Sachin Vs Kohli 33 phobia: ಅಂದು ಸಚಿನ್, ಇಂದು ವಿರಾಟ್.. ಬ್ಯಾಟಿಂಗ್ ದಿಗ್ಗಜರಿಗೆ ‘33’ ಫೋಬಿಯಾ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಮತ್ತು ಆಧುನಿಕ ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರು. ವಿರಾಟ್ ಕೊಹ್ಲಿ ಅವರಂತೂ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ಅವರ ಉತ್ತರಾಧಿಕಾರಿಯೆಂದೇ ಕರೆಸಿಕೊಂಡವರು. ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ದಾಖಲೆಯನ್ನು ಮುರಿಯುವ ತಾಕತ್ತು ಯಾರಿಗಾದ್ರೂ ಇದ್ರೆ ಅದು ಕೊಹ್ಲಿಗೆ ಮಾತ್ರ ಎಂದು ಕ್ರಿಕೆಟ್ ಪಂಡಿತರೇ ಹೇಳಿದ್ದರು. ಸದ್ಯ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಸಮಯವನ್ನು ಎದುರಿಸುತ್ತಿದ್ದಾರೆ. ಕಳೆದ 32 ತಿಂಗಳುಗಳಿಂದ (Sachin Vs Kohli 33 phobia)ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಒಂದೇ ಒಂದು ಶತಕ ಬಾರಿಸಿಲ್ಲ.

ವಿರಾಟ್ ಕೊಹ್ಲಿ ಎದುರಿಸುತ್ತಿರುವ ವೈಫಲ್ಯದ ಮಧ್ಯೆ ಕೊಹ್ಲಿಗೂ ಸಚಿನ್”ಗೂ ಇರುವ ಸಾಮ್ಯತೆಯೊಂದು ಬಯಲಾಗಿದೆ. ಆ ಸಾಮ್ಯತೆಯೇ ‘33’ರ ಫೋಬಿಯಾ. ವಿರಾಟ್ ಕೊಹ್ಲಿಗೆ ಸದ್ಯ 33 ವರ್ಷ ವಯಸ್ಸು. 33ನೇ ವರ್ಷದಲ್ಲಿ ಅಂದರೆ 2021ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ದಯನೀಯ ವೈಫಲ್ಯ ಎದುರಿಸಿದ್ದರು. ಆಡಿದ 11 ಟೆಸ್ಟ್ ಪಂದ್ಯಗಳಲ್ಲಿ 28ರ ಸರಾಸರಿಯಲ್ಲಿ ಕೊಹ್ಲಿ ಕೇವಲ 536 ರನ್ ಕಲೆ ಹಾಕಿದ್ದರು.

ಅಚ್ಚರಿಯ ಸಂಗತಿ ಏನಂದ್ರೆ ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಕೂಡ ತಮ್ಮ 33ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಕೊಹ್ಲಿಗಿಂತಲೂ ಕೆಟ್ಟ ಫಾರ್ಮ್”ನಲ್ಲಿದ್ದರು. 2006ನೇ ಇಸವಿಯಲ್ಲಿ 33ನೇ ವರ್ಷದಲ್ಲಿದ್ದ ಸಚಿನ್ ಆಗ 8 ಟೆಸ್ಟ್ ಪಂದ್ಯಗಳನ್ನಾಡಿದ್ದು, 24ರ ಸರಾಸರಿಯಲ್ಲಿ ಗಳಿಸಿದ್ದದ್ದು ಕೇವಲ 267 ರನ್.

33ನೇ ವರ್ಷದಲ್ಲಿ ಕೊಹ್ಲಿ(2021):
ಟೆಸ್ಟ್: 11
ರನ್: 536
ಗರಿಷ್ಠ: 72
ಸರಾಸರಿ: 28.21

33ನೇ ವರ್ಷದಲ್ಲಿ ಸಚಿನ್ (2006):
ಟೆಸ್ಟ್: 08
ರನ್: 267
ಗರಿಷ್ಠ: 63
ಸರಾಸರಿ: 24.27

33ನೇ ವರ್ಷದಲ್ಲಿ ಟೆಸ್ಟ್ ರನ್ ಬರ ಎದುರಿಸಿದ್ದ ಸಚಿನ್ ತೆಂಡೂಲ್ಕರ್ ನಂತರ ಲಯ ಕಂಡುಕೊಂಡು ಅತೀ ಹೆಚ್ಚು ಟೆಸ್ಟ್ ರನ್’ಗಳ ವಿಶ್ವದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ವೃತ್ತಿಜೀವನ ದಲ್ಲಿ ಒಟ್ಟು 200 ಪಂದ್ಯಗಳನ್ನಾಡಿರುವ ಸಚಿನ್, ವಿಶ್ವದಾಖಲೆಯ 49 ಶತಕಗಳ ಸಹಿತ 53.78ರ ಸರಾಸರಿಯಲ್ಲಿ ವಿಶ್ವದಾಖಲೆಯ 15,921 ರನ್ ಗಳಿಸಿದ್ದಾರೆ. ತಮ್ಮ 16ನೇ ವಯಸ್ಸಿನಲ್ಲಿ 1989ರಲ್ಲಿ ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ತೆಂಡೂಲ್ಕರ್, ತಮ್ಮ 40ನೇ ವರ್ಷದಲ್ಲಿ ವೃತ್ತಿಜೀವನದ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

33 ವರ್ಷದ ವಿರಾಟ್ ಕೊಹ್ಲಿ ಒಟ್ಟು 102 ಟೆಸ್ಟ್ ಪಂದ್ಯಗಳನ್ನಾಡಿದ್ದು, 49.53ರ ಬ್ಯಾಟಿಂಗ್ ಸರಾಸರಿಯಲ್ಲಿ 27 ಶತಕಗಳ ಸಹಿತ 8,074 ರನ್ ಕಲೆ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ 49 ಟೆಸ್ಟ್ ಶತಕಗಳ ವಿಶ್ವದಾಖಲೆಯನ್ನು ಪುಡಿಗಟ್ಟಲು ಕೊಹ್ಲಿಗೆ ಇನ್ನೂ 23 ಶತಕಗಳ ಅವಶ್ಯಕತೆಯಿದೆ. ಟೆಸ್ಟ್ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಸಚಿನ್ ಅವರ ದಾಖಲೆಯನ್ನು ಮುರಿಯಲು ವಿರಾಟ್ ಕೊಹ್ಲಿ ಇನ್ನೂ 7,847 ರನ್ ಗಳಿಸಬೇಕಿದೆ. 1989ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಕಾಲಿಟ್ಟಿದ್ದ ಸಚಿನ್, 2013ರವರೆಗೆ ಒಟ್ಟು 24 ವರ್ಷಗಳ ಕಾಲ ಟೆಸ್ಟ್ ಆಡಿದ್ರೆ, 2011ರಲ್ಲಿ ಟೆಸ್ಟ್”ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, 11 ವರ್ಷಗಳಿಂದ ಟೆಸ್ಟ್ ಆಡುತ್ತಿದ್ದಾರೆ.

ಇದನ್ನೂ ಓದಿ : “ಔಟ್ ಆಫ್ ಫಾರ್ಮ್” ವಿರಾಟ್ ಕೊಹ್ಲಿ ಈಗಲೂ ರೋಹಿತ್ ಶರ್ಮಾಗಿಂತ ಬೆಸ್ಟ್ !

ಇದನ್ನೂ ಓದಿ : ಬಿಸಿಸಿಐ= ಬೋರ್ಡ್ ಆಫ್ ಚೇಂಜಿಂಗ್ ಕ್ಯಾಪ್ಟನ್ಸ್ ಇನ್ ಇಂಡಿಯಾ !

Sachin Vs Kohli 33 phobia for batting giants

Comments are closed.