Tourists banned from going to sea : ಪ್ರವಾಸಿಗರ ಗಮನಕ್ಕೆ : ಕಡಲ ನಗರಿಯಲ್ಲಿ ಬೀಚ್​ಗೆ ತೆರಳಲು ನಿರ್ಬಂಧ

ಮಂಗಳೂರು : Tourists banned from going to sea : ಇನ್ನೇನು ವೀಕೆಂಡ್​ ಹತ್ತಿರ ಬಂತು. ಹೀಗಾಗಿ ವೆಕೇಷನ್​ಗೆ ತೆರಳೋಣ ಎಂದು ಪ್ಲಾನ್​ ಮಾಡುವವರು ಅನೇಕರಿದ್ದಾರೆ. ವೀಕೆಂಡ್​​ನಲ್ಲಿ ಬೀಚ್​ಗೆ ತೆರಳೋಣ ಎಂದು ನೀವು ಯೋಚನೆ ಮಾಡಿದ್ದರೆ ನಿಮ್ಮ ಟೂರ್​ ಪ್ಲಾನ್​ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಅದರಲ್ಲೂ ನಿಮ್ಮ ಪ್ಲಾನ್​ ಕಡಲನಗರಿಯ ಸಮುದ್ರ ತೀರವಾಗಿದ್ದರೆ ನಿಮಗೆ ಸಮುದ್ರವನ್ನು ದೂರದಲ್ಲಿ ನಿಂತು ನೋಡುವುದನ್ನು ಬಿಟ್ಟು ಬೇರೆ ಇನ್ಯಾವ ಆಯ್ಕೆ ಕೂಡ ಉಳಿಯೋದಿಲ್ಲ. ಏಕೆಂದರೆ ಬೀಚ್​ನಲ್ಲಿ ಮಸ್ತಿ ಮಾಡಲು ನಿರ್ಬಂಧ (Tourists banned sea) ಹೇರಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸಮುದ್ರಗಳಲ್ಲಿ ಅಪಾಯ ಎದುರಾಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಸರಣಿ ರಜೆ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಬೇಕೆಂದು ಪ್ಲಾನ್​ ಮಾಡಿದ್ದವರಿಗೆ ದೊಡ್ಡ ನಿರಾಶೆ ಎದುರಾಗಿದೆ. ಕಡಲಿನಲ್ಲಿ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರು ಬೀಚ್​​ಗೆ ಎಂಟ್ರಿ ನೀಡಲು ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಸಮುದ್ರದಲ್ಲಿ ಅಲೆಗಳ ಮಜಾ ಮಾಡಬಹುದು ಎಂದು ಕೊಂಡವರಿಗೆ ಇದರಿಂದ ಭಾರೀ ನಿರಾಶೆಯಾಗೋದಂತೂ ಪಕ್ಕಾ.

ಸಮುದ್ರದಲ್ಲಿ ಅಲೆಗಳ ಹೊಡೆತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಂಗಳೂರಿನ ಪಣಂಬೂರಿನ ಬೀಚ್​​ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೀಚ್​ಗೆ ಇಳಿಯದಂತೆ ಎಲ್ಲಾ ಕಡೆಗಳಲ್ಲಿ ಹಗ್ಗ ಕಟ್ಟಿ ನಿರ್ಬಂಧ ಹೇರಲಾಗಿದೆ. ಬೀಚ್​ನ ಸುತ್ತ ಹೋಮ್​ ಗಾರ್ಡ್​, ಲೈಫ್​ ಗಾರ್ಡ್​ಗಳನ್ನು ನಿಯೋಜನೆ ಮಾಡಲಾಗಿದೆ. ಮೂಲಗಳ ಪ್ರಕಾರ ಇನ್ನೂ ಒಂದು ತಿಂಗಳುಗಳ ಕಾಲ ಈ ನಿರ್ಬಂಧ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಪ್ರವಾಸಿಗರಿಗೆ ದೂರದಿಂದಲೇ ಬೀಚ್​ ನೋಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಇದನ್ನು ಓದಿ : Rishabh Pant and actress Urvashi Rautela: ಕ್ರಿಕೆಟಿಗ ರಿಷಭ್ ಪಂತ್-ನಟಿ ಊರ್ವಶಿ ರೌಟೇಲಾ ಮಧ್ಯೆ ಏನಿದು ಹೊಸ ಕಥೆ..? ತೆರೆಯ ಹಿಂದೆ ನಡೆದದ್ದೇನು?

ಇದನ್ನೂ ಓದಿ : remove the rakhi : ಮಂಗಳೂರಿನ ಶಾಲೆಯಲ್ಲಿ ರಕ್ಷಾ ಬಂಧನಕ್ಕೆ ಅಪಮಾನ: ರಾಖಿ ಕಳಚುವಂತೆ ವಿದ್ಯಾರ್ಥಿಗಳಿಗೆ ತಾಕೀತು

ಇದನ್ನೂ ಓದಿ : Johnson & Johnson : ವಿಶ್ವಾದ್ಯಂತ ಜಾನ್ಸನ್​ & ಜಾನ್ಸನ್​​ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಕಂಪನಿ

Tourists banned from going to sea in Mangalore

Comments are closed.