accused is likely to be arrested : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ವ್ಯಕ್ತಿ ಬಂಧಿಸಿರುವ ಸಾಧ್ಯತೆ

ದಕ್ಷಿಣ ಕನ್ನಡ : accused is likely to be arrested : ಬಿಜೆಪಿ ಕಾರ್ಯಕರ್ತ, ಭಜರಂಗದಳ ನಾಯಕ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ ಪ್ರತಿಯೊಬ್ಬ ಹಿಂದೂ ಕಾರ್ಯಕರ್ತನ ಎದೆಯಲ್ಲಿ ಭಯವನ್ನು ಹುಟ್ಟು ಹಾಕಿದೆ. ನಾಳೆ ನನಗೂ ಇದೇ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ ಎಂಬ ಮಾತು ಕೇಸರಿ ಕಾರ್ಯಕರ್ತರ ಬಾಯಲ್ಲಿ ಕೇಳಿ ಬರ್ತಿದೆ. ಬಿಜೆಪಿ ನಾಯಕರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡುತ್ತಿದ್ದರೂ ಸಹ ಈ ಬಾರಿ ಆಶ್ವಾಸನೆಗಳನ್ನು ನಂಬಿಕೊಳ್ಳಲು ಯಾವೊಬ್ಬ ಹಿಂದೂ ಕಾರ್ಯಕರ್ತರು ತಯಾರಿಯಲ್ಲದೇ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.


ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಜನರ ಎದುರು ಮುಜುಗರ ಅನುಭವಿಸಿರುವ ಬಿಜೆಪಿ ಸರ್ಕಾರ ರಾಜ್ಯದ ಜನತೆಯ ವಿಶ್ವಾಸವನ್ನು ಮತ್ತೊಮ್ಮೆ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಸಾಹಸವನ್ನು ಮಾಡುತ್ತಿದೆ . ರಾಜ್ಯದ ಗೃಹ ಇಲಾಖೆ ಪೊಲೀಸ್​ ಅಧಿಕಾರಿಗಳಿಗೆ ಪ್ರಕರಣದಲ್ಲಿ ಕೂಲಂಕುಷ ತನಿಖೆಯನ್ನು ನಡೆಸುವಂತೆ ಸೂಚನೆ ನೀಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಆರೋಪಿಗಳು ಕೇರಳ ಮೂಲದವರು ಎಂಬ ಮಾಹಿತಿ ಲಭ್ಯವಾಗಿದ್ದು ಹೀಗಾಗಿ ಕೇರಳಕ್ಕೂ ತೆರಳಿರುವ ರಾಜ್ಯ ಪೊಲೀಸರು ಆರೋಪಿಗಳ ಹತ್ಯೆಗೆ ಬಲೆ ಬೀಸಿದ್ದಾರೆ.


ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಪೊಲೀಸರು ಈಗಾಗಲೇ 7 ಮಂದಿ ಎಸ್​ಡಿಪಿಐ ಕಾರ್ಯಕರ್ತರು ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ನಡುವೆ ಪೊಲೀಸರು ಈ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರವೀಣ್​ ನೆಟ್ಟಾರುವನ್ನು ಕೊಲ್ಲಲು ಬೈಕಿನಲ್ಲಿ ಬಂದಿದ್ದ ಮೂವರು ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಬೆಳ್ಳಾರೆಯ ನಿವಾಸಿ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.


ಇದರ ಜೊತೆಯಲ್ಲಿ ಬೈಕ್​ನಲ್ಲಿದ್ದ ಇನ್ನೂ ಇಬ್ಬರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು ಇವರು ಕೇರಳದವರು ಎಂದು ಹೇಳಲಾಗ್ತಿದೆ . ಆದರೆ ಈ ಬಗ್ಗೆ ಪೊಲೀಸ್​ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಮಂಗಳವಾರ ರಾತ್ರಿ 8:30ರ ಸುಮಾರಿಗೆ ಕೋಳಿ ಅಂಗಡಿ ಕ್ಲೋಸ್​ ಮಾಡಲು ಮನೆಗೆ ತೆರಳಲು ಪ್ರವೀಣ್​ ನೆಟ್ಟಾರು ಮುಂದಾಗುತ್ತಿದ್ದ ಸಂದರ್ಭದಲ್ಲಿ ಬೈಕ್​ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ತಲವಾರ್​ನಿಂದ ಪ್ರವೀಣ್​ ಮೇಲೆ ದಾಳಿ ನಡೆಸಿ ಕೊಲೆ ಮಾಡಿ ಎಸ್ಕೇಪ್​ ಆಗಿದ್ದರು.

ಇದನ್ನು ಓದಿ : Praveen Nettaru murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ 15ಕ್ಕೂ ಹೆಚ್ಚು ಮಂದಿ ವಶಕ್ಕೆ : ಆರಗ ಜ್ಞಾನೇಂದ್ರ ಮಾಹಿತಿ

ಇದನ್ನೂ ಓದಿ : Nutana Nettaru demands : ನನ್ನ ಪತಿ ಕೊಲೆ ಪ್ರಕರಣ ಎನ್​ಐಎಗೆ ವಹಿಸಿ : ರಾಜ್ಯ ಸರ್ಕಾರಕ್ಕೆ ಪ್ರವೀಣ್​ ನೆಟ್ಟಾರು ಪತ್ನಿ ಆಗ್ರಹ

Praveen Nettaru murder case: An accused is likely to be arrested

Comments are closed.