ಲಂಡನ್: ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಮತ್ತು ಆಲ್ರೌಂಡರ್ ರವೀಂದ್ರ ಜಡೇಜ ಭಾರತ ಟೆಸ್ಟ್ ತಂಡದ ಟಾಪ್ ಸ್ಪಿನ್ನರ್”ಗಳು. ಇವರಿಬ್ಬರು ಟೆಸ್ಟ್ ಕ್ರಿಕೆಟ್”ನಲ್ಲಿ ಒಟ್ಟು 684 ವಿಕೆಟ್”ಗಳನ್ನು ಕಬಳಿಸಿದ್ದಾರೆ. ಈಗ ಟೀಮ್ ಇಂಡಿಯಾ ಟೆಸ್ಟ್ ತಂಡಕ್ಕೊಬ್ಬ ಹೊಸ ಸ್ಪಿನ್ನರ್ (Team India has got New Spinner) ಸಿಕ್ಕಿದ್ದಾನೆ. ಆತ ಬೇರಾರೂ ಅಲ್ಲ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ. ಭಾರತ ಟೆಸ್ಟ್ ತಂಡದ ಬ್ಯಾಟಿಂಗ್ ಆಧಾರಸ್ಥಂಭವಾಗಿರುವ ಪೂಜಾರ ಸ್ಪಿನ್ನರ್ ಆಗಿದ್ದು ಯಾವಾಗ ಅನ್ನೋ ಪ್ರಶ್ನೆ ನಿಮ್ಮನ್ನುಕಾಡಬಹುದು. ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
An over of @cheteshwar1 bowling. 🚨 pic.twitter.com/I4PdyeCxCx
— Sussex Cricket (@SussexCCC) July 13, 2022
ಬ್ಯಾಟಿಂಗ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಇಂಗ್ಲೆಂಡ್”ನ ಕೌಂಟಿ ಕ್ರಿಕೆಟ್”ನಲ್ಲಿ ಲೆಗ್ ಸ್ಪಿನ್ ಬೌಲಿಂಗ್ ಮಾಡಿದ್ದಾರೆ (Cheteshwar Pujara bowls for Sussex). ಸಸೆಕ್ಸ್ ತಂಡದ ಪರ ಆಡುತ್ತಿರುವ ಪೂಜಾರ, ಲೀಸೆಸ್ಟರ್”ಶೈರ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತಿರುವ ವೀಡಿಯೊವನ್ನು ಸಸೆಕ್ಸ್ ಕ್ರಿಕೆಟ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. ಸೆಸ್ಟರ್’ಶೈರ್ ವಿರುದ್ಧದ ಪಂದ್ಯದಲ್ಲಿ ಪೂಜಾರ ಒಂದು ಓವರ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿ 8 ರನ್ ನೀಡಿದ್ದಾರೆ.
ಪ್ರಸಕ್ತ ಇಂಗ್ಲೆಂಡ್ ಕೌಂಟಿ ಕ್ರಿಕೆಟ್”ನಲ್ಲಿ ಸಸೆಕ್ಸ್ ತಂಡದ ಪರ ಆಡುತ್ತಿರುವ ಚೇತೇಶ್ವರ್ ಪೂಜಾರ, ಬ್ಯಾಟಿಂಗ್”ನಲ್ಲಿ ಭರ್ಜರಿ ಫಾರ್ಮ್”ನಲ್ಲಿದ್ದು ಆಡಿರುವ 6 ಪಂದ್ಯಗಳಿಂದ 766 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಒಂದು ಅಮೋಘ ದ್ವಿಶತಕ ಸೇರಿದಂತೆ 4 ಶತಕಗಳು ಸೇರಿವೆ. ಡ್ಯುರ್ಹಾಮ್ ವಿರುದ್ಧದ ಪಂದ್ಯದಲ್ಲಿ ಪೂಜಾರ ಭರ್ಜರಿ 203 ರನ್ ಬಾರಿಸಿದ್ದರು. ಪ್ರಸಕ್ತ ಕೌಂಟಿ ಋತುವಿನಲ್ಲಿ ಅತೀ ಹೆಚ್ಚು ಶತಕ ಬಾರಿಸಿರುವವರ ಸಾಲಿನಲ್ಲಿ ಪೂಜಾರ 4 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಜುಲೈ ಮೊದಲ ವಾರದಲ್ಲಿ ಎಡ್ಜ್’ಬಾಸ್ಟನ್ ಮೈದಾನದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಎರಡೂ ಇನ್ನಿಂಗ್ಸ್’ಗಳಲ್ಲಿ ಒಟ್ಟು 79 ರನ್ ಗಳಿಸಿದ್ದರು. ಪ್ರಥಮ ಇನ್ನಿಂಗ್ಸ್”ನಲ್ಲಿ ಕೇವಲ 13 ರನ್ ಗಳಿಸಿ ಔಟಾಗಿದ್ದ ಪೂಜಾರ, 2ನೇ ಇನ್ನಿಂಗ್ಸ್’ನಲ್ಲಿ 66 ರನ್ ಗಳಿಸಿದ್ದರು. ಭಾರತ ಪರ ಒಟ್ಟು 96 ಟೆಸ್ಟ್ ಪಂದ್ಯಗಳನ್ನಾಡಿರುವ 34 ವರ್ಷದ ಚೇತೇಶ್ವರ್ ಪೂಜಾರ, 43.81ರ ಸರಾಸರಿಯಲ್ಲಿ 18 ಶತಕಗಳ ಸಹಿತ 6,792 ರನ್ ಕಲೆ ಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್”ನಲ್ಲಿ ಒಂದು ಓವರ್ ಬೌಲಿಂಗ್ ಕೂಡ ಮಾಡಿದ್ದಾರೆ.
ಇದನ್ನೂ ಓದಿ : Virat Kohli doubtful : ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಕೊಹ್ಲಿ ಡೌಟ್ !
ಇದನ್ನೂ ಓದಿ : Rohit Sharma 250 Sixes : ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ್ದು ಯಾರು ಗೊತ್ತಾ?
Team India has got New Spinner, Have you seen test specialist Cheteshwar Pujara spin bowling?