assault on a youth: ವಿಚಾರಣೆಗೆ ಹಾಜರಾಗದ ಎಸ್‌ ಎ ಶಕ್ತಿವೇಲು ಮತ್ತು ಪೊಲೀಸ್‌ ನಿರಕ್ಷಕ ಶರಣಗೌಡ ವಿರುದ್ದ ವಾರಂಟ್‌

ಉಡುಪಿ: (assault on a youth) ಯುವಕನ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದ ವಿಚಾರಣೆಗೆ ಎಸ್‌ಎ ಶಕ್ತಿ ವೇಲು ಹಾಗೂ ಪೊಲೀಸ್‌ ನಿರಕ್ಷಕ ಶರಣಗೌಡ ವಿರುದ್ದ ಉಡುಪಿ ಪ್ರಿನ್ಸಿಪಲ್‌ ಸಿವಿಲ್‌ ಜಡ್ಜ್‌ ಮತ್ತು ಜೆಎಂಎಫ್‌ ಸಿ ನ್ಯಾಯಾಲಯ ನವೆಂಬರ್‌ ಎಂಟರಂದು ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಮಲ್ಪೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹೂಡೆಯ ಹಿದಾಯತುಲ್ಲ ಎಂಬುವವರ ಮನೆಗೆ ಎಸ್ಸೆ ಶಕ್ತಿವೇಲು ಮತ್ತು ಪೊಲೀಸ್‌ ನಿರಕ್ಷಕ ಶರಣಗೌಡ ಹಾಗೂ ಏಳು ಮಂದಿಯ ಪೊಲೀಸ್‌ ತಂಡ ಅಕ್ರಮವಾಗಿ ನುಗ್ಗಿ ಹಿದಾಯತುಲ್ಲಾ ಅವರಿಗೆ ಥಳಿಸಿ, ಕಾನೂನು ಬಾಹಿರವಾಗಿ ಬಂಧಿಸಿ ಠಾಣೆಗೆ ಕರೆದು ದೌರ್ಜನ್ಯ (assault on a youth) ಎಸಗಿದ್ದರೆಂದು ದೂರಾಲಾಗಿತ್ತು.

ಅಲ್ಲದೆ ಅವಾಚ್ಯ ಶಬ್ಧಗಳಿಂದ ಬೈದು, ಎನ್‌ ಕೌಂಟರ್‌ ಮಾಡುವುದಾಗಿ ಬೆದರಿಸಿ, ತನ್ನೊಪ್ಪಿಗೆ ಬರಹಕ್ಕೆ ಸಹಿ ಮಾಡಲು ನಿರಂತರವಾಗಿ ದೈಹಿಕ ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಿದಾಯತುಲ್ಲಾ ಉಡುಪಿ ನ್ಯಾಯಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ದೂರನ್ನು ಮಾನ್ಯ ಮಾಡಿದ ನ್ಯಾಯಾಲಯ ಶಕ್ತಿವೇಲು ಹಾಗೂ ವೃತ್ತ ನಿರೀಕ್ಷಕ ಶರಣಗೌಡ ವಿರುದ್ದ ಐಪಿಸಿ ಸೆಕ್ಷನ್‌ 448,452,348,342,324,504,506,23,34,803 dod ದಾಖಲಿಸಲು ಆದೇಶ ಜಾರಿ ಮಾಡಿತ್ತು. ನಂತರ ಇವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಲಾಗಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ದ ನ್ಯಾಯಾಲಯವು ವಾರಂಟ್‌ ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

ಇದನ್ನೂ ಓದಿ : Current shock-boy died: ಪಾರಿವಾಳ ಹಿಡಿಯಲು ಹೋಗಿ ಕರೆಂಟ್‌ ಶಾಕ್:‌ ಮತ್ತೋರ್ವ ಬಾಲಕ ಸಾವು

ಇದನ್ನೂ ಓದಿ : Kodi Habba 2022 : ಕೊಡಿ‌ಹಬ್ಬದಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ಬೇಡ : ವಿಶ್ವ ಹಿಂದೂ ಪರಿಷತ್ ಆಗ್ರಹ

(assault on a youth) The Udupi Principal Civil Judge and JMFC Court issued a non-bailable warrant on November 8 against AA Shakti Velu and police constable Sharangowda for the court hearing related to the case of assault and threat to life on a youth.

Comments are closed.