ಚೆನ್ನೈ: Virat Kohli fan kills : ವಿರಾಟ್ ಕೊಹ್ಲಿ (Virat Kohli ) ಮತ್ತು ರೋಹಿತ್ ಶರ್ಮಾ (Rohit Sharma ) ಭಾರತೀಯ ಕ್ರಿಕೆಟ್’ನ ಇಬ್ಬರು ಸೂಪರ್ ಸ್ಟಾರ್’ಗಳು. ಇಬ್ಬರಿಗೂ ತಮ್ಮದೇ ಆದ ಅಭಿಮಾನಿ ಬಳಗವಿದೆ. ಕೊಹ್ಲಿ ಮತ್ತು ರೋಹಿತ್ ಮಧ್ಯೆ ಯಾರು ಶ್ರೇಷ್ಠ ಎಂಬ ವಿಚಾರದಲ್ಲಿ ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಜಟಾಪಟಿಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ವಾಗ್ಯುದ್ಧ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.ಇದು ನಡೆದಿರುವುದು ತಮಿಳುನಾಡಿನ ಮಲ್ಲೂರು ಎಂಬಲ್ಲಿ.
ಪಿ.ವಿಘ್ನೇಶ್ ಮತ್ತು ಧರ್ಮರಾಜ್ ಇಬ್ಬರೂ ಸ್ನೇಹಿತರು. ಇವರಲ್ಲಿ ಧರ್ಮರಾಜ್ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ದೊಡ್ಡ ಅಭಿಮಾನಿ. 21 ವರ್ಷದ ವಿಘ್ನೇಶ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಅಭಿಮಾನಿ. ಮಂಗಳವಾರ ಪಾತ್ರಿ ಸ್ನೇಹಿತರು ಮಲ್ಲೂರಿನ SIDCO ಇಂಡಸ್ಟ್ರಿಯಲ್ ಎಸ್ಟೇಟ್’ನ ಬಾರ್ ಒಂದರಲ್ಲಿ ಮದ್ಯಪಾನ ಮಾಡುತ್ತಾ ಕ್ರಿಕೆಟ್ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಚರ್ಚೆಯ ವೇಳೆ ರೋಹಿತ್ ಶರ್ಮಾ ಅಭಿಮಾನಿ ವಿಘ್ನೇಶ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ವಿರಾಟ್ ಕೊಹ್ಲಿ ಬಗ್ಗೆ ಟೀಕೆ ಮಾಡಲು ಶುರು ಮಾಡಿದ್ದಾನೆ. ಐಪಿಎಲ್’ನಲ್ಲಿ RCB ತಂಡ ಇದುವರೆಗೆ ಕಪ್ ಗೆಲ್ಲದೇ ಇರುವುದನ್ನು ಹೀಯಾಳಿಸಿದ್ದಾನೆ. ಇದರಿಂದ ವಿರಾಟ್ ಕೊಹ್ಲಿ ಅಭಿಮಾನಿ ಧರ್ಮರಾಜ್ ಸಿಟ್ಟಿದೆದ್ದು ವಿಘ್ನೇಶ್ ಮೇಲೆ ಕ್ರಿಕೆಟ್ ಬ್ಯಾಟ್ ಹಾಗೂ ಬಿಯರ್ ಬಾಟಲ್’ನಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ವಿಘ್ನೇಶ್ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಕೂಡಲೇ ಧರ್ಮರಾಜ್ ಸ್ಥಳಯಿಂದ ಎಸ್ಕೇಪ್ ಆಗಿದ್ದಾನೆ.
ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು “ಬಿಸಿ ಬಿಸಿ ಚರ್ಚೆಯ ವೇಳೆ ಧರ್ಮರಾಜನ ದೇಹಕಾರದ ಬಗ್ಗೆ ವಿಘ್ನೇಶ್ ಗೇಲಿ ಮಾಡಲು ಶುರು ಮಾಡಿದ್ದ. ಧರ್ಮರಾಜನ್ನು ವಿರಾಟ್ ಕೊಹ್ಲಿ ಮತ್ತು RCB ಪರ್ಫಾಮೆನ್ಸ್’ಗೆ ಹೋಲಿಸಿ ವ್ಯಂಗ್ಯ ಮಾಡಿದ್ದ. ಕೋಪಗೊಂಡ ಧರ್ಮರಾಜ್ ಕ್ರಿಕೆಟ್ ಬ್ಯಾಟ್ ಮತ್ತು ಬಾಟಲ್’ನಿಂದ ವಿಘ್ನೇಶ್’ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ” ಎಂದಿದ್ದಾರೆ.
Everyone is quite just bcoz he was fan of Rohit Sharma
— Harshit 🐬 (@its_monk45) October 14, 2022
We Want Justice Modi Ji 💔#ArrestKohli pic.twitter.com/seGvRlQka7
ಈ ಘಟನೆಯ ನಂತರ ಟ್ವಿಟರ್’ನಲ್ಲಿ #ArrestKohli ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದ್ದು, ತಮ್ಮದಲ್ಲದ ತಪ್ಪಿಗೆ ವಿರಾಟ್ ಕೊಹ್ಲಿ ಅರನ್ನು ಘಟನೆಯ ಮಧ್ಯೆ ಎಳೆದು ತರಲಾಗಿದೆ. ವಿವೇಕಹೀನ ವ್ಯಕ್ತಿಗಳು ವಿರಾಟ್ ಕೊಹ್ಲಿ ಅವರನ್ನು ಅರೆಸ್ಟ್ ಮಾಡಬೇಕೆಂದು ಟ್ವೀಟ್ ಮಾಡುತ್ತಿದ್ದಾರೆ.
Chokli Fans ©ancer for our society 😞💔#Arrestkohli pic.twitter.com/UG4KpQLt8p
— ٰ (@mujxxhid) October 14, 2022
• Father – Criminal lawyer
— 𝐀𝐬𝐡𝐢𝐦. 🦁 (@RofiedAsim) October 14, 2022
• Son – abusive, cruelty and arrogant nature
• Son's fans – criminal
We need justice for our brother Vignesh 💔 !#ArrestKohli
No words left 💔#ArrestKohli pic.twitter.com/wcPLNlynYC
— Harshit 🐬 (@its_monk45) October 14, 2022
ಇದನ್ನೂ ಓದಿ : Women’s IPL 2023 : ಮುಂದಿನ ವರ್ಷ ಮಹಿಳಾ ಐಪಿಎಲ್: 5 ತಂಡಗಳು, 22 ಪಂದ್ಯಗಳು, ಐವರು ವಿದೇಶೀ ತಾರೆಗಳು
ಇದನ್ನೂ ಓದಿ : Shami replaces Bumrah: ಟಿ20 ವಿಶ್ವಕಪ್: ಬುಮ್ರಾ ಬದಲು ಶಮಿ ಆಯ್ಕೆ, ಬಿಸಿಸಿಐ ಅಧಿಕೃತ ಘೋಷಣೆ
Virat Kohli fan kills Rohit Sharma fan