Shubman Gill, Pujara, Vihari, Iyer: ರಹಾನೆ, ಪೂಜಾರಾ ಔಟ್, ಅಯ್ಯರ್, ವಿಹಾರಿ ಇನ್? ಶುಭ್‌ಮನ್ ಗಿಲ್‌ಗೆ ಲಕ್

ದಕ್ಷಿಣ ಆಫ್ರಿಕಾದ ವಾಂಡರರ್ಸ್‌ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಚಕಚಕ ರನ್ ಗಳನ್ನು ಗಳಿಸಿದ ಅಜಿಂಕ್ಯಾ ರಹಾನೆ (Ajinkya Rahane) ಮತ್ತು ಚೇತೇಶ್ವರ ಪೂಜಾರ (Cheteshwar Pujara) ಮುಂದಿನ ಶ್ರೀಲಂಕಾ ಸರಣಿಗೆ ತಂಡದಿಂದ ಕೈಬಿಡುವ ಸಾಧ್ಯತೆಗಳು ದಟ್ಟವಾಗಿವೆ. ಸತತ ವೈಫಲ್ಯವೇ ಈ ತೀರ್ಮಾನಕ್ಕೆ ಕಾರಣ ಎನ್ನಲಾಗಿದೆ. ಶುಭ್‌ಮನ್ ಗಿಲ್ (Shubman Gill) ಆರಂಭಿಕ ಆಟಗಾರನಾದರೂ, ಮಂಡಿ ಗಾಯದಿಂದ ಚೇತರಿಸಿಕೊಂಡರೆ ಮಧ್ಯಮ ಕ್ರಮಾಂಕದ ಬಲ ತುಂಬಲು ಅವರನ್ನು ಬಳಸಿಕೊಳ್ಳುವ ಯೋಚನೆಯನ್ನು ಬಿಸಿಸಿಐ (BCCI) ನಡೆಸಿದೆ ಎನ್ನಲಾಗಿದೆ. ಜೊತೆಗೆ ಶ್ರೇಯಸ್ ಅಯ್ಯರ್ (Shreyas Iyer), ಹನುಮ ವಿಹಾರಿ (Hanuma Vihari) ಅವರುಗಳನ್ನು ಪೂಜಾರ್ ಹಾಗೂ ರಹಾನೆ ಅವರ ಸ್ಥಾನಗಳಿಗೆ ಆಯ್ಕೆಮಾಡುವ ಸಾಧ್ಯತೆ ದಟ್ಟವಾಗಿವೆ.

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯನ್ನು 2-1ರಿಂದ ಸೋತ ಭಾರತ ಕ್ರಿಕೆಟ್ ತಂಡದಲ್ಲಿ ಬದಲಾವಣೆಯ ಪರ್ವ ಆರಂಭವಾಗಲಿದೆ. ಇಡೀ ಸರಣಿಯಲ್ಲಿ ತಮ್ಮ ಸಾಮರ್ಥ್ಯ ತೋರಲು ವಿಫಲರಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ಇಬ್ಬರೂ ಆಟಗಾರರು ಮುಂಬರುವ ಭಾರತದಲ್ಲಿ ನಡೆಯಲಿರುವ ಶ್ರೀಲಂಕಾ ಸರಣಿಯಲ್ಲಿ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ.

ಈಗಿರುವ ಪರಿಸ್ಥಿತಿಯಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆಯನ್ನು ತಂಡದಲ್ಲಿ ಉಳಿಸಿಕೊಳ್ಳಲು ಕೋಚ್ ರಾಹುಲ್ ದ್ರಾವಿಡ್ ಅವರಿಂದ ಮಾತ್ರ ಸಾಧ್ಯ. ಒಂದು ಪಕ್ಷ ದ್ರಾವಿಡ್ ಈ ಇಬ್ಬರು ಆಟಗಾರರ ಪರವಾಗಿ ಆಯ್ಕೆಯ ಸಮಿತಿಯಲ್ಲಿ ಬ್ಯಾಟಿಂಗ್ ಮಾಡಿದರೆ ಮಾತ್ರ ತಂಡದಲ್ಲಿ ಮತ್ತೆ ಸ್ಥಾನಗಿಟ್ಟಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಹೀಗೇನಾದರು ಆದರೆ, ಯುವ ಆಟಗಾರರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ಬಹುಶಃ ಪೂಜಾರಾ ಮತ್ತು ರಹಾನೆಯನ್ನು ಮುಂಬರುವ ಶ್ರೀಲಂಕಾ ಸರಣಿಗೆ ತಂಡದಿಂದ ಕೈ ಬಿಡುವ ಸಾಧ್ಯತೆ ಹೆಚ್ಚಿದೆ. ಆ ಜಾಗದಲ್ಲಿ ಶ್ರೇಯಸ್ ಐಯ್ಯರ್ ಮತ್ತು ಹುನಮವಿಹಾರಿಯನ್ನು ನಾವು ಕಾಣಲಿದ್ದೇವೆ ಎಂದು ವೀಕ್ಷಕ ವಿವರಣೆಕಾರ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಮೂರನೇ ಸ್ಥಾನದಲ್ಲಿ ಆಡುತ್ತಿದ್ದ ಪೂಜಾರ್ ಅವರ ಜಾಗವನ್ನು ಹುನುಮ ವಿಹಾರಿಯೂ, ರಹಾನೆ ಸ್ಥಾನದಲ್ಲಿ ಶ್ರೇಯಸ್ಸ್ ಅಯ್ಯರ್ ಅವರನ್ನು ನಾವು ಕಾಣಲಿದ್ದೇವೆ. ಒಟ್ಟಾರೆ, ಎರಡೂ ಸ್ಥಾನಗಳಲ್ಲಿ ಮಹತ್ತರ ಬದಲಾವಣೆಯಾಗುವುದು ನಿಶ್ಚಿತ ಎಂದು ಗವಾಸ್ಕರ್ ಹೇಳಿಕೆ ನೀಡಿದ್ದಾರೆ.  ಮಂಡಿಗಾಯದಿಂದ ನರಳುತ್ತಿದ್ದ ಶ್ರೇಯಸ್ ಅಯ್ಯರ್ ಗುಣಮುಖರಾಗಿದ್ದಾರೆ. ಆರಂಭಿಕ ಆಟಗಾರನಾಗಿ ಈಗಾಗಲೇ ರೋಹಿತ್ ಶರ್ಮಾ ಫಿಟ್ ಆಗಿದ್ದಾರೆ.

ಬ್ಯಾಟಿಂಗ್ ತಂತ್ರದಲ್ಲಿ ಬಹಳ ಮುಂದಿರುವ ಶ್ರೇಯಸ್ಸ್ ಅಯ್ಯರ್ ಅವರು ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರವಾಗಬಹುದು. ಒಂದು ಪಕ್ಷ ಕೆ.ಎಲ್ ರಾಹುಲ್ ಅವರು, ನ್ಯೂಜಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ವಿಶ್ರಾಂತಿ ಬಯಸಿದರೆ, ಆ ಜಾಗವನ್ನು ಅಯ್ಯರ್ ತುಂಬುವ ನಿರೀಕ್ಷೆ ಕೂಡ ಇದೆ.  ಶ್ರೀಲಂಕಾ ತಂಡದ ಭಾರತ ಪ್ರವಾಸ, ಜನವರಿ 25ರಿಂದ ಆರಂಭಗೊಳ್ಳಲಿದ್ದು, ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಲಿದೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

ಇದನ್ನೂ ಓದಿ: Indian Army New Uniform: ವೈರಿಗಳ ಹುಟ್ಟಡಗಿಸಲು ಹೊಸ ಸಮವಸ್ತ್ರ ಧರಿಸಲಿದೆ ಭಾರತೀಯ ಸೇನೆ

(Shubman Gill likely to be middle order enforcer Vihari and Iyer to fight for other slot)

Comments are closed.