Virat Kohli : ಅವರು ನಿನ್ನ ಕನಸಿಗೆ ಕೊಳ್ಳಿ ಇಟ್ಟರು, ಅವರನ್ನು ಕ್ಷಮಿಸಿ ಬಿಡು ವಿರಾಟ್ ಕೊಹ್ಲಿ (Virat Kohli )..’’ #rcb ಕಪ್ ಗೆಲ್ಲಲು ಒಬ್ಬ ಮನುಷ್ಯನ ಕೈಯಲ್ಲಿ ಏನೆಲ್ಲಾ ಸಾಧ್ಯವೋ ಅಷ್ಟನ್ನೂ ಆತ ಮಾಡಿದ. 155ರ ಸ್ಟ್ರೈಕ್’ರೇಟ್’ನಲ್ಲಿ ಇಡೀ ಟೂರ್ನಿಯಲ್ಲೇ ಅತೀ ಹೆಚ್ಚು 741 ರನ್ ಹೊಡೆದ.m ಫೀಲ್ಡಿಂಗ್ brilliance ಮೂಲಕ ತಂಡಕ್ಕೆ ಕನಿಷ್ಠ 150 ರನ್’ಗಳನ್ನು ಉಳಿಸಿದ. ಅದ್ಭುತ ಕ್ಯಾಚ್’ಗಳನ್ನು ಹಿಡಿದ, ನಂಬಲಸಾಧ್ಯ ರನೌಟ್’ಗಳನ್ನೂ ಮಾಡಿದ.

ಸೋತು ಸೋತು ಸುಣ್ಣವಾಗಿ ಇನ್ನು ನಮ್ಮಿಂದಾಗದು ಎಂದು ಕುಳಿತಿದ್ದ ತಂಡದಲ್ಲಿ ಹೋರಾಟದ ಕೆಚ್ಚು, ಕಿಚ್ಚು ಎರಡನ್ನೂ ತುಂಬಿದ. ಒಬ್ಬ ಕ್ರಿಕೆಟಿಗ ಇದಕ್ಕಿಂತ ಹೆಚ್ಚು ಇನ್ನೇನು ಮಾಡಲು ಸಾಧ್ಯ..? ಆದರೂ RCB ಈ ಬಾರಿಯೂ ಕಪ್ ಗೆಲ್ಲಲಿಲ್ಲ. The wait continues, and sport, yet again, is cruel. Real, not reel. ‘’ಒಂದೇ ಒಂದು ಬಾರಿ ಐಪಿಎಲ್ ಕಪ್ ಅನ್ನು ಸ್ಪರ್ಶಿಸುವ, ಆ feel ಹೇಗಿರತ್ತೆ ಎಂಬುದನ್ನು ಅನುಭವಿಸುವ ಆಸೆ’’.
ಹೀಗೆಂದು ಟೂರ್ನಿ ಆರಂಭಕ್ಕೂ ಮೊದಲು ವಿರಾಟ್ ಕೊಹ್ಲಿ ಹೇಳಿದ್ದ. ಅದನ್ನು ನಿಜವಾಗಿಸಲು ತನ್ನ ಶಕ್ತಿಮೀರಿ ಪ್ರಯತ್ನ ಹಾಕಿದ. ಆದರೆ ಜೊತೆಗಿದ್ದವರು ವಿರಾಟ್ ನಂಬಿಕೆಗೆ ಮೋಸ ಮಾಡಿದರು. RCB ತಂಡಕ್ಕಾಗಿ ತಾನೇನು ಮಾಡಿದ್ದೇನೆ ಎಂಬ ಬಗ್ಗೆ ವಿರಾಟ್ ಕೊಹ್ಲಿ ಹೆಮ್ಮೆ ಪಡಬೇಕು. ಆದರೆ ಆತನ ಟೀಮ್’ಮೇಟ್ಸ್ ಮಾತ್ರ ಕಪ್ ಗೆಲ್ಲಲು ಅರ್ಹರಾಗಿರಲಿಲ್ಲ. They let him and the team down.
ಎಲ್ಲೋ ಅಲ್ಲೊಂದು ಇಲ್ಲೊಂದು performanceಗಳನ್ನು ಬಿಟ್ಟರೆ ಟೂರ್ನಿಯುದ್ದಕ್ಕೂ ವಿರಾಟ್ ಕೊಹ್ಲಿಗೆ consistent ಆಗಿ ಸಾಥ್ ಕೊಟ್ಟವರು ಯಾರೂ ಇಲ್ಲ. ತಂಡಕ್ಕೆ ತನ್ನ ಅಗತ್ಯ ಬಿದ್ದಾಗಲೆಲ್ಲಾ ವಿರಾಟ್ ಫೀನಿಕ್ಸ್’ನಂತೆ ಮೇಲೆದ್ದು ನಿಂತ. ತನ್ನ ಸ್ಟ್ರೈಕ್’ರೇಟನ್ನು ಹೆಚ್ಚಿಸಿಕೊಂಡು ಒಬ್ಬ geniusನಂತೆ ಆಡಿದ.

ಫೀಲ್ಡ್’ನಲ್ಲಿ ವಿರಾಟ್ ಪ್ರತಿಯೊಬ್ಬ ಕ್ರಿಕೆಟಿಗನಿಗೂ ಮಾದರಿ. ತನ್ನ ಜೀವನವೇ ಆ ಚೆಂಡಿನ ಮೇಲೆ ಅವಲಂಬಿತವಾಗಿದೆಯೋ ಎನ್ನುವಂತೆ ಪ್ರತಿಯೊಂದು ಎಸೆತವನ್ನೂ ಬೆನ್ನತ್ತಿದ, ಮತ್ತದೆ intentನೆೊಂದಿಗೆ. ಇಷ್ಟೆಲ್ಲಾ ಮಾಡಿದರೂ ಸತತ 17ನೇ ವರ್ಷವೂ ಐಪಿಎಲ್ ಕಪ್ ಗೆಲ್ಲದೆ ಬರಿಗೈಯಲ್ಲಿ ಹೊರಟಿದ್ದಾನೆ ನತದೃಷ್ಟ #KingKohli. ಛೇ.., ವಿರಾಟ್ ಕೊಹ್ಲಿಯ ಕಾರಣಕ್ಕಾದರೂ ಆರ್’ಸಿಬಿ ಈ ಬಾರಿ ಕಪ್ ಗೆಲ್ಲಬೇಕಿತ್ತು.
ಇದನ್ನೂ ಓದಿ : My Mom Is In Hospital..! ಅತ್ತ ಆಸ್ಪತ್ರೆಯಲ್ಲಿ ಹೆತ್ತ ತಾಯಿ, ಇತ್ತ ಐಪಿಎಲ್’ನಲ್ಲಿ ಕೆಕೆಆರ್ ಪರ ಮಗನ ಆಟ !
ಪ್ರೀತಿಯ ವಿರಾಟ್, ಐಪಿಎಲ್ ಕಪ್ ಗೆಲ್ಲಬೇಕೆಂಬ ನಿನ್ನ ಕನಸಿಗೆ ಅವರು ಕೊಳ್ಳಿ ಇಟ್ಟರು. ಮುಂದಿನ ತಿಂಗಳು ಟಿ20 ವಿಶ್ವಕಪ್ ಆರಂಭವಾಗುತ್ತದೆ. ಅಲ್ಲೂ ನಿನ್ನ individual brilliance ಹೀಗೇ ಮುಂದುವರಿದು, ಭಾರತ ವಿಶ್ವಕಪ್ ಜಯಿಸಲು ಅದು ಕಾರಣವಾಗಲಿ.
ಇದನ್ನೂ ಓದಿ : Shreyas Iyer: ಐಪಿಎಲ್ ಫೈನಲ್ ತಲುಪಿದ ಕೆಕೆಆರ್, ಬಿಸಿಸಿಐ ಎಷ್ಟು ತುಳಿದರೂ ಮೇಲೆದ್ದು ನಿಂತ ಮುಂಬೈಕರ್ !
Virat Kohli RCB vs RR Indian Premier League 2024