Pro Kabaddi League Schedule: ಪ್ರೊ ಕಬಡ್ಡಿ ಲೀಗ್-9: ಡಿಸೆಂಬರ್ 15ಕ್ಕೆ ಸೆಮಿಫೈನಲ್ಸ್, ಡಿಸೆಂಬರ್ 17ಕ್ಕೆ ಫೈನಲ್

ಬೆಂಗಳೂರು: (Pro Kabaddi League Schedule) ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಫೈನಲ್ ಪಂದ್ಯ ಡಿಸೆಂಬರ್ 17ರಂದು ನಡೆಯಲಿದೆ. ಈ ಹಿಂದೆ ಲೀಗ್’ನ ಮೊದಲಾರ್ಧದ ವೇಳಾಪಟ್ಟಿಯನ್ನಷ್ಟೇ ಪ್ರಕಟಿಸಲಾಗಿತ್ತು. ಈಗ ಸಂಪೂರ್ಣ ವೇಳಾಪಟ್ಟಿ ಹೊರ ಬಿದ್ದಿದ್ದು, ಪ್ಲೇ ಆಫ್ ಪಂದ್ಯಗಳು ಡಿಸೆಂಬರ್ 13ರಿಂದ 17ರವರೆಗೆ ನಡೆಯಲಿವೆ. ಎರಡೂ ಎಲಿಮಿನೇಟರ್ ಪಂದ್ಯಗಳು ಡಿಸೆಂಬರ್ 13ರಂದು ನಡೆಯಲಿದ್ದು, ಸೆಮಿಫೈನಲ್-1 ಹಾಗೂ ಸೆಮಿಫೈನಲ್-2 ಪಂದ್ಯಗಳು ಡಿಸೆಂಬರ್ 15ರಂದು ನಡೆಯಲಿದೆ. ಫೈನಲ್ ಸೇರಿದಂತೆ ಎಲ್ಲಾ ಪ್ಲೇ ಆಫ್ ಪಂದ್ಯಗಳ ಆತಿಥ್ಯದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬೀಳಬೇಕಿದೆ.

ಸದ್ಯ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಲೀಗ್ ಪಂದ್ಯಗಳು ನಡೆಯುತ್ತಿದ್ದು, ನವೆಂಬರ್ 9ರಿಂದ ಪುಣೆ ಶಿವಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ದ್ವಿತೀಯಾರ್ಧದ ಪಂದ್ಯಗಳು ಆರಂಭವಾಗಲಿವೆ. ನವೆಂಬರ್ 18ರಿಂದ ಹೈದರಾಬಾದ್’ನ ಗಚ್ಚಿಬೌಲಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಪ್ರೊ ಕಬಡ್ಡಿ ಲೀಗ್-9: ಪ್ಲೇ ಆಫ್ ವೇಳಾಪಟ್ಟಿ (Pro Kabaddi League Schedule)

ಡಿಸೆಂಬರ್ 13: ಎಮಿಲಿನೇಟರ್ 1 & 2
ಡಿಸೆಂಬರ್ 15: ಸೆಮಿಫೈನಲ್ 1 & 2
ಡಿಸೆಂಬರ್ 17: ಫೈನಲ್

ಬೆಂಗಳೂರಿನಲ್ಲಿ ಅಕ್ಟೋಬರ್ 7ರಂದು ಆರಂಭವಾಗಿರುವ ಲೀಗ್ 5ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ನಡೆಯುವ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬುಲ್ಸ್ (Bengaluru Bulls) ತಂಡ ಬಲಿಷ್ಠ ಬೆಂಗಾಲ್ ವಾರಿಯರ್ಸ್ (Bengal Warriors) ತಂಡವನ್ನು ಎದುರಿಸಲಿದೆ. ಈಗಾಗಲೇ ಬೆಂಗಳೂರು ಬುಲ್ಸ್ ಆಡಿದ ಎರಡೂ ಪಂದ್ಯಗಳಲ್ಲಿ ತೆಲುಗು ಟೈಟನ್ಸ್ (34-29) ಹಾಗೂ ಪುಣೇರಿ ಪಲ್ಟನ್ (41-39) ವಿರುದ್ಧ ಗೆದ್ದು ಒಟ್ಟು 10 ಅಂಕಗಳನ್ನು ಸಂಪಾದಿಸಿ, ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.
ಬುಧವಾರ ನಡೆಯುವ 2ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ, ಯು.ಪಿ ಯೋಧಾ ತಂಡವನ್ನು ಎದುರಿಸಲಿದೆ.

ಪ್ರೊ ಕಬಡ್ಡಿ ಲೀಗ್-9: ಬುಧವಾರದ ಪಂದ್ಯಗಳು (ಅಕ್ಟೋಬರ್ 12)
ಬೆಂಗಳೂರು ಬುಲ್ಸ್ Vs ಬೆಂಗಾಲ್ ವಾರಿಯರ್ಸ್ (ರಾತ್ರಿ 7.30ಕ್ಕೆ)
ಯು.ಪಿ ಯೋಧಾ Vs ದಬಾಂಗ್ ಡೆಲ್ಲಿ ಕೆ.ಸಿ (ರಾತ್ರಿ 8.30ಕ್ಕೆ)
ಸ್ಥಳ: ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ ಕಟೌಟ್ ಭಾಗ್ಯ

ಇದನ್ನೂ ಓದಿ : Binny BCCI President : ಕನ್ನಡಿಗನಿಗೆ ಕ್ರಿಕೆಟ್ ಬಿಗ್ ಬಾಸ್ ಪಟ್ಟ..? ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ರೋಜರ್ ಬಿನ್ನಿ !

Pro Kabaddi League Schedule December 15th Semi Final and December 17th final

Comments are closed.