಕ್ರಿಕೆಟಿಗನೆಂಬ ದಾಖಲೆ ವಿರಾಟ್ ಕೊಹ್ಲಿ ಅವರ ಹೆಸರಲ್ಲಿದೆ. 2008ರಲ್ಲಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಕಿಂಗ್ ಕೊಹ್ಲಿ, 2013ರಲ್ಲಿ ತಂಡದ ನಾಯಕನಾಗಿ ನೇಮಕಗೊಂಡಿದ್ದರು. 2008ರಿಂದ ಇಲ್ಲಿಯವೆರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 223 ಪಂದ್ಯಗಳನ್ನಾಡಿರುವ 34 ವರ್ಷದ ವಿರಾಟ್ ಕೊಹ್ಲಿ, 5 ಶತಕ ಹಾಗೂ 44 ಅರ್ಧಶತಕಗಳ ಸಹಿತ 36.20 ಸರಾಸರಿಯಲ್ಲಿ 129.15ರ ಸ್ಟ್ರೈಕ್’ರೇಟ್’ನಲ್ಲಿ 6624 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Border-Gavaskar test series: ಆಸ್ಟ್ರೇಲಿಯಾ ಬೃಹತ್ ಮೊತ್ತ, ಟೀಮ್ ಇಂಡಿಯಾ ಮುಂದಿದೆ ಬಿಗ್ ಚಾಲೆಂಜ್

ಇದನ್ನೂ ಓದಿ : KL Rahul : ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್‌ನಲ್ಲಿ ಕನ್ನಡಿಗನನ್ನು ಆಡಿಸಲು ಸೂಪರ್ ಪ್ಲಾನ್, ಕೆ.ಎಲ್ ರಾಹುಲ್ ಆಡೋದು ಪಕ್ಕಾ!

ಇದನ್ನೂ ಓದಿ : KL Rahul : ಕಳೆದ ಟೆಸ್ಟ್ ಸರಣಿಯಲ್ಲಿ ನಾಯಕ, ಈಗ ವಾಟರ್ ಬಾಯ್ ಕಾಯಕ : ಕೆ.ಎಲ್ ರಾಹುಲ್ ಕಥೆ ಹೇಗಾಯ್ತು ನೋಡಿ!

Virat Kohli completes 15 years with RCB : ವಿರಾಟ್ ಕೊಹ್ಲಿ ಐಪಿಎಲ್ ದಾಖಲೆಗಳು :

  • ಅತೀ ಹೆಚ್ಚು ರನ್: 6624
  • ಒಂದೇ ಐಪಿಎಲ್’ನಲ್ಲಿ ಅತೀ ಹೆಚ್ಚು ರನ್: 973
  • ಒಂದೇ ಐಪಿಎಲ್’ನಲ್ಲಿ ಅತೀ ಹೆಚ್ಚು ಶತಕ: 04
  • ಐಪಿಎಲ್’ನಲ್ಲಿ 6500 ರನ್ ಗಳಿಸಿದ ಮೊದಲ ಬ್ಯಾಟ್ಸ್’ಮನ್
  • ಐಪಿಎಲ್’ನಲ್ಲಿ ವೇಗದ 6000 ರನ್: 188 ಇನ್ನಿಂಗ್ಸ್
  • ಐಪಿಎಲ್ ಆರಂಭದಿಂದಲೂ ಒಂದೇ ಫ್ರಾಂಚೈಸಿ ಪರ ಆಡಿದ ಏಕೈಕ ಆಟಗಾರ

Virat Kohli completes 15 years with RCB : 15 years of “Virat’s” journey with RCB, Royal Challengers emotional message for the emotional bond with King Kohli

Comments are closed.