Dinesh Karthik thanks Aswhin : “ನನ್ನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್” ಅಶ್ವಿನ್’ಗೆ ಹೀಗಂದಿದ್ಯಾಕೆ ದಿನೇಶ್ ಕಾರ್ತಿಕ್?

ಸಿಡ್ನಿ: (Dinesh Karthik thanks Aswhin)ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಟೂರ್ನಿಯ (T20 World Cup 2022) ತನ್ನ 2ನೇ ಪಂದ್ಯಕ್ಕಾಗಿ ಸಿಡ್ನಿಗೆ ಬಂದಿಳಿದಿದ್ದು, ಮಂಗಳವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ (Sydeny Cricket Ground) ಅಭ್ಯಾಸ ನಡೆಸಿದೆ. ಭಾರತ ತಂಡ ಸಿಡ್ನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರಿಗೆ ದಿನೇಶ್ ಕಾರ್ತಿಕ್ (Dinesh Karthik) ಬಿಗ್ ಥ್ಯಾಂಕ್ಸ್ ಹೇಳಿದ್ದಾರೆ. “ನನ್ನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್” ಎಂದು ಅಶ್ವಿನ್’ಗೆ ಡಿಕೆ ಹೇಳಿದ್ದಾರೆ. ಈ ವೀಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

ಅಷ್ಟಕ್ಕೂ ಅಶ್ವಿನ್ ಅವರಿಗೆ ದಿನೇಶ್ ಕಾರ್ತಿಕ್ ಥ್ಯಾಂಕ್ಸ್ (Dinesh Karthik thanks Aswhin)ಹೇಳಿದ್ದೇಕೆ ಅಂತ ನೋಡಿದ್ರೆ ಸಿಗುವ ಉತ್ತರ ಪಾಕಿಸ್ತಾನ ವಿರುದ್ಧದ ಆ ರೋಚಕ ಪಂದ್ಯ. ಗೆಲ್ಲಲು ಪಾಕಿಸ್ತಾನ ಒಡ್ಡಿದ 160 ರನ್’ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತಕ್ಕೆ ಕೊನೇ ಓವರ್’ನಲ್ಲಿ ಗೆಲ್ಲಲು 16 ರನ್’ಗಳು ಬೇಕಿದ್ದವು. ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಔಟಾದಾಗ ಕ್ರೀಸ್’ಗಳಿಂದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಎದುರಿಸಿದ ಮೊದಲ ಎಸೆತದಲ್ಲಿ 1 ರನ್ ಗಳಿಸಿದ್ದರು. 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ 2 ರನ್ ಗಳಿಸಿದ್ರೆ, ಫುಲ್ ಟಾಸ್ ಆಗಿ ಬಂದ 4ನೇ ಎಸೆತವನ್ನು ವಿರಾಟ್ ಕೊಹ್ಲಿ ಸಿಕ್ಸರ್’ಗಟ್ಟಿದ್ದರು. ಭಾರತದ ಅದೃಷ್ಟಕ್ಕೆ ಆ ಎಸೆತ ನೋಬಾಲ್ ಆಗಿತ್ತು.

ಮುಂದಿನ ಎಸೆತ ಫ್ರೀ ಹಿಟ್ ಆಗಿದ್ದರಿಂದ ವಿರಾಟ್ ಕೊಹ್ಲಿ ಬೌಲ್ಡ್ ಆದ್ರ ಚೆಂಡು ಸ್ಟಂಪ್’ಗೆ ಬಡಿದು ಥರ್ಡ್ ಮ್ಯಾನ್ ಕಡೆ ಸಾಗಿದ ವೇಳೆ ಕೊಹ್ಲಿ ಮತ್ತು ಕಾರ್ತಿಕ್ ಮೂರು ರನ್ ಕದಿಯುವಲ್ಲಿ ಸಫಲರಾಗಿದ್ದರು. ಹೀಗಾಗಿ ಕೊನೆಯ 2 ಎಸೆತಗಳಲ್ಲಿ ಭಾರತದ ಗೆಲುವಿಗೆ 2 ರನ್’ಗಳ ಅವಶ್ಯಕತೆಯಿತ್ತು. ಆ ಸಂದರ್ಭದಲ್ಲಿ ಬೇಜವಾಬ್ದಾರಿ ಪ್ರದರ್ಶಿಸಿದ್ದ ದಿನೇಶ್ ಕಾರ್ತಿಕ್ ಸ್ಟಂಪ್ ಔಟ್ ಆಗಿದ್ದರು. ಆಗ ಸೋಲಿನ ಸುಳಿಗೆ ಸಿಲುಕಿದ್ದ ಭಾರತವನ್ನು ಕೊನೇ ಎಸೆತದಲ್ಲಿ ರವಿಚಂದ್ರನ್ ಅಶ್ವಿನ್ ಗೆಲ್ಲಿಸಿದ್ದರು.

ಇದನ್ನೂ ಓದಿ : T20 World Cup 2022 : ಟಿ20 ವಿಶ್ವಕಪ್: ಸಕ್ಸಸ್’ಫುಲ್ ಚೇಸ್’ನಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ 500ಕ್ಕೂ ಹೆಚ್ಚು!

ಇದನ್ನೂ ಓದಿ : Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ

ಇದನ್ನೂ ಓದಿ : India Practice session : ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಟೀಮ್ ಇಂಡಿಯಾ ಅಭ್ಯಾಸ, ನೆಟ್ಸ್’ನಲ್ಲಿ ಬೆವರಿಳಿಸಿದ ಕೊಹ್ಲಿ, ರೋಹಿತ್, ರಾಹುಲ್

ಒಂದು ವೇಳೆ ಪಾಕಿಸ್ತಾನ ವಿರುದ್ಧ ಭಾರತ ಸೋತಿದ್ದರೆ ದಿನೇಶ್ ಕಾರ್ತಿಕ್ ಭಾರೀ ಟೀಕೆಗೆ ಗುರಿಯಾಗಬೇಕಿತ್ತು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಫಿನಿಷರ್ ಜವಾಬ್ದಾರಿ ಹೊತ್ತಿರುವ ಡಿಕೆ, ಸುಲಭವಾಗಿ ಮುಗಿಸಬೇಕಿದ್ದ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ ಔಟಾಗಿದ್ದಕ್ಕೆ ಕ್ರಿಕೆಟ್ ಪ್ರಿಯರು, ಕ್ರಿಕೆಟ್ ಪಂಡಿತರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆಯಿತ್ತು. ಆದರೆ ಕೊನೆಯದಲ್ಲಿ ಆರ್.ಅಶ್ವಿನ್ ಪಂದ್ಯ ಗೆಲ್ಲಿಸುವ ಮೂಲಕ ದಿನೇಶ್ ಕಾರ್ತಿಕ್ ಅವರನ್ನು ಸಂಭಾವ್ಯ ಟೀಕೆಯಂದ ಪಾರು ಮಾಡಿದ್ದರು. ಈ ಕಾರಣಕ್ಕೆ ದಿನೇಶ್ ಕಾರ್ತಿಕ್ ಅಶ್ವಿನ್ ಅವರಿಗೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ತಂಡದ ಕ್ಯಾಮರಾಮನ್ ಕಾಣುತ್ತಿದ್ದಂತೆ ಥ್ಯಾಂಕ್ಸ್ ಹೇಳಿದ್ದಾರೆ. ಟಿ20 ವಿಶ್ವಕಪ್ ಸೂಪರ್-12 ಹಂತದಲ್ಲಿ ಭಾರತ ತಂಡ ತನ್ನ 2ನೇ ಲೀಗ್ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ (Sydney Cricket Ground) ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ.

T20 World Cup 2022 Why did Dinesh Karthik say “Thank you for saving me” to Ashwin?

Comments are closed.