ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

ಬರ್ಮಿಂಗ್’ಹ್ಯಾಮ್ : ಒಬ್ಬ ಬ್ಯಾಟಿಂಗ್ ದಿಗ್ಗಜ, ಮತ್ತೊಬ್ಬ ಬೌಲಿಂಗ್ ದಿಗ್ಗಜ. ಇಬ್ಬರೂ ಮುಖಾಮುಖಿಯಾದ್ರೆ ಕ್ರಿಕೆಟ್ ಪ್ರಿಯರ ಕಣ್ಣಿಗೆ ಹಬ್ಬ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಇದಕ್ಕೆ ಸಾಕ್ಷಿಯಾಗಿದೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ (Virat Kohli vs James Anderson) ನಡುವಿನ ಮುಖಾಮುಖಿಯೇ ರೋಚಕ. ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ 8,000+ ರನ್, 27 ಶತಕಗಳನ್ನು ಬಾರಿಸಿದ ದಿಗ್ಗಜ ಬ್ಯಾಟ್ಸ್’ಮನ್. ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್’ನಲ್ಲಿ 650+ ವಿಕೆಟ್ಸ್ ಪಡೆದ ದಿಗ್ಗಜ ವೇಗಿ. ಇವರಿಬ್ಬರೂ ಟೆಸ್ಟ್ ಕ್ರಿಕೆಟ್’ನಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದಾರೆ.

ಎಡ್ಜ್’ಬಾಸ್ಟನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ Vs ಇಂಗ್ಲೆಂಡ್ ಟೆಸ್ಟ್ ಪಂದ್ಯವೇ (India Vs England Test Match) ದಿಗ್ಗಜರ ಕೊನೆಯ ಮುಖಾಮುಖಿ. 40 ವರ್ಷದ ಜೇಮ್ಸ್ ಆ್ಯಂಡರ್ಸನ್ ನಿವೃತ್ತಿಯ ಅಂಚಿನಲ್ಲಿರುವ ಕಾರಣ ಭಾರತ ವಿರುದ್ಧ ಮುಂದೆ ಟೆಸ್ಟ್ ಆಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಕೊಹ್ಲಿ ವಿರುದ್ಧ ಆ್ಯಂಡರ್ಸನ್ ಬೌಲಿಂಗ್ ಮಾಡುವುದನ್ನು ನೋಡುವ ಅವಕಾಶ ಮತ್ತೆ ಸಿಗುವ ಸಾಧ್ಯತೆ ಕಡಿಮೆ.

ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್ ಆ್ಯಂಡರ್ಸನ್ ಮುಖಾಮುಖಿ ಅಂದಾಕ್ಷಣ ಕಳೆದ 3 ಸರಣಿಗಳು ನೆನಪಿಗೆ ಬರುತ್ತವೆ. ಮೂರೂ ಕೂಡ ಇಂಗ್ಲೆಂಡ್’ನಲ್ಲೇ ನಡೆದಿರುವ ಟೆಸ್ಟ್ ಸರಣಿಗಳು.

ಕೊಹ್ಲಿ Vs ಆ್ಯಂಡರ್ಸನ್ (ಇಂಗ್ಲೆಂಡ್’ನಲ್ಲಿ ನಡೆದ ಟೆಸ್ಟ್)

2014ರ ಸರಣಿ
ಎಸೆತ: 50
ರನ್: 19
ಔಟ್: 04

2018ರ ಸರಣಿ
ಎಸೆತ: 270
ರನ್: 114
ಔಟ್: 00

2021-22ರ ಸರಣಿ
ಎಸೆತ: 144
ರನ್: 69
ಔಟ್: 02

2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿಯಲ್ಲಿ ಆ್ಯಂಡರ್ಸನ್ ವಿರುದ್ಧ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದರು. ಆ್ಯಂಡರ್ಸನ್ ವಿರುದ್ಧ 50 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ ಕೇವಲ 19 ರನ್ ಗಳಿಸಿದ್ದರು, 4 ಬಾರಿ ಆ್ಯಂಡರ್ಸನ್”ಗೆ ವಿಕೆಟ್ ಒಪ್ಪಿಸಿದ್ದರು. ಆದರೆ 2018ರಲ್ಲಿ ಚಿತ್ರಣವೇ ಬದಲಾಗಿತ್ತು. 2014ರಲ್ಲಿ ಆ್ಯಂಡರ್ಸನ್ ವಿರುದ್ಧ ರನ್ ಗಳಿಸಲು ಒದ್ದಾಡಿದ್ದ ವಿರಾಟ್ ಕೊಹ್ಲಿ, 2018ರ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ದಿಗ್ಗಜ ವೇಗಿಯನ್ನು ಬೆಂಡೆತ್ತಿದ್ದರು. ಅಷ್ಟೇ ಅಲ್ಲ, ಆಡಿದ 10 ಇನ್ನಿಂಗ್ಸ್”ಗಳಲ್ಲಿ ಒಮ್ಮೆಯೂ ಜೇಮ್ಸ್ ಆ್ಯಂಡರ್ಸನ್”ಗೆ ವಿಕೆಟ್ ಒಪ್ಪಿಸಿರಲಿಲ್ಲ. ಆ ಸರಣಿಯಲ್ಲ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 2 ಶತಕ, 3 ಅರ್ಧಶತಕಗಳ ಸಹಿತ 59ರ ಸರಾಸರಿಯಲ್ಲಿ 593 ರನ್ ಸಿಡಿಸಿ ಅಬ್ಬರಿಸಿದ್ದರು. 2021-22ರ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಎದುರಿಸಿದ 144 ಎಸೆತಗಳಲ್ಲಿ ವಿರಾಟ್ 69 ರನ್ ಗಳಿಸಿದ್ದು, 2 ಬಾರಿ ಆ್ಯಂಡರ್ಸನ್ ದಾಳಿಯಲ್ಲಿ ಔಟಾಗಿದ್ದಾರೆ.

ಟೆಸ್ಟ್ ಕ್ರಿಕೆಟ್ : ಕೊಹ್ಲಿ Vs ಆ್ಯಂಡರ್ಸನ್ ಮುಖಾಮುಖಿ
ರನ್: 305
ಎಸೆತ: 710
ಔಟ್: 07
ಸರಾಸರಿ: 43.57
ಬೌಂಡರಿ: 39

ಇದನ್ನೂ ಓದಿ : Rohit Sharma batting practice : ಟೀಮ್ ಇಂಡಿಯಾ ಟೆಸ್ಟ್ ಆಡುತ್ತಿರುವ 500 ಮೀ. ದೂರದಲ್ಲೇ ರೋಹಿತ್ ಬ್ಯಾಟಿಂಗ್ ಅಭ್ಯಾಸ

ಇದನ್ನೂ ಓದಿ : Virat Kohli : ದ್ರಾವಿಡ್, ಸಚಿನ್‌ಗೂ ಸಾಧ್ಯವಾಗದ ದಾಖಲೆ… ಕಿಂಗ್ ಕೊಹ್ಲಿ ಹೊಸ ರೆಕಾರ್ಡ್ !

Virat Kohli vs James Anderson this is last test series

Comments are closed.