Pancreatic cancer : ಮಹಿಳೆಯರಲ್ಲಿ ವೇಗವಾಗಿ ಹರಡುತ್ತಿರುವ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ರೋಗಲಕ್ಷಣಗಳು ಹೇಗೆ ಇರುತ್ತೆ ಗೊತ್ತಾ ?

ಕ್ಯಾನ್ಸರ್‌ ಎನ್ನುವುದು ಒಂದು ರೀತಿಯ ಮಾರಕ ರೋಗವಾಗಿದೆ. ಇದು ಒಂದು ಸಲ ಮನುಷ್ಯನ ದೇಹವನ್ನು ಪ್ರವೇಶಿಸಿದ್ದರೆ, ಆರೋಗ್ಯದಲ್ಲಿ ಎಲ್ಲಾ ರೀತಿಯ ಏರುಪೇರುಗಳು ಶುರುವಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ್ನು (Pancreatic cancer) ಸೈಲೆಂಟ್ ಕಿಲ್ಲರ್ ಕ್ಯಾನ್ಸರ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಸಾಮಾನ್ಯವಾಗಿ ಪ್ರಾರಂಭದ ಹಂತದಲ್ಲಿ ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ ಅಥವಾ ರೋಗಲಕ್ಷಣಗಳು ಅಸ್ತಿತ್ವದಲ್ಲಿದ್ದರೆ, ಅವುಗಳನ್ನು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ ಚಿಹ್ನೆಗಳು ಎಂದು ಗುರುತಿಸಲು ಕೂಡ ಕಷ್ಟವಾಗುತ್ತದೆ.

ಅದರಲ್ಲೂ 53 ಪುರುಷರಲ್ಲಿ ಹಾಗೂ 57 ವರ್ಷ ದಾಟಿದ ಮಹಿಳೆಯರಲ್ಲಿ ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಕಾಣಬಹುದಾಗಿದೆ. ಇದು ಸಾಮಾನ್ಯವಾಗಿ ಆನುವಂಶಿಕ ಅಂಶಗಳು, ವಯಸ್ಸು ಮತ್ತು ಜೀವನಶೈಲಿಯಿಂದ ಅಪಾಯವು ಹೆಚ್ಚಾಗುವಂತೆ ಮಾಡುತ್ತದೆ. ಹೆಚ್ಚಾಗಿ ಈ ಕ್ಯಾನ್ಸರ್‌ 35 ರಿಂದ 39 ಹಾಗೂ ನಂತರ 60 ರಿಂದ 64 ವರ್ಷದವರಲ್ಲಿ ಕಡಿಮೆಯಾಗಿ ಕಂಡು ಬರುತ್ತದೆ. ಇನ್ನುಳಿದಂತೆ 85ರಿಂದ 89 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇನ್ನು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಗುರುತುಗಳು ಸಾಮಾನ್ಯವಾಗಿ ಈ ಕೆಳಗಗೆ ತಿಳಿಸಿದಂತೆ ಕಂಡು ಬರುತ್ತದೆ. ಹಾಗಾದರೆ ಆ ಲಕ್ಷಣಗಳ ಬಗ್ಗೆ ತಿಳಿಯೋಣ.

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನ ಲಕ್ಷಣಗಳು ಮತ್ತು ಕುರುಹುಗಳು :

  • ನಿಮ್ಮ ಕಣ್ಣುಗಳ ಬಿಳಿಭಾಗ ಅಥವಾ ನಿಮ್ಮ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ನೀವು ಸಾಮಾನ್ಯಕ್ಕಿಂತ ತುರಿಕೆ, ಗಾಢವಾದ ಮೂತ್ರವನ್ನು ಹೊಂದಿರಬಹುದು. ಈ ಕ್ಯಾನ್ಸರ್‌ ಒಳಗಾದವರ ಮೂತ್ರವು ಹಳದಿಯಾಗಿರುತ್ತದೆ. ಹಾಗಾಗಿ ಈ ಕ್ಯಾನ್ಯರ್‌ ಒಂದು ರೀತಿಯ ಕಾಮಾಲೆಯ ಲಕ್ಷಣಗಳನ್ನು ಹೊಂದಿರುತ್ತದೆ.
  • ಈ ಕ್ಯಾನ್ಸರ್‌ಗೆ ಒಳಪಟ್ಟವರಿಗೆ ಹಸಿವೆಯಾಗುವುದು ಕಡಿಮೆಯಾಗುತ್ತದೆ. ಕ್ರಮೇಣ ತಮ್ಮ ದೇಹದ ತೂಕವನ್ನು ಯಾವುದೇ ಪ್ರಯತ್ನವಿಲ್ಲದೇ ಕಳೆದುಕೊಳ್ಳುತ್ತಾರೆ. ಹಸಿವೆಯನ್ನು ದಿನದಿಂದ ಕಡಿಮೆ ಮಾಡುವುದರಿಂದಲೇ ಇವರು ತೀರ ತೆಳ್ಳಗಾಗುತ್ತಾ ಬರುತ್ತಾರೆ.
  • ಈ ಕ್ಯಾನ್ಸರ್‌ಗೆ ಒಳಪಟ್ಟಿರುವವರು ವಿಪರೀತ ದಣಿದ ಭಾವನೆ ಅಥವಾ ನಿಶಕ್ತಿಕ್ಕೆ ಒಳಗಾಗಿರುತ್ತಾರೆ.
  • ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ ಅಂಡಾಶಯ ಅಥವಾ ಕರುಳಿನ ಕ್ಯಾನ್ಸರ್‌ನ ಕುಟುಂಬದ ಹಿನ್ನಲೆಯಿಂದಲೂ ಕಾಣಿಸಿಕೊಳ್ಳುತ್ತದೆ. ಅಂದರೆ ವಂಶ ಪರಂಪರೆಯಿಂದ ಹುಟ್ಟಿಕೊಳ್ಳುತ್ತದೆ.
  • ಈ ಕ್ಯಾನ್ಸರ್‌ನಿಂದ ದೀರ್ಘಕಾಲದ ಪ್ಯಾಂಕ್ರಿಯಾಟೈಟಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
  • ಈ ಕ್ಯಾನ್ಸರ್‌ ಅತಿಯಾದ ಮದ್ಯ ಸೇವನೆಯಿಂದ ಕೂಡ ಉಂಟಾಗುತ್ತದೆ
  • ಅತಿಯಾದ ಬೊಜ್ಜು ಇರುವವರಿಗೆ ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಆಗಿರುತ್ತದೆ.

ಇದನ್ನೂ ಓದಿ : Belly Fat : ಈ ವ್ಯಾಯಾಮಗಳನ್ನು ಮಾಡಿ, ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಿ

ಇದನ್ನೂ ಓದಿ : Home Remedy for Sore Throat : ಗಂಟಲು ನೋವಿನಿಂದ ಬೇಸತ್ತಿದ್ದೀರಾ? ಹಾಗಾದರೆ ಈ ಮನೆಮದ್ದುಗಳನ್ನು ಬಳಸಿ

ಇದನ್ನೂ ಓದಿ : Exam Stress Tips : ನಿಮ್ಮ ಮಕ್ಕಳು ಪರೀಕ್ಷೆ ದಿನಗಳಲ್ಲಿ ಒತ್ತಡಕ್ಕೆ ಒಳಾಗುತ್ತಾರೆಯೇ ? ಹಾಗಾದರೆ ಈ ಕೆಳಗೆ ತಿಳಿಸಲಾದ ಸಲಹೆಗಳನ್ನು ಅನುಸರಿಸಿ

ಇದ್ದರಿಂದಾಗಿ ವ್ಯಕ್ತಿಯು ಆಘಾತ, ಅಸಮಾಧಾನ, ಆತಂಕ ಅಥವಾ ಗೊಂದಲವನ್ನು ಅನುಭವಿಸಬಹುದು. ಆದರೆ ಇವು ಸಾಮಾನ್ಯ ಪ್ರತಿಕ್ರಿಯೆಗಳಾಗಿದ್ದು, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ರೋಗಲಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ವಿಭಿನ್ನವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನವರಿಗೆ ಇದು ಕಷ್ಟಕರ ಸಮಯವಾಗಿರುತ್ತದೆ. ಆದರೆ, ಕೆಲವರು ತಮ್ಮ ಸಾಮಾನ್ಯ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಲು ನಿರ್ವಹಿಸುತ್ತಾರೆ. ಯಾವುದೇ ರೋಗವಿದ್ದರೂ ಮನುಷ್ಯನಿಗೆ ಆತ್ಮಸ್ಥೈರ್ಯ ಇದ್ದರೆ ಎಲ್ಲದರಿಂದಲೂ ಮುಕ್ತನಾಗಬಹುದಾಗಿದೆ.

ಸೂಚನೆ : ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಮತ್ತು ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ದಯವಿಟ್ಟು ಹೆಚ್ಚಿನ ಮಾಹಿತಿಗಾಗಿ ವೃತ್ತಿಪರ ವೈದ್ಯರ ಬಳಿ ಸಲಹೆ ತೆಗೆದುಕೊಳ್ಳಿ.

Do you know the symptoms of Pancreatic Cancer, which spreads rapidly in women?

Comments are closed.