Pooja Hegde : ಬಿಕಿನಿ ಲುಕ್​​ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ಪೂಜಾ ಹೆಗ್ಡೆ

Pooja Hegde : ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಮಾ ರಂಗದಲ್ಲಿ ತಮ್ಮ ಭದ್ರವಾಗಿ ನೆಲೆಯೂರಲು ಕಾಯುತ್ತಿರುವ ನಟಿ ಪೂಜಾ ಹೆಗ್ಡೆಗೆ ಬೀಚ್​ಗಳು ಅಂದರೆ ತುಂಬಾನೇ ಇಷ್ಟ ಎಂಬುದು ರಹಸ್ಯವಾಗಿ ಉಳಿದಿಲ್ಲ. ಪೂಜಾ ಹೆಗ್ಡೆಯ ಇನ್​ಸ್ಟಾಗ್ರಾಂ ಪೋಸ್ಟ್​ಗಳನ್ನು ನೀವು ನೋಡಿದರೆ ನಿಮಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಕೂಡ ಸಿಗುತ್ತದೆ. ಬೀಚ್​​ನಲ್ಲಿ ನೆಟ್​ ಟಾಪ್​ ಇರುವ ಬಿಕಿನಿ ತೊಟ್ಟು ಪೂಜಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.


ಪೂಜಾ ಹೆಗ್ಡೆಯನ್ನು ಈ ರೀತಿಯನ್ನು ಹಾಟ್​ ಲುಕ್​ನಲ್ಲಿ ನೋಡಿದ ನೆಟ್ಟಿಗರು ಕಮೆಂಟ್​ ಬಾಕ್ಸ್​​ನಲ್ಲಿ ಹೃದಯ ಹಾಗೂ ಬೆಂಕಿ ಎಮೋಜಿಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಪೂಜಾ ಹೆಗ್ಡೆ ಪ್ರಸ್ತುತ ಥಾಯ್ಲೆಂಡ್​ನ ಬ್ಯಾಂಕಾಕ್​​ನಲ್ಲಿದ್ದಾರೆ. ವಿಮಾನ ನಿಲ್ದಾಣದ ಒಳಗೆ ಕ್ಲಿಕ್ ಮಾಡಲಾದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಾನು ಬ್ಯಾಂಕಾಕ್​ ಪ್ರಯಾಣಿಸುತ್ತಿರುವ ಬಗ್ಗೆ ಅಭಿಮಾನಿಗಳ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ನಟಿ ಪೂಜಾ ಹೆಗ್ಡೆ ಒಂದು ತಿಂಗಳು, ಮೂರು ಖಂಡಗಳು, ನಾಲ್ಕು ನಗರಗಳು ,ಹೊರಡೋಣ ಎಂದು ಶೀರ್ಷಿಕೆ ನೀಡಿದ್ದಾರೆ.


ಪೂಜಾ ಹೆಗ್ಡೆ 2022ರ Cannesನಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಆಫ್​ ಶೋಲ್ಡರ್​ ಗೌನ್​​ನಲ್ಲಿ ಪೂಜಾ ಹೆಗ್ಡೆ ಫೇರಿ ಟೇಲ್​ನಂತೆ ಕಾಣುತ್ತಿದ್ದರು.

ಇನ್ನು ಪೂಜಾ ಹೆಗ್ಡೆ ವೃತ್ತಿ ಜೀವನದ ಬಗ್ಗೆ ಮಾತನಾಡುವುದಾದರೆ ಸಧ್ಯಕ್ಕೆ ಪೂಜಾ ಹೆಗ್ಡೆ ನಟನೆಯ ಯಾವುದೇ ಸಿನಿಮಾಗಳು ಅವರಿಗೆ ಬ್ರೇಕ್​ ನೀಡಿಲ್ಲ . ಮುಂದಿನ ಬಾರಿ ಅವರು ರಣವೀರ್​ ಸಿಂಗ್​ ಜೊತೆಯಲ್ಲಿ ಸರ್ಕಸ್​ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನದ ಈ ಸಿನಿಮಾ ಇದೇ ವರ್ಷದ ಕ್ರಿಸ್​ಮಸ್​ ದಿನದಂದು ಬಿಡುಗಡೆ ಕಾಣಲಿದೆ. ಜಾಕ್ವೆಲಿನ್​ ಫರ್ನಾಂಡಿಸ್​, ವರುಣ್​ ಶರ್ಮಾ, ಜಾನಿ ಲಿವರ್​, ಸಂಜಯ್​ ಮಿಶ್ರಾ, ಸಿದ್ಧಾರ್ಥ ಜಾಧವ್​, ಮುಖೇಶ್​ ತಿವಾರಿ, ಅನಿಲ್ ಚರಂಜಿತ್, ಅಶ್ವಿನಿ ಕಲ್ಸೇಕರ್ ಮತ್ತು ಮುರಳಿ ಶರ್ಮಾ ಸೇರಿದಂತೆ ಬೃಹತ್​ ತಾರಾಗಣ ಈ ಸಿನಿಮಾದಲ್ಲಿದೆ. ಈ ಸಿನಿಮಾವು ಷೇಕ್ಸ್​ಪಿಯರ್​​ರ ದಿ ಕಾಮಿಡಿ ಆಫ್​ ಎರರ್ಸ್​ ಎಂಬ ನಾಟಕವನ್ನು ಆಧರಿಸಿದೆ.

ಇದನ್ನು ಓದಿ : Farmers Crop Survey App: ಬೆಳೆ ಸಮೀಕ್ಷೆಗೆ ಬಂದಿದೆ ರೈತ ಸ್ನೇಹಿ ಆ್ಯಪ್

ಇದನ್ನೂ ಓದಿ : Jasprit Bumrah : ಭೂಮ್ ಭೂಮ್ ಬುಮ್ರಾ, ಖತರ್ನಾಕ್ ವೇಗಿಯ ಬೆಂಕಿ ಬೌಲಿಂಗ್’ಗೆ ಇಂಗ್ಲೆಂಡ್ ಉಡೀಸ್.. ನೆಹ್ರಾ ದಾಖಲೆ ಪೀಸ್ ಪೀಸ್ !

Pooja Hegde Blows Off Steam In New Vacation Pictures. “Time To Escape,” She Writes

Comments are closed.