Sourav Ganguly next ICC chief : ಐಸಿಸಿಯಲ್ಲಿ ಶುರುವಾಗಲಿದ್ಯಾ ದಾದಾ ದರ್ಬಾರ್ ? ಐಸಿಸಿಗೆ ಗಂಗೂಲಿ ಹೊಸ ಬಾಸ್ ?

ಮುಂಬೈ: ಟೀಮ್ ಇಂಡಿಯಾದ ಮಾಜಿ ನಾಯಕ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (Board of Control for Cricket in India – BCCI) ಹಾಲಿ ಅಧ್ಯಕ್ಷ, ಬಂಗಾಳದ ಹುಲಿ ಖ್ಯಾತಿಯ ಸೌರವ್ ಗಂಗೂಲಿ (Sourav Ganguly next ICC chief) ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್’ನ (International Cricket Council – ICC) ನೂತನ ಮುಖ್ಯಸ್ಥರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.

2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗಂಗೂಲಿ (Sourav Ganguly), ಕಳೆದ ಎರಡೂ ಮುಕ್ಕಾಲು ವರ್ಷಗಳಿಂದ ಜಗತ್ತಿನ ಅತ್ಯಂತ ಶ್ರೀಮಂತ ಮಂಡಳಿಯ ಮುಖ್ಯಸ್ಥರಾಗಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ ಸೌರವ್ ಗಂಗೂಲಿ ಮತ್ತು ಮಂಡಳಿಯ ಕಾರ್ಯದರ್ಶಿ ಜೈ ಶಾ ಅವರ ಅಧಿಕಾರಾವಧಿಯ 2020ರ ಮಧ್ಯದಲ್ಲೇ ಮುಕ್ತಾಯವಾಗಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಇನ್ನೂ ಇವರ ಅಧಿಕಾರಾವಧಿಯಲ ಬಗ್ಗೆ ತೀರ್ಪು ನೀಡದೇ ಇರುವುದರಿಂದ ಅವಧಿ ಮುಗಿದರೂ ಕಳೆದೆರಡು ವರ್ಷಗಳಿಂದ ಇಬ್ಬರೂ ಬಿಸಿಸಿಐ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಮುಂದುವರಿದಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಸದ್ಯದಲ್ಲೇ ಕೆಳಗಿಳಿಯಲಿರುವ ಸೌರವ್ ಗಂಗೂಲಿ, ಐಸಿಸಿಯ ಮುಂದಿನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಹಾಲಿ ಐಸಿಸಿ ಮುಖ್ಯಸ್ಥರಾಗಿರುವ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ಸದ್ಯದಲ್ಲೇ ಮುಕ್ತಾಯಗೊಳ್ಳಲಿದ್ದು, ಆ ಸ್ಥಾನಕ್ಕೆ ಸೌರವ್ ಗಂಗೂಲಿ ನೇಮಕವಾಗುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ. ಆದರೆ ಇದು ಬಿಸಿಸಿಐ ಅಧ್ಯಕ್ಷ ಸ್ಥಾನದ ಬಗ್ಗೆ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪನ್ನು ಆಧರಿಸಿದ್ದು, ಒಂದು ವೇಳೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಗಂಗೂಲಿ ಕೆಳಗಿಳಿಯಲೇಬೇಕಾದ ಅನಿವಾರ್ಯತೆ ಎದುರಾಗದೆ, ಐಸಿಸಿ ಮುಖ್ಯಸ್ಥ ಸ್ಥಾನದ ರೇಸ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

“ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿದ್ದು, ಮುಂದಿನ ಐಸಿಸಿ ಮುಖ್ಯಸ್ಥನ ಸ್ಥಾನಕ್ಕೆ ಸೌರವ್ ಗಂಗೂಲಿ ಪ್ರಬಲ ಸ್ಪರ್ಧಿಯಾಗುವ ಸೂಚನೆಗಳು ಸಿಗುತ್ತಿವೆ. ಹಲವು ರಾಷ್ಟ್ರಗಳು ಸೌರವ್ ಗಂಗೂಲಿಗೆ ಬೆಂಬಲ ನೀಡುವ ಸಾಧ್ಯತೆಯಿದೆ” ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಭಾರತದ ಜಗಮೋಹನ್ ದಾಲ್ಮಿಯಾ (1997–2000), ಶರದ್ ಪವಾರ್ (2010–2012), ಎನ್. ಶ್ರೀನಿವಾಸನ್ (2014-2015) ಮತ್ತು ಶಶಾಂಕ್ ಮನೋಹರ್ (2015-2020) ಐಸಿಸಿಯ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು.

ಸೌರವ್ ಗಂಗೂಲಿ ಅಧಿಕಾರಾವಧಿಯಲ್ಲಿ ಬಿಸಿಸಿಐ ಒಂದಷ್ಟು ಪ್ರಮುಖ ಹೆಜ್ಜೆಗಳನ್ನು ಇಟ್ಟಿದ್ದು, ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ದಾಖಲೆಯ 48,390 ಕೋಟಿ ರೂ. ಮೊತ್ತಕ್ಕೆ ಮಾರಾಟವಾಗಿದೆ. ಕೋವಿಡ್ ಸಮಯದಲ್ಲೂ ಐಪಿಎಲ್ ಟೂರ್ನಿಯನ್ನು ಗಂಗೂಲಿ ನೇತೃತ್ವದ ಬಿಸಿಸಿಐ ಯಶಸ್ವಿಯಾಗಿ ಆಯೋಜಿಸಿತ್ತು.

ಇದನ್ನೂ ಓದಿ : World Test Championship Final : ಟೆಸ್ಟ್ ವಿಶ್ವಕಪ್ ಫೈನಲ್’ಗೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಆತಿಥ್ಯ

ಇದನ್ನೂ ಓದಿ : PV Sindhu Commonwealth Games : ಭಾರತದ ಧ್ವಜಧಾರಿಯಾಗಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ ಸಿಂಧೂ

Sourav Ganguly next ICC chief is likely to be the

Comments are closed.