20 Bjp Mla Join Congress : ಬಿಜೆಪಿ ಗೂಡು ತೊರೆದ್ರಾ 20 ಶಾಸಕರು : ಸಿದ್ಧವಾಯ್ತು ಡಿಕೆ ಶಿವಕುಮಾರ್ ಮಾಸ್ಟರ್ ಪ್ಲ್ಯಾನ್

ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದೆ. ಆದರೆ ತೆರೆಮರೆಯಲ್ಲಿ ಮುಂದಿನ‌ಚುನಾವಣೆಗೆ ರಾಜ್ಯದ ರಾಜಕೀಯ ಪಕ್ಷಗಳು ಈಗಲೇ ಸಮರಕ್ಕೆ ಧುಮುಕಲು ಶಸ್ತ್ರಾಭ್ಯಾಸ ಆರಂಭಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿಯ 20 ಕ್ಕೂ (20 Bjp Mla Join Congress) ಹೆಚ್ಚು ಶಾಸಕರು ಕಾಂಗ್ರೆಸ್ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸ್ಪೋಟಕ ಸಂಗತಿಯೊಂದು ಬಯಲಿದೆ ಬಂದಿದ್ದು, ಯಾರೆಲ್ಲ‌ಕೈ ಆಶ್ರಯ ಬಯಸಿದ್ದಾರೆ ಎಂಬ ಫುಲ್ ಡಿಟೇಲ್ಸ್ ಇಲ್ಲಿದೆ.

ಕರ್ನಾಟಕ ಕಾಂಗ್ರೆಸ್ ಗೆ ಜೀವ ತುಂಬುವ, ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವ ಹಾಗೂ 2023 ಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವ ಕನಸಿನಲ್ಲಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್. 2023 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ಶತಾಯಗತಾಯ ಪಕ್ಷವನ್ನು ಬಲಗೊಳಿಸಲು ಹೊರಟಿರುವ ಡಿಕೆಶಿ ಬಿಜೆಪಿಯ ಶಾಸಕರನ್ನು ಸೆಳೆಯಲು ಸಿದ್ಧವಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ ಸೋತ ಕ್ಷೇತ್ರಗಳನ್ನೇ ಆಯ್ದುಕೊಂಡು ಅಲ್ಲಿ ಗೆಲುವು ಸಾಧಿಸಿದ ಬಿಜೆಪಿ ಶಾಸಕರನ್ನು ಡಿಕೆಶಿ ಕಾಂಗ್ರೆಸ್ ಗೆ ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ.

ಮೂಲಗಳ ಮಾಹಿತಿ ಪ್ರಕಾರ ಎರಡು ಭಾರಿ ನಾಯಕತ್ವ ಬದಲಾಯಿಸಿ ಕೊಂಡು ರಾಜ್ಯದಲ್ಲಿ ಅಧಿಕಾರ ಮುಂದುವರೆಸಿರುವ ಬಿಜೆಪಿ ಸರ್ಕಾರದ ವಿರುದ್ಧ ಹಲವು ಶಾಸಕರು ತೀವ್ರ ಅಸಮಧಾನದಲ್ಲಿದ್ದಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಹಲವು ಶಾಸಕರು ಬಿಜೆಪಿ ಆಂತರಿಕ ಆಡಳಿತ ಹಾಗೂ ಪಕ್ಷಪಾತ ಧೋರಣೆ ವಿರುದ್ಧ ಕೋಪಗೊಂಡಿದ್ದಾರಂತೆ. ಇದನ್ನೇ ಲಾಭಕ್ಕೆ ಬಳಸಿಕೊಳ್ತಿರೋ ಡಿಕೆಶಿ ಬೆಂಗಳೂರು ಬಿಜೆಪಿಯ ಮೂರು ಶಾಸಕರು ಹಾಗೂ ಬೆಳಗಾವಿಯ ಎರಡು ಶಾಸಕರನ್ನು ಡಿಕೆಶಿ ಮನವೊಲಿಸಿದ್ದಾರಂತೆ.

ಪಕ್ಷದ ವಿರುದ್ಧ ತೀವ್ರವಾಗಿ ಅಸಮಧಾನಗೊಂಡಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಇನ್ನೂ 15 ಕ್ಕೂ ಹೆಚ್ಚು ಶಾಸಕರು‌ ನೇರವಾಗಿ ಡಿಕೆಶಿ ಸಂಪರ್ಕದಲ್ಲಿದ್ದಾರಂತೆ. ಮುಂದಿನ ಚುನಾವಣೆಗೆ ಟಿಕೇಟ್ ಖಚಿತಪಡಿಸಿ ಸಾಕು ಬಂದು ಬಿಡುತ್ತೇವೆ ಎಂದು ಈ ಶಾಸಕರು ಡಿಕೆಶಿಗೆ ಭರವಸೆ ನೀಡಿದ್ದಾರಂತೆ. ಹಿರಿಯೂರು ಶಾಸಕಿ ಪೂರ್ಣಿಮಾ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವರನ್ನು ಕೈಬಿಟ್ಟಿರೋದು ನಿರಾಸೆ ತಂದಿದ್ದು ಎರಡನೇ ಭಾರಿ ಸಚಿವ ಸಂಪುಟ ವಿಸ್ತರಣೆ ಬಳಿಕ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರ ಪ್ರಯತ್ನಬೇಕು. ಆದರೆ ಅಧಿಕಾರದ ಪ್ರಶ್ನೆ ಬಂದಾಗ ಬಿಜೆಪಿ ಅದೇ ಹಳೆ ಮುಖಗಳಿಗೆ ಅವಕಾಶ ನೀಡುತ್ತಿದೆಯೇ ವಿನಃ ಬೇರೆ ಪಕ್ಷಕ್ಕಾಗಿ ದುಡಿಯುವವರಿಗೆ ಅವಕಾಶ ನೀಡುತ್ತಿಲ್ಲ ಅನ್ನೋದು ಅಸಮಧಾನಿತ ಶಾಸಕರ ಆಕ್ರೋಶ. ಇದೇ ಕಾರಣಕ್ಕೆ 20 ಕ್ಕೂ ಹೆಚ್ಚು ಶಾಸಕರು ಕೈಆಶ್ರಯ ಬಯಸುತ್ತಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಇದು ನಿಜವಾದರೇ ಮುಂದಿನ ಎಲೆಕ್ಷನ್ ನಲ್ಲಿ ಬಿಜೆಪಿ ಪಾಳಯ ಸಂಕಷ್ಟಕ್ಕೆ ಸಿಲುಕೋದು ಪಕ್ಕಾ ಎಂಬಂತಾಗಿದೆ.

ಇದನ್ನೂ ಓದಿ : ವೈರಿಗಳ ಹುಟ್ಟಡಗಿಸಲು ಹೊಸ ಸಮವಸ್ತ್ರ ಧರಿಸಲಿದೆ ಭಾರತೀಯ ಸೇನೆ

ಇದನ್ನೂ ಓದಿ : ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್‌ ಗೂ ಕೊರೋನಾ : ಡಿಕೆಗೂ ನಡೀತು ಟೆಸ್ಟ್: ಸೂಪರ್ ಸ್ಪ್ರೆಡರ್ ಆಯ್ತಾ ಮೇಕೆದಾಟು ಪಾದಯಾತ್ರೆ

(20 bjp mla join congress, dk Shivakumar master plan)

Comments are closed.