Mirracle Drink : ದೇಹದ ಹಲವು ಅರೋಗ್ಯ ಸಮಸ್ಯೆಗಳಿಗೆ ಕುಡಿಯಿರಿ ಮಿರಾಕಲ್ ಡ್ರಿಂಕ್

( Mirracle Drink ) ಏನಪ್ಪಾ ಇದು ಮಿರಾಕಲ್ ಡ್ರಿಂಕ್ ಅಂತ ಆಲೋಚನೆ ಮಾಡ್ತಾ ಇದ್ದೀರಾ? ಅತಿ ಹೆಚ್ಚು ಅರೋಗ್ಯಕರ ಅಂಶಗಳನ್ನು ಹೊಂದಿರುವ ಹಾಗೂ ಸುಲಭವಾಗಿ ಮನೆಯಲ್ಲಿಯೇ ತಯಾರಿಸುವ ಒಂದು ಪರಿಣಾಮಕಾರಿಯಾದಂತಹ ಮನೆಮದ್ದು(Mirracle Drink). ತರಕಾರಿ ಹಾಗೂ ಹಣ್ಣುಗಳನ್ನು ಬಳಸಿ ತಯಾರಿಸುವ ಒಂದು ಸುಲಭವಾದ ವಿಧಾನ ಅಂತಾನೆ ಹೆಳ್ಬಹುದು. ಈ ಡ್ರಿಂಕ್ ನಮ್ಮ ಸಂಪೂರ್ಣ ಅರೋಗ್ಯವನ್ನು ಕಾಪಾಡಿಕೊಳ್ಳಲು ಅತೀ ಮುಖ್ಯ ಪಾತ್ರವನ್ನ ವಹಿಸುತ್ತೆ. ಮುಖ್ಯವಾಗಿ ನಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೆಗೆದು ಹಾಕಿ, ದೇಹದಲ್ಲಿನ ರಕ್ತವನ್ನು ಶುದ್ಧಿ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ.

ಹಾಗಿದ್ದರೆ ಈ ಜ್ಯೂಸ್(Mirracle Drink) ಮಾಡೋದು ಹೇಗೆ ಅಂತ ತಿಳಿಯೋಣ.

ಈ ಜ್ಯೂಸ್ ಮಾಡಲು ಬೇಕಾದ ಸಾಮಗ್ರಿಗಳು ;
ಕ್ಯಾರೆಟ್
ಸೇಬು ಹಣ್ಣು
ಬೀಟ್ರೂಟ್
ಶುಂಠಿ
ನಿಂಬೆ ರಸ

ಮಾಡುವ ವಿಧಾನ :
ಇಲ್ಲಿ ತೆಗೆದುಕೊಂಡಿರುವ ತರಕಾರಿಗಳನ್ನು ಚೆನ್ನಾಗಿ ತೊಳೆದು ನಂತರ ಸಿಪ್ಪೆಯನ್ನು ತೆಗೆಯಿರಿ . ನಂತರ ಸಿಪ್ಪೆಯನ್ನು ತೆಗೆದ ಕ್ಯಾರೆಟ್, ಬೀಟ್ರೂಟ್ ಹಾಗೂ ಸೇಬು ಹಣ್ಣನು ಕತ್ತರಿಸಿ ಒಂದು ಮಿಕ್ಸಿ ಪಾತ್ರೆಗೆ ಹಾಕಿಕೊಳ್ಳಿ. ಅದಕ್ಕೆ ಒಂದು ಚಿಕ್ಕ ತುಂಡು ಶುಂಠಿಯನ್ನು ಸೇರಿಸಿಕೊಳ್ಳಿ . ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಸೋಸಿಕೊಂಡು ಅದಕ್ಕೆ ಒಂದು ಚಮಚದಷ್ಟು ನಿಂಬೆ ರಸವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ .

ಇದನ್ನೂ ಓದಿ : Dinesh Karthik thanks Aswhin : “ನನ್ನನ್ನು ಉಳಿಸಿದ್ದಕ್ಕೆ ಥ್ಯಾಂಕ್ಸ್” ಅಶ್ವಿನ್’ಗೆ ಹೀಗಂದಿದ್ಯಾಕೆ ದಿನೇಶ್ ಕಾರ್ತಿಕ್?

ಆರೋಗ್ಯಕರವಾದ ಮಿರಾಕಲ್ ಜ್ಯೂಸ್ ಅಥವಾ ABC ಜ್ಯೂಸ್ ಈಗ ಸಿದ್ಧ. ಪ್ರತಿದಿನ ಬೆಳಿಗ್ಗೆ ಅಥವಾ ವಾರಕ್ಕೆ ಎರಡು ಭಾರಿ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ನಿಮಗೆ ತುಂಬಾ ಒಳ್ಳೆಯ ಹಾಗೂ ಪರಿಣಾಮಕಾರಿಯಾದಂತಹ ಫಲಿತಾಂಶ ಸಿಗುತ್ತದೆ. ಮನುಷ್ಯನ ದೇಹದಲ್ಲಿ ಆಗುವ ಅತೀ ಹೆಚ್ಚಿನ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ . ಪ್ರತಿದಿನ ಇದನ್ನು ಕುಡಿಯುವುದರಿಂದ ನಮ್ಮ ಆರೋಗ್ಯವನ್ನು ಸುರಕ್ಷಿತಗೊಳಿಸಬಹುದು ಹಾಗೂ ದೇಹದ ಕಾಂತಿಯನ್ನು ಕೂಡ ಕಾಪಾಡಿಕೊಳ್ಳಬಹುದು. ತರಕಾರಿಗಳಿಂದ ತಯಾರಿಸಲ್ಪಡುವ ಈ ಡ್ರಿಂಕ್‌ ದೇಹದಲ್ಲಿನ ಕೆಂಪು ರಕ್ತ ಕಣ ಹಾಗೂ ಹಿಮೋಗ್ಲೋಬಿನ್ ಅಂಶವನ್ನು ವೃದ್ಧಿಸುತ್ತದೆ. ಇದನ್ನು ಕುಡಿಯುವುದರಿಂದ ನಿಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಹಾಗೂ ದೇಹದಲ್ಲಿನ ಶಕ್ತಿಯನ್ನು ವೃದ್ಧಿಸುವಲ್ಲಿ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಹೃದಯಕ್ಕೆ ಸಂಬಂಧಿಸಿದ ರಕ್ತದೊತ್ತಡ, ಕೊಲೆಸ್ಟ್ರೋಲ್ ಅನ್ನು ಕಡಿಮೆ ಮಾಡುವುದಲ್ಲದೆ ಅತಿಯಾದ ಹಸಿವನ್ನು ಕೂಡ ತಡೆಗಟ್ಟುತ್ತದೆ.

ಇದನ್ನೂ ಓದಿ : Horoscope Today : ಹೇಗಿದೆ ಬುಧವಾರದ ದಿನಭವಿಷ್ಯ (26.10.2022)

ಜನರಲ್ಲಿ ಆಗಾಗ ಹುಷಾರಿಲ್ಲದ ರೀತಿ ಆಗುವುದು, ಸುಸ್ತಾಗುವುದು ಇದೆಲ್ಲ ಸರ್ವೇ ಸಾಮಾನ್ಯ. ಹಾಗೆ ಉರಿ ಊತದಂತಹ ಸಮಸ್ಯೆಗಳು , ಸುಸ್ತು ಕಾಣಿಸಿಕೊಂಡಲ್ಲಿ ಈ ಜ್ಯೂಸ್ ಅನ್ನು ಮಾಡಿ ಕುಡಿದರೆ ಅತಿ ವೇಗವಾಗಿ ಸಮಸ್ಯೆಗಳನ್ನು ಕಡಿಮೆ ಮಾಡಿ ಕೊಳ್ಳಬಹುದು.

ಎಲ್ಲರಿಗೂ ತಿಳಿದಿರೋ ಹಾಗೆ ಇದರಲ್ಲಿ ಕ್ಯಾರೆಟ್ ಬಳಸಿರೋದ್ರಿಂದ ಇದು ಕಣ್ಣಿನ ಸಮಸ್ಯೆಗೆ ತುಂಬಾನೇ ಉಪಯೋಗವಾಗುವಂತದ್ದು. ಕ್ಯಾರೆಟ್ ನಲ್ಲಿನ ವಿಟಮಿನ್ ಸಿ ಅಂಶವು ಕಣ್ಣಿಗೆ ತುಂಬಾನೇ ಒಳ್ಳೇದು. ಕಚೇರಿಯಲ್ಲಿ ಲ್ಯಾಪ್ಟಾಪ್, ಮೊಬೈಲ್ ಮುಂದೆ ಕುಳಿತು ಕೆಲಸ ಮಾಡುವವರು ಇದನ್ನ ದಿನನಿತ್ಯ ಕುಡಿದರೆ ಕಣ್ಣಿನ ಅರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು. ಹಾಗೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡ ಇದು ತುಂಬಾನೇ ಒಳ್ಳೆಯದು ಮತ್ತು ಪರಿಣಾಮಕಾರಿ.

ಇದನ್ನೂ ಓದಿ : M.S Dhoni: ಸಿನಿರಂಗಕ್ಕೆ ಎಂಟ್ರಿ ಕೊಟ್ಟಿರುವ ಧೋನಿ ಚೊಚ್ಚಲ ಚಿತ್ರ ಯಾವುದು ಗೊತ್ತಾ

ಕೆಲವರಲ್ಲಿ ಬಾಯಿಯಿಂದ ಬರುವ ದರ್ವಾಸನೆಯನ್ನು ಕೂಡ ತಡೆಗಟ್ಟಬಹುದು. ಇದರಲ್ಲಿನ ನಿಂಬೆರಸ ಗ್ಯಾಸ್ಟ್ರೀಕ್‌ ಸಮಸ್ಯೆ ಮತ್ತು ಜೀರ್ಣ ಕ್ರಿಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ . ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ಅತಿಯಾದ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೆ , ಋತುಚಕ್ರ ಸರಿಯಾಗಿ ಆಗದೆ ಇದ್ದಲ್ಲಿ ಪ್ರತಿದಿನ ಈ ಜ್ಯೂಸ್‌ ಅನ್ನು ಕುಡಿಯುವುದರಿಂದ ಹೊಟ್ಟೆ ನೋವು ಬರುವುದನ್ನು ತಡೆಯಬಹುದು ಮತ್ತು ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ .
ಇದರಲ್ಲಿನ ಬೀಟ್‌ ರೂಟ್‌ ನ ಕೆಲವು ವಿಟಮಿನ್‌ ಹಾಗೂ ಕೆಲವು ಅಂಶಗಳು ಮುಖದಲ್ಲಿನ ಕಾಂತಿಯನ್ನು ಹೆಚ್ಚಿಸಿ , ಮುಖಕ್ಕೆ ಹೊಳಪನ್ನು ನೀಡುವಲ್ಲಿಯೂ ಕೂಡ ಇದು ಪರಿಣಾಮಕಾರಿಯಾಗಿದೆ. ಹಾಗೂ ಬೀಟ್ರೂಟ್‌ ದೇಹದಲ್ಲಿ ರಕ್ತ ಹೆಚ್ಚಿಸುವಲ್ಲಿ ಕೂಡ ಕೆಲಸ ಮಾಡುತ್ತದೆ.

ಇದನ್ನೂ ಓದಿ : Man Fires Multiple Rockets: ಜನರನ್ನು ಬೆದರಿಸಲೆಂದೇ ಪಟಾಕಿ ಸಿಡಿಸಿದ ಭೂಪ : ಪೊಲೀಸರಿಂದ ಕಿಡಿಗೇಡಿಗಾಗಿ ತಲಾಶ್​

ಮಾನವನ ದೇಹದಲ್ಲಿ ಆಗುವ ಅತಿ ಹೆಚ್ಚು ಅರೋಗ್ಯ ಸಮಸ್ಯೆಗಳಿಗೆ ಒಂದೇ ರೀತಿಯಲ್ಲಿ ಸುಲಭವಾದ ಪರಿಹಾರ ಕಂಡುಕೊಳ್ಳಬೇಕಾದಲ್ಲಿ ಸೇವಿಸಿ ಈ ABC ಡ್ರಿಂಕ್ ಅಥವಾ ಮಿರಾಕಲ್‌ ಜ್ಯೂಸ್‌.

(Miracle Drink) Are you thinking that this is a miracle drink? An effective home remedy (Miracle Drink) that contains the most unhealthy ingredients and is easily prepared at home. It can be said that it is an easy way to prepare using vegetables and fruits

Comments are closed.