Rohith Sharma 500 Sixers : ನೋವಿನ ಮಧ್ಯೆಯೂ ಸಿಕ್ಸರ್’ಗಳ ಸುರಿಮಳೆ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ಸ್ ಸಿಡಿಸಿದ ರೋಹಿತ್ ಶರ್ಮಾ

ಮೀರ್’ಪುರ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್’ಗಳನ್ನು (Rohith Sharma 500 Sixers) ಬಾರಿಸಿದ ಭಾರತದ ಮೊದಲ ಹಾಗೂ ಜಗತ್ತಿನ 2ನೇ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಬುಧವಾರ ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಆತಿಥೇಯ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ (India vs Bangladesh ODI series) 3ನೇ ಸಿಕ್ಸರ್ ಬಾರಿಸಿದ ವೇಳೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್’ಗಳ ಗಡಿ ತಲುಪಿದರು.

ಎಡಗೈ ಹೆಬ್ಬೆರಳ ನೋವಿನ ಮಧ್ಯೆಯೂ 9ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ರೋಹಿತ್ ಶರ್ಮಾ ಒಟ್ಟು 5 ಸಿಕ್ಸರ್’ಗಳನ್ನು ಬಾರಿಸಿ 27 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದ್ದರು. ಆದರೆ ಭಾರತ 5 ರನ್’ಗಳಿಂದ ಪಂದ್ಯ ಸೋತು ಸರಣಿ ಕೈಚೆಲ್ಲುವುದರೊಂದಿಗೆ ರೋಹಿತ್ ಶರ್ಮಾ ಅವರ ಹೋರಾಟ ವ್ಯರ್ಥಗೊಂಡಿತ್ತು. 2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 35 ವರ್ಷದ ರೋಹಿತ್ ಶರ್ಮಾ ಇಲ್ಲಿಯವರೆಗೆ ಏಕದಿನ, ಟೆಸ್ಟ್ ಹಾಗೂ ಟಿ20ಯಲ್ಲಿ ಒಟ್ಟು 502 ಸಿಕ್ಸರ್’ಗಳನ್ನು ಬಾರಿಸಿದ್ದಾರೆ.

ಏಕದಿನ ಕ್ರಿಕೆಟ್’ನಲ್ಲಿ 256 ಸಿಕ್ಸರ್ಸ್, ಟಿ20 ಕ್ರಿಕೆಟ್’ನಲ್ಲಿ 182 ಸಿಕ್ಸರ್ಸ್ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ 64 ಸಿಕ್ಸರ್’ಗಳನ್ನು ಬಾರಿಸಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಾರೆ ಅತೀ ಹೆಚ್ಚು ಸಿಕ್ಸರ್’ಗಳನ್ನು ಸಿಡಿಸಿರುವವರ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ (most sixes in international cricket). 483 ಅಂತಾರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 553 ಸಿಕ್ಸರ್’ಗಳನ್ನು ಬಾರಿಸಿರುವ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ಸ್
ಟೆಸ್ಟ್ ಕ್ರಿಕೆಟ್: 45 ಪಂದ್ಯ, 64 ಸಿಕ್ಸರ್ಸ್
ಏಕದಿನ ಕ್ರಿಕೆಟ್: 235 ಪಂದ್ಯ, 256 ಸಿಕ್ಸರ್ಸ್
ಟಿ20 ಕ್ರಿಕೆಟ್: 148 ಪಂದ್ಯ, 182 ಸಿಕ್ಸರ್ಸ್
ಟೆಸ್ಟ್+ಏಕದಿನ+ಟಿ20: 428 ಪಂದ್ಯ, 502 ಸಿಕ್ಸರ್ಸ್

ಇದನ್ನೂ ಓದಿ : Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್ ಬಾಕಿ

ಇದನ್ನೂ ಓದಿ : Batting trio failure: ತ್ರಿಮೂರ್ತಿಗಳ ಭಾರೀ ವೈಫಲ್ಯ… ಹೀಗಾದ್ರೆ ವಿಶ್ವಕಪ್ ಗೆಲ್ಲೋದು ಹೇಗೆ?

ಇದನ್ನೂ ಓದಿ : India Vs Bangladesh ODI series: ರೋಹಿತ್ ನಾಯಕತ್ವದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ ಸರಣಿ ಸೋಲಿನ ಅವಮಾನ

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-10) :

  • ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 551 ಸಿಕ್ಸರ್ಸ್ (483 ಪಂದ್ಯ, 551 ಇನ್ನಿಂಗ್ಸ್)
  • ರೋಹಿತ್ ಶರ್ಮಾ (ಭಾರತ): 502 ಸಿಕ್ಸರ್ಸ್ (428 ಪಂದ್ಯ, 445 ಇನ್ನಿಂಗ್ಸ್)
  • ಶಾಹೀದ್ ಅಫ್ರಿದಿ (ಪಾಕಿಸ್ತಾನ): 476 ಸಿಕ್ಸರ್ಸ್ (524 ಪಂದ್ಯ, 508 ಇನ್ನಿಂಗ್ಸ್)
  • ಬ್ರೆಂಡನ್ ಮೆಕ್ಕಲಂ (ನ್ಯೂಜಿಲೆಂಡ್): 398 ಸಿಕ್ಸರ್ಸ್ (432 ಪಂದ್ಯ, 474 ಇನ್ನಿಂಗ್ಸ್)
  • ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 383 ಸಿಕ್ಸರ್ಸ್ (367 ಪಂದ್ಯ, 402 ಇನ್ನಿಂಗ್ಸ್)
  • ಎಂ.ಎಸ್ ಧೋನಿ (ಭಾರತ): 359 ಸಿಕ್ಸರ್ಸ್ (538 ಪಂದ್ಯ, 526 ಇನ್ನಿಂಗ್ಸ್)
  • ಸನತ್ ಜಯಸೂರ್ಯ (ಶ್ರೀಲಂಕಾ): 352 ಸಿಕ್ಸರ್ಸ್ (586 ಪಂದ್ಯ, 651 ಇನ್ನಿಂಗ್ಸ್)
  • ಐಯನ್ ಮಾರ್ಗನ್ (ಇಂಗ್ಲೆಂಡ್): 346 ಸಿಕ್ಸರ್ಸ್ (379 ಪಂದ್ಯ, 361 ಇನ್ನಿಂಗ್ಸ್)
  • ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 328 ಸಿಕ್ಸರ್ಸ್ (420 ಪಂದ್ಯ, 484 ಇನ್ನಿಂಗ್ಸ್)
  • ಜೋಸ್ ಬಟ್ಲರ್ (ಇಂಗ್ಲೆಂಡ್): 287 ಸಿಕ್ಸರ್ಸ್ (319 ಪಂದ್ಯ, 327 ಇನ್ನಿಂಗ್ಸ್)

Rohith Sharma 500 Sixers: Rain of sixers despite the pain, Rohit Sharma who hit 500 sixers in international cricket

Comments are closed.