ಭಾನುವಾರ, ಏಪ್ರಿಲ್ 27, 2025
HomeSportsCricketVirat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ...

Virat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

- Advertisement -

ಲಂಡನ್: ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಲಂಡನ್’ನಲ್ಲಿ ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಆ ವ್ಯಕ್ತಿ ವಿರಾಟ್ ಕೊಹ್ಲಿಯವರ 18 ವರ್ಷಗಳ ಹಿಂದಿನ ಸ್ನೇಹಿತ. ಕ್ರಿಕೆಟ್ ಜನಕರ ನಾಡಿನಲ್ಲಿ ಕಿಂಗ್ ಕೊಹ್ಲಿ ಭೇಟಿ (Virat Kohli Mets Childhood Friend) ಮಾಡಿರುವುದು ಅವರ ಅಂಡರ್-15 ದಿನಗಳ ಸ್ನೇಹಿತ ಹೈದರಾಬಾದ್’ನ ದ್ವಾರಕ ರವಿತೇಜ ಅವರನ್ನು.

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಏಕದಿನ ಸರಣಿಯನ್ನಾಡುತ್ತಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಗಾಯದ ಕಾರಣ ವಿರಾಟ್ ಕೊಹ್ಲಿ ಆಡಿರಲಿಲ್ಲ.

ಪ್ರಥಮ ಏಕದಿನ ಪಂದ್ಯಕ್ಕೂ ಮುನ್ನಾ ದಿನ ರಾತ್ರಿ ಊಟಕ್ಕೆಂದು ಹೋಗಿದ್ದ ವೇಳೆ ವಿರಾಟ್ ಕೊಹ್ಲಿ ತಮ್ಮ 18 ವರ್ಷಗಳ ಹಿಂದಿನ ಗೆಳೆಯನನ್ನು ಭೇಟಿ ಮಾಡಿದ್ದಾರೆ. ದ್ವಾರಕ ರವಿತೇಜ ಮತ್ತು ವಿರಾಟ್ ಕೊಹ್ಲಿ ಕಿರಿಯರ ಕ್ರಿಕೆಟ್’ನಲ್ಲಿ ಒಟ್ಟಿಗೆ ಆಡಿದವರು. ಅಂಡರ್-15 ಟೂರ್ನಿಗಳ ವೇಳೆ ಕೊಹ್ಲಿಗೆ ರವಿತೇಜ ರೂಮ್ ಮೇಟ್ ಕೂಡ ಆಗಿದ್ದರು. ವಿರಾಟ್ ಕೊಹ್ಲಿಯವರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಹಳೆಯ ನೆನಪುಗಳನ್ನು ದ್ವಾರಕ ರವಿತೇಜ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘’ಐಪಿಎಲ್ ನಂತರ 6 ವರ್ಷಗಳ ನಂತರ ವಿರಾಟ್ ಕೊಹ್ಲಿಯನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದೆ. ಆಟ ಹೇಳಿದ ಮೊದಲ ಮಾತು ‘’ಚಿರು ಹೇಗಿದ್ದೀಯಾ.?’ ಎಂದು. ಅಂಡರ್-15 ದಿನಗಳಲ್ಲಿ ನಾವಿಬ್ಬರೂ ರೂಮ್ ಮೇಟ್ಸ್ ಆಗಿದ್ದೆವು. ನಾನು ಆಗ ಮೆಗಾ ಸ್ಟಾರ್ ಚಿರಂಜೀವಿ ಅವರ ಹಾಡುಗಳನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ, ಆ ಹಾಡುಗಳಿಗೆ ವಿರಾಟ್ ಡ್ಯಾನ್ಸ್ ಮಾಡುತ್ತಿದ್ದ. ಅಲ್ಲಿಂದ ನಾವಿಬ್ಬರೂ ಪರಸ್ಪರ ಹೆಸರು ಕರೆದು ಮಾತನಾಡಿಸಿಯೇ ಇಲ್ಲ. ಇಬ್ಬರಿಗೂ ‘’ಚಿರು’’ ಎಂಬ ನಿಕ್ ನೇಮ್ ಕಾಯಂ ಆಯ್ತು. ನಾವಿಬ್ಬರೂ ಭೇಟಿ ಆದಾಗಲೆಲ್ಲಾ ಒಬ್ಬರನ್ನೊಬ್ಬರು ‘’ಚಿರು’’ ಎಂದೇ ಕರೆಯುತ್ತೇವೆ. ಅದ್ಭುತ ನೆನಪುಗಳು. ತುಂಬಾ ವರ್ಷಗಳ ನಂತರ ಭೇಟಿಯಾದಾಗಲೂ ನಮ್ಮಿಬ್ಬರ ಮಧ್ಯೆ ಏನೂ ಬದಲಾಗಿಲ್ಲ ಅನ್ನಿಸಿತು. ‘ನಿಮ್ಮನ್ನು ನೋಡಿ ಖುಷಿಯಾಗಿದೆ ಚಿರು’ ಮತ್ತೆ ಭೇಟಿ ಮಾಡೋಣ,’’ ಎಂದು ಇನ್’ಸ್ಟಾಗ್ರಾಂ ಪೋಸ್ಟ್’ನಲ್ಲಿ ರವಿತೇಜ ಬರೆದುಕೊಂಡಿದ್ದಾರೆ.

ಆಂಧ್ರಪ್ರದೇಶದ ಕಾಕಿನಾಡದವರಾದ ರವಿತೇಜ ಹೈದರಾಬಾದ್ ಪರ 32 ಐಪಿಎಲ್ ಪಂದ್ಯಗಳನ್ನಾಡಿದ್ದು, 375 ರನ್ ಗಳಿಸಿದ್ದಾರೆ. ಆಂಧ್ರ ಪರ 78 ಪ್ರಥಮದರ್ಜೆ ಪಂದ್ಯಗಳಿಂದ 12 ಶತಕಗಳ ಸಹಿತ 4,722 ರನ್, 85 ಲಿಸ್ಟ್ ಎ ಪಂದ್ಯಗಳಿಂದ 6 ಶತಕಗಳೊಂದಿಗೆ 2,942 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

ಇದನ್ನೂ ಓದಿ : Suryakumar Yadav Life Story : ಉತ್ತರ ಪ್ರದೇಶದ ಹುಡುಗ ಮುಂಬೈನಲ್ಲಿ ಕ್ರಿಕೆಟ್ ಬದುಕು ಕಟ್ಟಿಕೊಂಡ, ಇದು ಸೂರ್ಯನ ಲೈಫ್ ಸ್ಟೋರಿ !

Virat Kohli Mets Childhood Friend

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular