Sourav Ganguly admitted hospital : ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಆಸ್ಪತ್ರೆಗೆ ದಾಖಲು..!

Sourav Ganguly admitted hospital :ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಸೋಮವಾರ ರಾತ್ರಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಆರ್​ಟಿ ಪಿಸಿಆರ್​ ವರದಿಯಲ್ಲಿ ಅವರಿಗೆ ಕೋವಿಡ್​ ಪಾಸಿಟಿವ್​ ಬಂದಿದ್ದು ಕೂಡಲೇ ಅವರನ್ನು ಕೋಲ್ಕತ್ತಾದ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.

ಕೋವಿಡ್ ಸಾಂಕ್ರಾಮಿಕ ಶುರುವಾದಾಗಿನಿಂದ ಇದೇ ಮೊದಲ ಬಾರಿಗೆ ಸೌರವ್​ ಗಂಗೂಲಿಗೆ ಕೊರೊನಾ ಸೋಂಕು ತಗುಲಿದಂತಾಗಿದೆ. ಸೌರವ್​ ಗಂಗೂಲಿ ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಸ್ವೀಕರಿಸಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್​ ಗಂಗೂಲಿ ವೃತ್ತಿ ಪರ ಕಾರ್ಯದ ನಿಮಿತ್ತ ಸಾಕಷ್ಟು ಪ್ರಯಾಣವನ್ನು ಮಾಡಿದ್ದಾರೆ. 49 ವರ್ಷದ ಸೌರವ್​ ಗಂಗೂಲಿಯನ್ನು ಕೋಲ್ಕತ್ತಾದ ವುಡ್​ಲ್ಯಾಂಡ್​ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ವೈದ್ಯರು ಸೌರವ್​ ಗಂಗೂಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಸೌರವ್​ ಗಂಗೂಲಿ ಅವರಿಗೆ ಸೋಮವಾರ ರಾತ್ರಿ ಆರ್​ಟಿ ಪಿಸಿಆರ್​ ಪರೀಕ್ಷೆ ನಡೆಸಲಾಗಿತ್ತು. ಈ ವರದಿ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಓಮಿಕ್ರಾನ್​ ಆತಂಕ ಬೇರೆ ಇರೋದ್ರಿಂದ ಅವರನ್ನು ನಗರದ ಆಸ್ಪತ್ರೆಗೆ ದಾಖಲು ಮಾಡಿರೋದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ .

ಕೆಲ ಸಮಯದ ಹಿಂದಷ್ಟೇ ಸೌರವ್​ ಗಂಗೂಲಿ ಸಹೋದರ ಸ್ನೇಹಾಶಿಷ್​ ಗಂಗೂಲಿ ಕೂಡ ಕೋವಿಡ್​ ಸೋಂಕಿಗೆ ಒಳಗಾಗಿದ್ದರು. ಈ ವರ್ಷದ ಆರಂಭದಲ್ಲಿ ಹೃದಯಾಘಾತದ ಹಿನ್ನೆಲೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಸೌರವ್​ ಗಂಗೂಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಜಿಮ್​ ಮಾಡುತ್ತಿದ್ದ ವೇಳೆಯಲ್ಲಿ ಸೌರವ್​ ಗಂಗೂಲಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಗುಣಮುಖರಾಗಿದ್ದ ಅವರು ಬಿಸಿಸಿಐ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಇದನ್ನು ಓದಿ : Ghar Wapsi: ಘರ್​ ವಾಪಸಿ ಮಾಡಿದ ಒಂದೇ ಕುಟುಂಬದ 9 ಮಂದಿ: ಹಿಂದೂ ಧರ್ಮಕ್ಕೆ ಮರುಮತಾಂತರ

ಇದನ್ನೂ ಓದಿ : Kids register Covid vaccine: ಜನವರಿಯಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೋಂದಣಿಗೆ ಅನುಮತಿ..!

ಇದನ್ನೂ ಓದಿ : Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್‌

ಇದನ್ನೂ ಓದಿ : Jofra Archer IPL 2022 : ಎಬಿ ಡಿವಿಲಿಯರ್ಸ್ ಬೆನ್ನಲ್ಲೇ ಐಪಿಎಲ್‌ ಮೆಗಾ ಹರಾಜಿನಿಂದ ಹೊರ ಬಿದ್ದ ಖ್ಯಾತ ಆಟಗಾರ

Sourav Ganguly admitted to hospital after testing positive for Covid

Comments are closed.