Shikhar Dhawan Aesha Mukerji : ಮಾಜಿ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗಬ್ಬರ್, ಶಿಖರ್ ಮಾಜಿ ಪತ್ನಿಗೆ ದೆಹಲಿ ಕೋರ್ಟ್ ಖಡಕ್ ವಾರ್ನಿಂಗ್

ದೆಹಲಿ: ಟೀಮ್ ಇಂಡಿಯಾದ ಮಾಜಿ ಎಡಗೈ ಓಪನರ್ ಶಿಖರ್ ಧವನ್ (Shikhar Dhawan Aesha Mukerji) ಅವರ ವೈಯಕ್ತಿಕ ಬದುಕಲ್ಲಿ ಮತ್ತೊಮ್ಮೆ ಬಿರುಗಾಳಿ ಎದ್ದಿದೆ. ಈ ಬಾರಿ ಗಬ್ಬರ್ ಅವರ ಬದುಕಲ್ಲಿ ಎದ್ದಿರುವ ಬಿರುಗಾಳಿಯನ್ನು ತಡೆಯಲು ದೆಹಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಿದೆ. ಶಿಖರ್ ಧವನ್ ಆಸ್ಟ್ರೇಲಿಯಾ ಮೂಲದ ಆಯೇಷಾ ಮುಖರ್ಜಿ (Aesha Mukerji) ಅವರನ್ನು 2012ರ ಅಕ್ಟೋಬರ್ 30ರಂದು ಮದುವೆಯಾಗಿದ್ದರು. 9 ವರ್ಷಗಳ ದಾಂಪತ್ಯದಲ್ಲಿ ಕೆಲ ವರ್ಷಗಳ ಹಿಂದೆ ಬಿರುಗಾಳಿ ಎದ್ದು, 2021ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ದೂರವಾಗಿದ್ದರು.

ಡಿವೋರ್ಸ್ ನಂತರ ಶಿಖರ್ ಧವನ್ ವಿರುದ್ಧ ಆಯೇಷಾ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್’ಗಳನ್ನು ಪ್ರಕಟಿಸುತ್ತಾ ಬಂದಿದ್ದರು. ಇದರಿಂದ ಬೇಸತ್ತಿದ್ದ ಶಿಖರ್ ಧವನ್ ತಮ್ಮ ಮಾಜಿ ಪತ್ನಿಯ ವಿರುದ್ಧ ದೆಹಲಿಯ ಪಾಟಿಯಾಲ ಹೌಸ್ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೀರ್ಪು ನೀಡಿರುವ ಪಾಟಿಯಾಲ ಹೌಸ್ ಕೋರ್ಟ್, ಶಿಖರ್ ಧವನ್ ವಿರುದ್ಧ ಯಾವುದೇ ಮಾನಹಾನಿಕರ ಆರೋಪ ಹೊರಿಸದಂತೆ ಶಿಖರ್ ಧವನ್ ಅವರ ಪತ್ನಿಗೆ ತಡೆ ನೀಡಿದೆ.

ಧವನ್‌ನ ವಿಚ್ಛೇದಿತ ಪತ್ನಿ ಆಸ್ಟ್ರೇಲಿಯನ್ ಪ್ರಜೆ ಆಶಾ ಮುಖರ್ಜಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಧವನ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡದಂತೆ ಅಥವಾ ಅವರ ಪ್ರತಿಷ್ಠೆಗೆ ಧಕ್ಕೆ ತರುವಂತಹ ಯಾವುದೇ ಹೇಳಿಕೆ ನೀಡದಂತೆ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿದೆ.2009ರಲ್ಲಿ ಶಿಖರ್ ಧವನ್ ಮೆಲ್ಬೋರ್ನ್ ಮೂಲದ ಹವ್ಯಾಸಿ ಬಾಕ್ಸರ್ ಆಯೇಷಾ ಮುಖರ್ಜಿ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಇದನ್ನೂ ಓದಿ : 5 ಟೆಸ್ಟ್ ಪಂದ್ಯಗಳ ಮೇಲೆ ನಿಂತಿದೆ ರೋಹಿತ್ ಶರ್ಮಾ ಟೆಸ್ಟ್ ಭವಿಷ್ಯ

ಇದನ್ನೂ ಓದಿ : KL Rahul: ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಜೊತೆ ರಾಹುಲ್ ಓಪನರ್, ವಿಕೆಟ್ ಕೀಪಿಂಗ್ ಜವಾಬ್ದಾರಿ ಯಾರ ಹೆಗಲಿಗೆ?

ಇದನ್ನೂ ಓದಿ : Border-Gavaskar Test series: ಟೀಮ್ ಇಂಡಿಯಾ ಕ್ಯಾಂಪ್’ನಲ್ಲಿ 10 ಸ್ಪಿನ್ನರ್ಸ್, ಇದು ಕೋಚ್ ದ್ರಾವಿಡ್ ಸ್ಪಿನ್ ಚಾಲೆಂಜ್

ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮುಖರ್ಜಿ ಅವರನ್ನು ಧವನ್‌ಗೆ ಪರಿಚಯಿಸಿದರು. ಆಯೇಷಾ ಮುಖರ್ಜಿ ಶಿಖರ್ ಧವನ್‌ಗಿಂತ 12 ವರ್ಷ ದೊಡ್ಡವಳು ಮತ್ತು ಈಗಾಗಲೇ ತನ್ನ ಹಿಂದಿನ ಮದುವೆಯಿಂದ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಳು. ಶಿಖರ್ ಅವರನ್ನು ಮದುವೆಯಾದ ನಂತರ ಆ ಇಬ್ಬರೂ ಹೆಣ್ಣು ಮಕ್ಕಳನ್ನು ಧವನ್ ದತ್ತು ಪಡೆದಿದ್ದರು.ವಿಚ್ಚೇಧಿತ ದಂಪತಿ ಶಿಖರ್ ಧವನ್ ಮತ್ತು ಆಯೇಷಾ ಮುಖರ್ಜಿ ದಂಪತಿಗೆ ಜೋರಾವರ್ ಎಂಬ ಹೆಸರಿನ ಮಗನೊಬ್ಬನಿದ್ದು ಆತ ಈಗ ತಾಯಿ ಜೊತೆ ಆಸ್ಟ್ರೇಲಿಯಾದಲ್ಲಿದ್ದಾನೆ.

Shikhar Dhawan Aesha Mukerji: Gabbar moves court against ex-wife, Delhi court warns Shikhar’s ex-wife

Comments are closed.