Shreyas Iyer Tulunadu link : ತುಳುನಾಡಿನ ದೈವಾರಾಧನೆ ಬಗ್ಗೆ ಶ್ರೇಯಸ್ ಅಯ್ಯರ್ ಅಚ್ಚರಿಯ ಮಾತು, ಮುಂಬೈಕರ್’ಗೂ ತುಳುನಾಡಿದೂ ಇರೋ ಸಂಬಂಧ ಎಂಥದ್ದು ಗೊತ್ತಾ?

ಮುಂಬೈ: (Shreyas Iyer Tulunadu link) ಮುಂಬೈ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟ್ಸ್’ಮನ್. ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ಶ್ರೇಯಸ್ ಅಯ್ಯರ್, ಐಪಿಎಲ್’ನಿಂದ ಹೊರಗುಳಿದಿದ್ದಾರೆ. ಇತ್ತೀಚೆಗಷ್ಟೇ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಅಯ್ಯರ್ ಮುಂದಿನ ತಿಂಗಳು ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final- WTC final 2023) ಪಂದ್ಯಕ್ಕೂ ಅಲಭ್ಯರಾಗಿದ್ದಾರೆ.

28 ವರ್ಷದ ಶ್ರೇಯಸ್ ಅಯ್ಯರ್ ಮುಂಬೈನವರಾದರೂ ತುಳುನಾಡಿನ ಜೊತೆ ಅವರಿಗೆ ನಂಟಿದೆ. ಅದೇ ನಂಟಿನಲ್ಲಿ ಶ್ರೇಯಸ್ ಅಯ್ಯರ್, ತುಳುನಾಡಿನ ದೈವಾರಾಧನೆ ಬಗ್ಗೆ ಮಾತನಾಡಿದ್ದಾರೆ. “ಧರ್ಮದೈವ” ಹೆಸರಿನಲ್ಲಿ ಸಿನಿಮಾವೊಂದು ಬರುತ್ತಿದ್ದು, ಈ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಗೊಳಿಸಿ ದೈವಾರಾಧನೆ ಬಗ್ಗೆ ಶ್ರೇಯಸ್ ಅಯ್ಯರ್ ಕೆಲ ಮಾತುಗಳನ್ನಾಡಿದ್ದಾರೆ.

“ನನ್ನೆಲ್ಲಾ ತುಳುವ ಸ್ನೇಹಿತರಿಗೆ ನನ್ನ ಹೃದಯಸ್ಪರ್ಶಿ ಶುಭಾಶಯಗಳು. ದೈವಾರಾಧನೆ ತುಳುನಾಡಿನ ದೈವಿಕ ಶಕ್ತಿ ಮತ್ತು ಅವಿಭಾಜ್ಯ ಅಂಗ. ಆ ಶಕ್ತಿಯನ್ನು ಜಗತ್ತಿಗೆ ತೋರಿಸಲು ಮುಂದಾಗಿರುವ ಧರ್ಮದೈವ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರದ ಮೊದಲ ಫೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ” ಎಂದು ವೀಡಿಯೊ ಸಂದೇಶದಲ್ಲಿ ಶ್ರೇಯಸ್ ಅಯ್ಯರ್ (Shreyas Iyer Tulunadu link) ಹೇಳಿದ್ದಾರೆ.

ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ ಮೂಲತಃ ಕೇರಳದವರು. ತಾಯಿ ರೋಹಿಣಿ ಅಯ್ಯರ್ ದಕ್ಷಿಣ ಕನ್ನಡ ಜಿಲ್ಲೆಯವರು. ಹೀಗಾಗಿ ಅಯ್ಯರ್ ಅವರಿಗೆ ತುಳುನಾಡಿ ನಂಟಿದೆ (Shreyas Iyer Tulunadu link) . ತಾಯಿ ರೋಹಿಣಿ ತುಳು ಮಾತನಾಡುತ್ತಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಕೂಡ ಅಲ್ಪ ಸ್ವಲ್ಪ ತುಳು ಭಾಷೆ ಮಾತನಾಡುತ್ತಾರೆ.

ಬಲಗೈ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ ಭಾರತ ಪರ ಇದುವರೆಗೆ 10 ಟೆಸ್ಟ್, 42 ಏಕದಿನ ಹಾಗೂ 49 ಟಿ20 ಪಂದ್ಯಗಳನ್ನಾಡಿದ್ದು, 3 ಶತಕ ಮತ್ತು 26 ಅರ್ಧಶತಕಗಳನ್ನು ಬಾರಿಸಿದ್ದಾರೆ. ಸದ್ಯ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಅಯ್ಯರ್, ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ವೇಳೆಗೆ ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ : Virat Kohli Vs Shubman Gill : ಮ್ಯಾಚ್, ರನ್, ಸರಾಸರಿ, ಸ್ಟ್ರೈಕ್‌ರೇಟ್ ಎಲ್ಲವೂ ಸೇಮ್ ಟು ಸೇಮ್, ಇದು ಕಿಂಗ್-ಪ್ರಿನ್ಸ್ ಮ್ಯಾಜಿಕ್

ಇದನ್ನೂ ಓದಿ : KL Rahul out : ಎಲ್‌ಎಸ್‌ಜಿ ಬಿಗ್ ಶಾಕ್, ಸಿಎಸ್‌ಕೆ ವಿರುದ್ಧದ ಪಂದ್ಯದಿಂದ ಕ್ಯಾಪ್ಟನ್ ರಾಹುಲ್ ಔಟ್

Comments are closed.