Complaint Against the MLA : ಮರದಿಂದ ಬಿದ್ದು ಕಾಲು ಮುರಿದುಕೊಂಡ ಮಹಿಳೆ : ಶಾಸಕರ ವಿರುದ್ದ ದೂರು ದಾಖಲು

ಚಿಕ್ಕಮಗಳೂರು : ಚಿಕ್ಕಮಗಳೂರು ಎನ್‌. ಆರ್‌. ಪುರ ತಾಲೂಕಿನ ಬಾಳೆಹೊನ್ನೂರುನಲ್ಲಿ (Complaint Against the MLA) ಕೂಲಿ ಕಾರ್ಮಿಕ ಮಹಿಳೆ ಕಾಲಿನ ಮೇಲೆ ಮರಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌. ಪುರ ತಾಲೂಕಿನ ಕಾಡುಬೈಲು ಗ್ರಾಮದ ಕೂಲಿ ಕಾರ್ಮಿಕ ಮಹಿಳೆ ಶೋಭಾ ಎಂಬಾಕೆ ಬಾಳೆಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಶಾಸಕ ರಾಜೇಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.

ಮಹಿಳೆ ಶಾಸಕರ ಸಂಬಂಧಿ ಹಾಗೂ ಎಸ್ಟೇಟ್‌ ಮ್ಯಾನೇಜರ್‌ ವಿರುದ್ಧ ವಂಚನೆ ಮಾಡಿರುವ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ಮಹಿಳೆ ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿರುವ ವಿಡಿಯೋ ಈಗ ಸಖತ್‌ ವೈರಲ್‌ ಆಗಿದೆ. ಬಾಸಾಪುರ ಗ್ರಾಮದಲ್ಲಿರುವ ಶಾಸಕ ರಾಜೇಗೌಡ ಮಾಲೀಕತ್ವದ ಕಲ್ಲೇಶ್ವರ ಎಸ್ಟೇಟ್‌ನಲ್ಲಿ ಕಳೆದ ಜುಲಾಯಿ 16ರಂದು ನಾನು, ನನ್ನ ಪತಿ ಇತರ ಕಾರ್ಮಿಕರೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಆಕಸ್ಮಿಕವಾಗಿ ತೋಟದಲ್ಲಿದ್ದ ಮರವೊಂದು ತನ್ನ ಮೈಮೇಲೆ ಬಿದ್ದಿದೆ.

ಮರ ಬಿದ್ದ ಪರಿಣಾಮವಾಗಿ ತಾನು ಗಾಯಗೊಂಡು ಪ್ರಜ್ಞೆ ತಪ್ಪಿದ್ದು, ಈ ವೇಳೆಯಲ್ಲಿ ಗೋಪಾಲ ಎನ್ನುವವರು ಆಟೋದಲ್ಲಿ ಕರೆತಂದು ಬಾಳೆಹೊನ್ನೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರ ಸೂಚನೆಯಂತೆ ಶಾಸಕ ರಾಜೇಗೌಡ ಹಾಗೂ ಅವರ ಸಂಬಂಧಿ ಯುವರಾಜಗೌಡ ನನ್ನನ್ನು ಶಿವಮೊಗ್ಗ ಗುತ್ತಿ ಮಲೆನಾಡು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ದೂರು ದಾಖಲಿಸಿದ ಮಹಿಳೆ ನಡೆದ ಘಟನೆಯನ್ನು ಹೇಳಿದ್ದಾರೆ.

ಇದನ್ನೂ ಓದಿ : Assault by students: ಕನ್ನಡ ಬಾವುಟ‌ ಹಿಡಿದು ಕುಣಿದ ವಿದ್ಯಾರ್ಥಿಗೆ ಥಳಿತ : ಕಠಿಣ ಕ್ರಮಕ್ಕೆ ಕನ್ನಡ ಪರ ಸಂಘಟನೆಗಳ ಆಗ್ರಹ

ಇದನ್ನೂ ಓದಿ : Assault on staff: ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಅರೆಸ್ಟ್

ಇದನ್ನೂ ಓದಿ : Suicide bomb blast: ಕ್ವೆಟಾದಲ್ಲಿ ಆತ್ಮಹತ್ಯಾ ಬಾಂಬ್‌ ಸ್ಫೊಟ: ಪೊಲೀಸ್, ಮಗು ಸೇರಿದಂತೆ 3 ಮಂದಿ ಸಾವು

ಮಾತು ಮುಂದುವರೆಸಿದ ಮಹಿಳೆ, ಎನ್‌.ಆರ್.ಪುರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದಿದ್ದೇನೆ. ಈವರೆಗೂ ಶಾಸಕ ರಾಜೇಗೌಡ ನನ್ನ ಆಗಿರುವ ತೊಂದರೆ ಬಗ್ಗೆ ಗಮನ ಕೊಡಲಿಲ್ಲ. ಹಾಗೆ ಸರಕಾರದಿಂದ ಯಾವುದೇ ರೀತಿಯ ಪರಿಹಾರವನ್ನು ಕೊಡಿಸಲಿಲ್ಲ. ಸರಕಾರಿ ಆಸ್ಪತ್ರೆಯಲ್ಲಿ ನನಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ನನ್ನ ಸ್ವಂತ ಖರ್ಚಿನಲ್ಲಿ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಚಿಕಿತ್ಸೆಗೆ ಸಅಲ ಮಾಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸರಕಾರದ ಸೌಲಭ್ಯದ ಬಗ್ಗೆ ಶಾಸಕರ ಮಗನ ಬಳಿ ವಿಚಾರಿಸಿದರೆ, ಅವರು ನನ್ನ ಬಳಿ ಹಣವಿಲ್ಲ, ನೀವು ಏನಾದರೂ ಮಾಡಿಕೊಳ್ಳಿ ಎಂದು ದರ್ಪದ ಉತ್ತರ ನೀಡುತ್ತಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

Complaint Against the MLA: Woman broke her leg after falling from a tree: File a complaint against the MLA

Comments are closed.