Saurashtra Ranji Champions : ಬಂಗಾಳವನ್ನು ಬಗ್ಗು ಬಡಿದು 2ನೇ ಬಾರಿ ರಣಜಿ ಟ್ರೋಫಿ ಗೆದ್ದ ಸೌರಾಷ್ಟ್ರ

ಕೋಲ್ಕತಾ: ಫೈನಲ್ ಪಂದ್ಯದಲ್ಲಿ ಆತಿಥೇಯ ಬಂಗಾಳ ತಂಡವನ್ನು 9 ವಿಕೆಟ್’ಗಳಿಂದ ಬಗ್ಗು ಬಡಿದ (Saurashtra Ranji Champions) ಸೌರಾಷ್ಟ್ರ ತಂಡ, ರಣಜಿ ಟ್ರೋಫಿ (Ranji Trophy 2023) ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. 2019-20ನೇ ಸಾಲಿನಲ್ಲಿ ಮೊದಲ ಬಾರಿ ರಣಜಿ ಟ್ರೋಫಿ ಗೆದ್ದಿದ್ದ ಸೌರಾಷ್ಟ್ರ 3 ವರ್ಷಗಳ ಅಂತರದಲ್ಲಿ 2ನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಂಗಾಳ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಸೌರಾಷ್ಟ್ರ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. 2019-20ನೇ ಸಾಲಿನ ಫೈನಲ್’ನಲ್ಲೂ ಬಂಗಾಳ ತಂಡ ಸೌರಾಷ್ಟ್ರ ವಿರುದ್ಧ ಸೋಲು ಕಂಡಿತ್ತು. ಪ್ರಥಮ ಇನ್ನಿಂಗ್ಸ್’ನಲ್ಲಿ ಸೌರಾಷ್ಟ್ರ ತಂಡದ ಸಂಘಟಿತ ದಾಳಿಗೆ ತತ್ತರಿಸಿದ್ದ ಬಂಗಾಳ ಕೇವಲ 174 ರನ್ನಿಗೆ ಆಲೌಟಾಗಿತ್ತು. ಇದಕ್ಕೆ ಪ್ರತಿಯಾಗಿ ಸೌರಾಷ್ಟ್ರ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 404 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿ 230 ರನ್’ಗಳ ಭಾರೀ ಮುನ್ನಡೆ ಸಂಪಾದಿಸಿತ್ತು.

ಇದನ್ನೂ ಓದಿ : Axar Patel : ಟೀಮ್ ಇಂಡಿಯಾಗೆ ಆಪದ್ಬಾಂಧವನಾದ ಅಕ್ಷರ್, ರೋಚಕ ಘಟ್ಟದಲ್ಲಿ ದೆಹಲಿ ಟೆಸ್ಟ್; 2ನೇ ದಿನ ಆಸೀಸ್ ಮೇಲುಗೈ

ಇದನ್ನೂ ಓದಿ : KL Rahul – Mayank Agarwal : ಆಸೀಸ್ ವಿರುದ್ಧ ಕೆ.ಎಲ್ ರಾಹುಲ್ ಮತ್ತೆ ಫೇಲ್, ಗೆಳೆಯನ ಸ್ಥಾನವನ್ನು ಆಕ್ರಮಿಸಿಕೊಳ್ತಾರಾ ಮತ್ತೊಬ್ಬ ಕನ್ನಡಿಗ?

ಇದನ್ನೂ ಓದಿ : Sandeep Lamichhane : ಅತ್ಯಾಚಾರ ಆರೋಪಿ ಸಂದೀಪ್ ಲಾಮಿಚಾನೆ ಕೈಕುಲುಕಲು ನಿರಾಕರಿಸಿದ ಸ್ಕಾಟ್ಲೆಂಡ್ ಆಟಗಾರರು

ಪ್ರಥಮ ಇನ್ನಿಂಗ್ಸ್’ನಲ್ಲಿ 230 ರನ್’ಗಳ ಭಾರೀ ಹಿನ್ನಡೆ ಪಡೆದಾಗಲೇ ಬಂಗಾಳ ತಂಡದ ಸೋಲು ಖಚಿತವಾಗಿತ್ತು. ದೊಡ್ಡ ಸವಾಲಿನೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಬಂಗಾಳ, ಸೌರಾಷ್ಟ್ರ ಕೇವಲ 241 ರನ್ನಿಗೆ ಆಲೌಟಾಯಿತು. ಇದರೊಂದಿಗೆ ಗೆಲುವಿಗೆ ಕೇವಲ 12 ರನ್’ಗಳ ಗುರಿ ಪಡೆದ ಸೌರಾಷ್ಟ್ರ ಒಂದು ವಿಕೆಟ್ ಕಳೆದುಕೊಂಡು 14 ರನ್ ಗಳಿಸಿ ಸುಲಭ ಜಯ ದಾಖಲಿಸಿ ರಣಜಿ ಟ್ರೋಫಿ ಎತ್ತಿ ಹಿಡಿಯಿತು.

ಪ್ರಥಮ ಇನ್ನಿಂಗ್ಸ್’ನಲ್ಲಿ 3 ಹಾಗೂ ದ್ವಿತೀಯ ಇನ್ನಿಂಗ್ಸ್’ನಲ್ಲಿ 6 ವಿಕೆಟ್ ಸಹಿತ ಪಂದ್ಯದಲ್ಲಿ ಒಟ್ಟು 9 ವಿಕೆಟ್’ಗಳನ್ನು ಕಬಳಿಸಿದ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸೌರಾಷ್ಟ್ರ ಪರ ಆಕರ್ಷಕ ಅರ್ಧಶತಕ ಬಾರಿಸಿದ ಉಪನಾಯಕ ಅರ್ಪಿತ್ ವಸವಾಡ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕರ್ನಾಟಕ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅರ್ಪಿತ್ ವಸವಾಡ ಅಮೋಘ ದ್ವಿಶತಕ ಬಾರಿಸಿ ಸೌರಾಷ್ಟ್ರ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದರು.

ಇದನ್ನೂ ಓದಿ : Smriti Mandhana RCB captain : ಮಹಿಳಾ ಪ್ರೀಮಿಯರ್ ಲೀಗ್: ರಾಯಲ್ ಚಾಲೆಂಜರ್ಸ್ ತಂಡದ ನಾಯಕಿಯ ಹೆಸರನ್ನು ಘೋಷಿಸಿದ ವಿರಾಟ್ ಕೊಹ್ಲಿ

Saurashtra Ranji Champions: Saurashtra beat Bengal to win Ranji Trophy for the 2nd time

Comments are closed.