India Vs Bangladesh test series : ಬಾಂಗ್ಲಾ ವಿರುದ್ಧ ಭಾರತಕ್ಕೆ 188 ರನ್ ಜಯ, ರಾಹುಲ್ ಟೆಸ್ಟ್ ನಾಯಕತ್ವಕ್ಕೆ ಮೊದಲ ಗೆಲುವು

ಛಟ್ಟೋಗ್ರಾಮ್: ಆತಿಥೇಯ ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ (India Vs Bangladesh test series ) ಪಂದ್ಯವನ್ನು ಭಾರತ 188 ರನ್’ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಇದರೊಂದಿಗೆ ಕೆ.ಎಲ್ ರಾಹುಲ್ (KL Rahul) ನಾಯಕತ್ವದ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.ಇದು ಕನ್ನಡಿಗ ಕೆ.ಎಲ್ ರಾಹುಲ್ ಅವರ ಟೆಸ್ಟ್ ನಾಯಕತ್ವಕ್ಕೆ ಸಿಕ್ಕಿದ ಮೊದಲ ಗೆಲುವೂ ಹೌದು. ಈ ವರ್ಷಾರಂಭದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ರಾಹುಲ್ ನಾಯಕತ್ವದಲ್ಲಿ ಸೋಲು ಕಂಡಿತ್ತು.

ಗೆಲುವಿಗೆ 510 ರನ್’ಗಳ ಬೃಹತ್ ಗುರಿ ಬೆನ್ನಟ್ಟಿದ್ದ ಬಾಂಗ್ಲಾದೇಶ 4ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತ್ತು. ಅಂತಿಮ ದಿನದಾಟ ಮುಂದುವರಿಸಿದ ಆತಿಥೇಯ ತಂಡ, ತನ್ನ 2ನೇ ಇನ್ನಿಂಗ್ಸ್’ನಲ್ಲಿ 324 ರನ್’ಗಳಿಗೆ ಆಲೌಟಾಯಿತು. 5ನೇ ದಿನದಾಟ ಆರಂಭಗೊಂಡ ಕೇವಲ 52 ನಿಮಿಷಗಳೊಳಗೆ ಬಾಂಗ್ಲಾದೇಶವನ್ನು ಆಲೌಟ್ ಮಾಡಿದ ಭಾರತದ ಬೌಲರ್’ಗಳು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು. ಸೋಲಿನ ನಡುವೆಯೂ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ 108 ಎಸೆತಗಳಲ್ಲಿ ಆರು ಸಿಕ್ಸರ್’ಗಳ ನೆರವಿನಿಂದ 84 ರನ್ ಸಿಡಿಸಿ ಮಿಂಚಿದರು.

India Vs Bangladesh test series : ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ :

ಭಾರತ ಪರ ಆಲ್ರೌಂಡ್ ಪ್ರದರ್ಶನ ತೋರಿದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭಾರತದ ಪ್ರಥಮ ಇನ್ನಿಂಗ್ಸ್’ನಲ್ಲಿ 40 ರನ್ ಗಳಿಸಿ, ಅಶ್ವಿನ್ ಜೊತೆ 8ನೇ ವಿಕೆಟ್’ಗೆ 92 ರನ್’ಗಳ ಜೊತೆಯಾಟವಾಡಿದ್ದ ಕುಲ್ದೀಪ್ ಯಾದವ್, ಬೌಲಿಂಗ್’ನಲ್ಲೂ ಮಿಂಚಿ ಪಂದ್ಯದಲ್ಲಿ ಒಟ್ಟು 8 ವಿಕೆಟ್ ಕಬಳಿಸಿದರು. ಪ್ರಥಮ ಇನ್ನಿಂಗ್ಸ್’ನಲ್ಲಿ 40 ರನ್ನಿತ್ತು 5 ವಿಕೆಟ್ ಪಡೆದಿದ್ದ ಕುಲ್ದೀಪ್ ಯಾದವ್, ತಮ್ಮ ಕಂಬ್ಯಾಕ್ ಟೆಸ್ಟ್ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠರಾಗಿ ಮೂಡಿ ಬಂದರು.

ಇದನ್ನೂ ಓದಿ : India vs Bangladesh test : ಭಾರತದ ಗೆಲುವಿಗೆ 4 ವಿಕೆಟ್ ಬಾಕಿ, ಬಾಂಗ್ಲಾ ಗೆಲುವಿಗೆ ಬೇಕು 241 ರನ್

ಇದನ್ನೂ ಓದಿ : Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಇದನ್ನೂ ಓದಿ : KL Rahul Athiya Shetty wedding : “ಮಗಳ ಮದುವೆಯ ದಿನಾಂಕ ಫಿಕ್ಸ್ ಆದ್ರೆ ಹೇಳಿ, ನಾನೂ ಬರುವೆ ” ಹೀಗಂದರೇಕೆ ಸುನೀಲ್ ಶೆಟ್ಟಿ ?

2021ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿದ ನಂತರ ಕುಲ್ದೀಪ್ ಯಾದವ್’ಗೆ ಭಾರತ ಪರ ಮತ್ತೆ ಟೆಸ್ಟ್ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ತಮ್ಮ ಕಂಬ್ಯಾಕ್ ಪಂದ್ಯವನ್ನೇ ಕುಲ್ದೀಪ್ ಯಾದವ್ ಸ್ಮರಣೀಯವಾಗಿಸಿಕೊಂಡಿದ್ದಾರೆ. ಸರಣಿಯ 2ನೇ ಟೆಸ್ಟ್ ಪಂದ್ಯ ಗುರುವಾರ (ಡಿಸೆಂಬರ್ 22) ಮೀರ್’ಪುರ್’ನಲ್ಲಿ ಆರಂಭವಾಗಲಿದೆ.

India Vs Bangladesh test series : India won by 188 runs against Bangladesh, Rahul’s first win as Test captain

Comments are closed.