Rohith Sharma thump injury : ಬಾಂಗ್ಲಾ ಪ್ರವಾಸದಿಂದ ರೋಹಿತ್ ಔಟ್, ಮುಂಬೈಗೆ ವಾಪಸ್; ಕೊನೆಯ ಏಕದಿನ ಪಂದ್ಯಕ್ಕೆ ರಾಹುಲ್ ಕ್ಯಾಪ್ಟನ್

ಮೀರ್’ಪುರ: ಎಡಗೈ ಹೆಬ್ಬೆರಳ ಗಾಯಕ್ಕೊಳಗಾಗಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohith Sharma thump injury) ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ (India vs Bangladesh ODI series) ಅಲಭ್ಯರಾಗಿದ್ದಾರೆ.ಹೀಗಾಗಿ ಶನಿವಾರ ನಡೆಯುವ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಉಪನಾಯಕ ಕೆ.ಎಲ್ ರಾಹುಲ್ (KL Rahul) ಮುನ್ನಡೆಸಲಿದ್ದಾರೆ. ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಸೋತಿರುವ ಭಾರತ, ಈಗಾಗ್ಲೇ 0-2ರ ಹಿನ್ನಡೆಯೊಂದಿಗೆ ಸರಣಿಯನ್ನು ಬಾಂಗ್ಲಾದೇಶಕ್ಕ ಒಪ್ಪಿಸಿದ್ದು, ಕ್ಲೀನ್ ಸ್ವೀಪ್ ಭೀತಿಯಲ್ಲಿದೆ.

ಬುಧವಾರ ಮೀರ್’ಪುರ್’ನ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆತಿಥೇಯ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ (India vs Bangladesh ODI series) ಭಾರತ 5 ರನ್’ಗಳ ಸೋಲು ಕಂಡಿತ್ತು. ಮೊದಲ ಏಕದಿನ ಪಂದ್ಯವನ್ನು ಬಾಂಗ್ಲಾ 1 ವಿಕೆಟ್’ನಿಂದ ರೋಚಕವಾಗಿ ಗೆದ್ದುಕೊಂಡಿತ್ತು.

2ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಮೈದಾನದ ತೊರೆದಿದ್ದ ರೋಹಿತ್ ಅಸ್ಪತ್ರೆಗೆ ತೆರಳಿ ಹೆಬ್ಬೆರಳಿಗೆ ಸ್ಟಿಚ್ ಹಾಕಿಸಿಕೊಂಡು ಪೇನ್ ಕಿಲ್ಲರ್ ಇಂಜೆಕ್ಷನ್ ಪಡೆದು 9ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು 27 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿದ್ದರು. ಆದರೆ ಭಾರತ 5 ರನ್’ಗಳಿಂದ ಪಂದ್ಯ ಸೋತು ಸರಣಿ ಕೈಚೆಲ್ಲುವುದರೊಂದಿಗೆ ರೋಹಿತ್ ಶರ್ಮಾ ಅವರ ಹೋರಾಟ ವ್ಯರ್ಥಗೊಂಡಿತ್ತು.

ಕೈ ಬೆರಳಿನ ಗಾಯ ಗಂಭೀರ ಸ್ವರೂಪದ್ದಾಗಿರುವ ಕಾರಣ ರೋಹಿತ್ ಶರ್ಮಾ ಗುರುವಾರ ಮುಂಬೈಗೆ ವಾಪಸ್ಸಾಗಲಿದ್ದು, ಚಿಕಿತ್ಸೆ ಪಡೆಯಲಿದ್ದಾರೆ. 3ನೇ ಪಂದ್ಯಕ್ಕೆ ಅಲಭ್ಯರಾಗಿರುವ ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಆಡುವುದು ಅನುಮಾನ. ಟೆಸ್ಟ್ ಸರಣಿ ಡಿಸೆಂಬರ್ 14ರಂದು ಆರಂಭವಾಗಲಿದ್ದು, ಒಂದು ವೇಳೆ ರೋಹಿತ್ ಅಲಭ್ಯರಾದರೆ ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾವನ್ನು ಉಪನಾಯಕ ಕೆ.ಎಲ್ ರಾಹುಲ್ ಅವರೇ ಮುನ್ನಡೆಸಲಿದ್ದಾರೆ.

ಗಾಯದ ಕಾರಣ ಬಲಗೈ ಸ್ವಿಂಗ್ ಬೌಲರ್ ದೀಪಕ್ ಚಹರ್ (Deepak Chahar) ಕೂಡ ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ ಚಹರ್ ಕೇವಲ 3 ಓವರ್ ಮಾತ್ರ ಬೌಲಿಂಗ್ ಮಾಡಿ ಮೈದಾನ ತೊರೆದಿದ್ದರು. ಈಗಾಗ್ಲೇ ಯುವ ವೇಗಿ ಕುಲ್ದೀಪ್ ಸೇನ್ (Kuldeep Sen) ಗಾಯದಿಂದಾಗಿ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ : India Vs Bangladesh ODI : ಇಂದು 2ನೇ ಏಕದಿನ, ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ಬದಲಾಗುತ್ತಾ ಪ್ಲೇಯಿಂಗ್ XI?

ಇದನ್ನೂ ಓದಿ : Rohith Sharma 500 Sixers : ನೋವಿನ ಮಧ್ಯೆಯೂ ಸಿಕ್ಸರ್’ಗಳ ಸುರಿಮಳೆ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್ಸ್ ಸಿಡಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ : Batting trio failure: ತ್ರಿಮೂರ್ತಿಗಳ ಭಾರೀ ವೈಫಲ್ಯ… ಹೀಗಾದ್ರೆ ವಿಶ್ವಕಪ್ ಗೆಲ್ಲೋದು ಹೇಗೆ?

Rohith Sharma thump injury: Rohith out of Bangladesh tour, back to Mumbai; Rahul is the captain for the last ODI

Comments are closed.