ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ (Dinesh Karthik)ಗೆ ಮತ್ತೆ ಅವಮಾನ


ಕಟಕ್: ಟೀಮ್ ಇಂಡಿಯಾದಲ್ಲಿ ಸದ್ಯ ದಿನೇಶ್ ಕಾರ್ತಿಕ್ (Dinesh Karthik) ಅತ್ಯಂತ ಅನುಭವೀ ಆಟಗಾರ. ದಕ್ಷಿಣ ಆಫ್ರಿಕಾ (India Vs South Africa T20 Series) ವಿರುದ್ಧ ಟಿ20 ಸರಣಿಯನ್ನಾಡುತ್ತಿರುವ ಭಾರತ ತಂಡಕ್ಕೆ ಡಿಕೆನೇ ಹಿರಿಯಣ್ಣ. ಆದ್ರೆ ಈ ಹಿರಿಯಣ್ಣನಿಗೆ ಟೀಮ್ ಇಂಡಿಯಾದಲ್ಲಿ ಆಗುತ್ತಿರುವ ಅವಮಾನ ಅಂತಿಂಥದ್ದಲ್ಲ.

ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಕಾಲಿಟ್ಟಾಗ ಈಗಿನ ತಂಡದಲ್ಲಿರುವ ಬಹುತೇಕ ಆಟಗಾರರು ಇನ್ನೂ ಕ್ರಿಕೆಟ್ ಬ್ಯಾಟೇ ಹಿಡಿದಿರ್ಲಿಲ್ವೇನೋ.. 2007ರ ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆಡಿದವರು ದಿನೇಶ್ ಕಾರ್ತಿಕ್.ಕ್ರಿಕೆಟ್ ಬದುಕು ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ 37 ವರ್ಷದ ಡಿಕೆ ಮತ್ತೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಆದರೆ ಟೀಮ್ ಇಂಡಿಯಾದಲ್ಲಿ ದಿನೇಶ್ ಕಾರ್ತಿಕ್ ಅನುಭವಕ್ಕೆ ತಕ್ಕಂತೆ ಗೌರವ ಸಿಗುತ್ತಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡೂ ಪಂದ್ಯಗಳಲ್ಲಿ ಡಿಕೆಗೆ ಟೀಮ್ ಅವಮಾನವಾಗುವಂತಹ ಘಟನೆಗಳು ನಡೆದಿವೆ.

ಡಿಕೆಗೆ ಅವಮಾನ ನಂ.1

ದೆಹಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯ. ಕೊನೆಯ ಓವರ್”ನಲ್ಲಿ ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ಕ್ರೀಸ್”ನಲ್ಲಿದ್ರು. 19.4ನೇ ಓವರ್”ನಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಸಿಂಗಲ್ ರನ್ ಪಡೆಯಲು ನಿರಾಕರಿಸುವ ಮೂಲಕ ದಿನೇಶ್ ಕಾರ್ತಿಕ್ ನಾನ್’ಸ್ಟ್ರೈಕ್”ನಲ್ಲೇ ಇರುವಂತೆ ಮಾಡಿದ್ದರು. ಐಪಿಎಲ್ ಟೂರ್ನಿಯಲ್ಲಿ (IPL 2022) ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ಲಾಗ್ ಓವರ್”ಗಳಲ್ಲಿ ಅಬ್ಬರಿಸಿದ್ದ ಡಿಕೆ, ಫಿನಿಷರ್ ರೋಲ್ ಮೂಲಕವೇ ಭಾರತ ತಂಡಕ್ಕೆ ಮರಳಿದ್ದರು. ಆದರೆ ಕಾರ್ತಿಕ್ ಸಾಮರ್ಥ್ಯದ ಮೇಲೆ ಭರವಸೆ ಇಡದ ಪಾಂಡ್ಯ, ಅನುಭವಿ ಆಟಗಾರನಿಗೆ ಅವಮಾನವಾಗುವಂತಹ ನಡವಳಿಕೆ ಪ್ರದರ್ಶಿಸಿದ್ದರು.
ಪಾಂಡ್ಯ ಅವರ ಈ ವರ್ತನೆ ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ (Ashish Nehra) ಅಸಮಾಧಾನಕ್ಕೂ ಕಾರಣವಾಗಿತ್ತು.
“ಪಾಂಡ್ಯ ಆ ಎಸೆತದಲ್ಲಿ ಸಿಂಗಲ್ ರನ್ ಪಡೆಯಬೇಕಿತ್ತು. ಏಕೆಂದರೆ ನಾನ್”ಸ್ಟೈಕ್”ನಲ್ಲಿದ್ದ ಆಶಿಶ್ ನೆಹ್ರಾ ಅಲ್ಲ, ದಿನೇಶ್ ಕಾರ್ತಿಕ್”” ಅಂತ ಹೇಳುವ ಮೂಲಕ ಟೈಟನ್ಸ್ ತಂಡದ ನಾಯಕ ಪಾಂಡ್ಯಗೆ ಕುಟುಕಿದ್ರು.

ಡಿಕೆಗೆ ಅವಮಾನ ನಂ.2

ಕಟಕ್”ನಲ್ಲಿ ನಡೆದ 2ನೇ ಟಿ20 ಪಂದ್ಯ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಕೇವಲ 148 ರನ್ ಕಲೆ ಹಾಕಲಷ್ಟೇ ಶಕ್ತವಾಗಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 18.2 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತ್ತು. ಭಾರತದ ಇನ್ನಿಂಗ್ಸ್ ವೇಳೆ ದಿನೇಶ್ ಕಾರ್ತಿಕ್ ಅವರನ್ನು 7ನೇ ಕ್ರಮಾಂಕದಲ್ಲಿ ಆಡಿಸಿ, ಅವರಿಗೂ ಮೊದಲು ಅಕ್ಷರ್ ಪಟೇಲ್ (Axar Patel) ವರನ್ನು ಕ್ರೀಸ್”ಗಿಳಿಸಿದ್ದು ಚರ್ಚೆಗೆ ಗ್ರಾಸವಾಗಿದೆ.

“ದಿನೇಶ್ ಕಾರ್ತಿಕ್ ಅತ್ಯಂತ ಅನುಭವಿ ಆಟಗಾರ. ಅವರಿಗೂ ಮೊದಲು ಅಕ್ಷರ್ ಪಟೇಲ್ ಅವರನ್ನು ಆಡಿಸುವ ರಣತಂತ್ರ ನನಗೆ ಅರ್ಥವಾಗಲಿಲ್ಲ” ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar)

ಅಕ್ಷರ್ ಪಟೇಲ್ ನಂತರ ದಿನೇಶ್ ಕಾರ್ತಿಕ್ ಅವರನ್ನು ಬ್ಯಾಟಿಂಗ್’ಗೆ ಇಳಿಸಿದ್ದನ್ನು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ (Graeme Smith) ಕೂಡ ಟೀಕಿಸಿದ್ದಾರೆ.

“ಇದು ನನಗೆ ಅರ್ಥವಾಗುತ್ತಿಲ್ಲ. ದಿನೇಶ್ ಕಾರ್ತಿಕ್ ಭಾರತದಲ್ಲಿರುವ ಅತ್ಯಂತ ಅನುಭವೀ ಆಟಗಾರರಲ್ಲೊಬ್ಬರು. ಅವರು ಎಷ್ಟು ಪಂದ್ಯಗಳನ್ನು ಭಾರತ ಪರ ಆಡಿದ್ದಾರೆ ಎಂಬುದನ್ನು ನೋಡಿ. ಐಪಿಎಲ್”ನಲ್ಲೂ ಕಾರ್ತಿಕ್ ಅಪಾರ ಅನುಭವಿ. ಅವರಿಗೂ ಮೊದಲು ಅಕ್ಷರ್ ಪಟೇಲ್ ಅವರನ್ನು ಹೇಗೆ ಕ್ರೀಸ್”ಗೆ ಕಳುಹಿಸುತ್ತೀರಿ? ಇದು ನಿಜಕ್ಕೂ ಅಚ್ಚರಿ”

  • ಗ್ರೇಮ್ ಸ್ಮಿತ್, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ.

ಇದನ್ನೂ ಓದಿ : Broadcasting Rights : ಅಬ್ಬಬ್ಬಾ… ಐಪಿಎಲ್ ಮುಂದೆ ಇಂಗ್ಲೀಷ್ ಪ್ರೀಮಿಯರ್ ಲೀಗ್ ದಾಖಲೆಯೂ ಉಡೀಸ್

ಇದನ್ನೂ ಓದಿ : IPL 2023 Broadcasting rights : ಐಪಿಎಲ್ ಬ್ರಾಡ್ ಕಾಸ್ಟಿಂಗ್ ರೈಟ್ಸ್ ಬರೋಬ್ಬರಿ 43,255 ಕೋಟಿಗೆ ಸೇಲ್

Shame on Dinesh Karthik again on Team India in India Vs South Africa T20 Series

Comments are closed.