ದಿಗ್ಗಜರ ಸಮಾಗಮ; ಸ್ಪಿನ್ ಮಾಂತ್ರಿಕನನ್ನು ಭೇಟಿ ಮಾಡಿದ “ದಿ ಗ್ರೇಟ್ ವಾಲ್”

ದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ( Team India Head Coach rahul Dravid) ಸರಳ ಮತ್ತು ಸಭ್ಯ ಆಟಗಾರ. ತಮ್ಮ ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ದ್ರಾವಿಡ್ ಯಾವುದೇ ರೀತಿಯ ವಿವಾದಗಳಿಗೆ ಗುರಿಯಾದವರಲ್ಲ. ಅಷ್ಟೇ ಅಲ್ಲ, ಹಿರಿಯರನ್ನು ಗೌರವರಿಸುವ ವಿಚಾರದಲ್ಲಿ ದ್ರಾವಿಡ್ ಎಲ್ಲರಿಗಿಂತಲೂ ಅಗ್ರಗಣ್ಯ. ಅದಕ್ಕೆ ಇದು ಮತ್ತೊಂದು ನಿದರ್ಶನ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ಜೂನ್ 9ರಂದು ದೆಹಲಿಯಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ಭಾರತ 7 ವಿಕೆಟ್’ಗಳಿಂದ ಸೋತು ನಿರಾಸೆಗೊಳಗಾಗಿತ್ತು. ಪಂದ್ಯದ ಮರು ದಿನ ದ್ರಾವಿಡ್ ದೆಹಲಿಯಲ್ಲಿರುವ ಕ್ರಿಕೆಟ್ ದಿಗ್ಗಜರೊಬ್ಬರ ಮನೆಗೆ ಭೇಟಿ ಕೊಟ್ಟು, ಆ ದಿಗ್ಗಜನ ಆರೋಗ್ಯ ವಿಚಾರಿಸಿದರು. ದ್ರಾವಿಡ್ (Rahul Dravid) ಭೇಟಿ ಮಾಡಿದ ದಿಗ್ಗಜ ಬೇರಾರೂ ಅಲ್ಲ, ವಿಶ್ವವಿಖ್ಯಾತ ಸ್ಪಿನ್ ಮಾಂತ್ರಿಕ ಬಿಷನ್ ಸಿಂಗ್ ಬೇಡಿ (Bishan Singh Bedi).

Team India Head Coach rahul Dravid meet Bishan Singh Bedi

ಬಿಷನ್ ಸಿಂಗ್ ಬೇಡಿ ಅವರನ್ನು ದ್ರಾವಿಡ್ ಭೇಟಿಯಾಗಿರುವ ಫೋಟೋವನ್ನು ಬೇಡಿ ಪುತ್ರ ಅಂಗದ್ ಬೇಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಭಾರತೀಯ ಕ್ರಿಕೆಟ್”ನ ದಿಗ್ಗಜರಿಬ್ಬರ ಸಮಾಗಮದ ಬಗ್ಗೆ ಕ್ರಿಕೆಟ್ ಪ್ರಿಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದ್ರಾವಿಡ್ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.

70ರ ದಶಕದಲ್ಲಿ ಜಗತ್ತಿನ ನಂ.1 ಸ್ಪಿನ್ನರ್ ಆಗಿದ್ದ ಬಿಷನ್ ಸಿಂಗ್ ಬೇಡಿ, ಭಾರತ ಪರ 67 ಟೆಸ್ಟ್ ಪಂದ್ಯಗಳನ್ನಾಡಿದ್ದು, 266 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 98 ರನ್ನಿತ್ತು 7 ವಿಕೆಟ್ ಪಡೆದದ್ದು ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಅಷ್ಟೇ ಅಲ್ಲ, 22 ಟೆಸ್ಟ್ ಪಂದ್ಯಗಳಲ್ಲಿ ಬಿಷನ್ ಸಿಂಗ್ ಬೇಡಿ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು.

ಹೆಚ್ಚಿನ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ : ಮುಂದಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕಿದ್ದರೆ ಈ ಇಬ್ಬರನ್ನು ಆಡಿಸಿ

ಇದನ್ನೂ ಓದಿ : Virat Kohli : ಸಮುದ್ರ ತಟದಲ್ಲಿ ಕುಳಿತು ಹಾಟ್ ಫೋಟೋ ಶೇರ್ ಮಾಡಿದ ಕಿಂಗ್ ವಿರಾಟ್ ಕೊಹ್ಲಿ

Team India Head Coach rahul Dravid meet Bishan Singh Bedi

Comments are closed.