ನಾಗ್ಪುರ: ಬಹು ನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (Border-Gavaskar Trophy test series) ಇನ್ನು ನಾಲ್ಕೇ ದಿನಗಳು ಬಾಕಿ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಫೆಬ್ರವರಿ 9ರಂದು ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭವಾಗಲಿದೆ. ಕಾಂಗರೂಗಳ ವಿರುದ್ಧದ ಹೈವೋಲ್ಟೇಜ್ ಟೆಸ್ಟ್ ಸರಣಿಯಲ್ಲಿ (India Vs Australia test series) ಅಬ್ಬರಿಸಲು ಕಿಂಗ್ ಕೊಹ್ಲಿ (Virat Kohli workout) ರೆಡಿಯಾಗ್ತಿದ್ದಾರೆ. ಆಸೀಸ್ ಸರಣಿಗೆ ಅಭ್ಯಾಸ ನಡೆಸುತ್ತಿರುವ ವಿರಾಟ್ ಕೊಹ್ಲಿ ಜಿಮ್’ನಲ್ಲಿ ಬೆವರಳಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಇಲ್ಲಿಯವರೆಗೆ 7 ಟೆಸ್ಟ್ ಶತಕಗಳನ್ನು ಬಾರಿಸಿದ್ದಾರೆ. ಇದು ಯಾವುದೇ ಎದುರಾಳಿಯ ವಿರುದ್ಧ ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್’ನಲ್ಲಿ ಗಳಿಸಿರುವ ಅತೀ ಹೆಚ್ಚು ಸೆಂಚುರಿ. ಕಾಂಗರೂಗಳ ವಿರುದ್ಧ ಒಟ್ಟು 20 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 7 ಶತಕಗಳ ಸಹಿತ 48.05ರ ಸರಾಸರಿಯಲ್ಲಿ 1682 ರನ್ ಕಲೆ ಹಾಕಿದ್ದಾರೆ. ವೃತ್ತಿಜೀವನದಲ್ಲಿ ಒಟ್ಟು 104 ಟೆಸ್ಟ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 48.90ರ ಸರಾಸರಿಯಲ್ಲಿ 27 ಶತಕ ಹಾಗೂ 28 ಅರ್ಧಶತಕಗಳ ನೆರವಿನಿಂದ 8119 ರನ್ ಗಳಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (India Vs Australia test series) ಆತಿಥೇಯ ಭಾರತ ತಂಡದ ಅಭ್ಯಾಸ ಶಿಬಿರ ಗುರುವಾರ ನಾಗ್ಪುರದ ಜಮ್ತಾದಲ್ಲಿರುವ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿರುವ ಎಲ್ಲಾ ಆಟಗಾರರು ಟೀಮ್ ಇಂಡಿಯಾ ಟ್ರೈನಿಂಗ್ ಕ್ಯಾಂಪ್’ಗೆ ಹಾಜರಾಗಿದ್ದಾರೆ.
ಇದನ್ನೂ ಓದಿ : Exclusive: ಬೆಂಗಳೂರಲ್ಲಿ ಕಿಚ್ಚ ಸುದೀಪ್ ಭೇಟಿ ಮಾಡಿದ ರಾಜಸ್ಥಾನ್ ಕ್ಯಾಪ್ಟನ್ ಸಂಜು ಸ್ಯಾಮ್ಸನ್, ಕಾರಣವೇನು ಗೊತ್ತೇ?
ಇದನ್ನೂ ಓದಿ : MS Dhoni: ಧೋನಿಗೆ ಸಂಕಷ್ಟ! ಮಹಿ ಶಾಲೇಲಿ ಓದೋಕೆ ಫೀಸ್ ಎಷ್ಟು ಗೊತ್ತೇ?
ಇದನ್ನೂ ಓದಿ : Shaheen Shah Afridi Wedding : ಶಾಹೀದ್ ಅಫ್ರಿದಿ ಪುತ್ರಿಯನ್ನು ಮದುವೆಯಾದ ಶಾಹೀನ್ ಶಾ ಆಫ್ರಿದಿ
Virat Kohli workout : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ವೇಳಾಪಟ್ಟಿ (India Vs Australia (Border-Gavaskar Trophy test series):
ಪ್ರಥಮ ಟೆಸ್ಟ್: ಫೆಬ್ರವರಿ 9-13 (ವಿಸಿಎ ಕ್ರೀಡಾಂಗಣ, ಜಮ್ತಾ; ನಾಗ್ಪುರ)
2ನೇ ಟೆಸ್ಟ್: ಫೆಬ್ರವರಿ 17-21 (ಫಿರೋಜ್ ಶಾ ಕ್ರೀಡಾಂಗಣ, ದೆಹಲಿ)
3ನೇ ಟೆಸ್ಟ್: ಮಾರ್ಚ್ 1-5 (HPCA ಕ್ರೀಡಾಂಗಣ, ಧರ್ಮಶಾಲಾ)
4ನೇ ಟೆಸ್ಟ್: ಮಾರ್ಚ್ 9-13 (ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್)
Virat Kohli workout: King Kohli’s intense workout for kangaroo hunting, Virat in the gym, biceps viral