ಬ್ರಿಸ್ಬೇನ್: Virat Kohli with fan girl : ಟಿ20 ವಿಶ್ವಕಪ್ (T20 World Cup 2022) ಟೂರ್ನಿಗೆ ಸಜ್ಜಾಗುತ್ತಿರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಹೊರತಾದ ವಿಚಾರಕ್ಕೆ ಭರ್ಜರಿ ಸುದ್ದಿಯಲ್ಲಿದ್ದಾರೆ. ಬ್ರಿಸ್ಬೇನ್’ನಲ್ಲಿ ವಿರಾಟ್ ಕೊಹ್ಲಿ ಸುರಸುಂದರಾಂಗಿಯೊಬ್ಬಳ ಜೊತೆ ಕಾಣಿಸಿಕೊಂಡಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಜೊತೆ ಕಾಣಿಸಿಕೊಂಡಿರುವ ಆ ಚೆಲುವೆ ಹೆಸರು ಅಮೀಷಾ ಬಸೇರಾ (Ameesha Basera). ಭಾರತೀಯ ಮೂಲದ ಅಮೀಷಾ ಬ್ರಿಸ್ಬೇನ್’ನಲ್ಲಿ ನೆಲೆಸಿದ್ದು, ಕ್ವೀನ್ಸ್’ಲ್ಯಾಂಡ್ ಯೂನಿವರ್ಸಿಟಿಯ ವಿದ್ಯಾರ್ಥಿನಿ. ವಿರಾಟ್ ಕೊಹ್ಲಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿರುವ ಅಮೀಷಾ ಬಸೇರಾ ಆ ಮಿಲಿಯನ್ ಡಾಲರ್ ಚಿತ್ರವನ್ನು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. “ಇದು ನನ್ನ ಜೀವನದ ಅತ್ಯಂತ ಶ್ರೇಷ್ಠ ಕ್ಷಣ. ನನ್ನ ಖುಷಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ” ಎಂದು ಇನ್’ಸ್ಟಾಗ್ರಾಂನಲ್ಲಿ ಅಮೀಷಾ ಬರೆದುಕೊಂಡಿದ್ದಾರೆ.
ಅಮೀಷಾ ಬಸೇರಾ ವಿರಾಟ್ ಕೊಹ್ಲಿಯವರ ದೊಡ್ಡ ಅಭಿಮಾನಿ. ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳನ್ನಾಡಲು ಟೀಮ್ ಇಂಡಿಯಾ ಬ್ರಿಸ್ಬೇನ್’ನಲ್ಲಿದ್ದಾಗ ಅಮೀಷಾ, ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಸೋಮವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದ ನಂತರ ಈ ಭೇಟಿ ನಡೆದಿದೆ. ತಮ್ಮ ನೆಚ್ಚಿನ ಕ್ರಿಕೆಟಿಗನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಅಮೀಷಾ ಆಟೋಗ್ರಾಫ್ ಕೂಡ ಪಡೆದಿದ್ದಾರೆ.
ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯವನ್ನು 6 ರನ್’ಗಳಿಂದ ರೋಚಕವಾಗಿ ಗೆದ್ದುಕೊಂಡಿದ್ದ ಭಾರತ ಬುಧವಾರ ನ್ಯೂಜಿಲೆಂಡ್ ವಿರುದ್ಧ 2ನೇ ಅಭ್ಯಾಸ ಪಂದ್ಯವಾಡಬೇಕಿತ್ತು. ಆದರೆ ಮಳೆಯ ಕಾರಣ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದೊಂದಿಗೆ ಆರಂಭವಾಗಲಿದೆ. ಇಡೀ ಕ್ರಿಕೆಟ್ ಜಗತ್ತು ಕಾತರದಿಂದ ಎದುರು ನೋಡುತ್ತಿರುವ ಈ ಮೆಗಾ ಫೈಟ್ (India Vs Pakistan) ಮುಂದಿನ ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ. ಈಗಾಗಲೇ ಬ್ರಿಸ್ಬೇನ್’ ನಲ್ಲಿ ಕಠಿಣ ಅಭ್ಯಾಸ ನಡೆಸಿರುವ ಭಾರತ ತಂಡ ಗುರುವಾರ ಮೆಲ್ಬೋರ್ನ್’ಗೆ ಪ್ರಯಾಣಿಸಲಿದ್ದು, ಅಲ್ಲಿ ಎರಡು ದಿನಗಳ ಕಾಲ ಅಭ್ಯಾಸ ನಡೆಸಲಿದೆ.
ಇದನ್ನೂ ಓದಿ : Australia announced new captain : ಟಿ20 ವಿಶ್ವಕಪ್ ಮಧ್ಯೆಯೇ ಹೊಸ ನಾಯಕನನ್ನು ಘೋಷಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
ಇದನ್ನೂ ಓದಿ : Virat Kohli Pakistan Players : ಪಾಕಿಸ್ತಾನ ಆಟಗಾರರೊಂದಿಗೆ ವಿರಾಟ್ ಕೊಹ್ಲಿ ನೆಟ್ ಪ್ರಾಕ್ಟೀಸ್
Virat Kohli with fan girl in T20 World Cup 2022