ಮಹಿಳಾ ಪ್ರೀಮಿಯರ್ ಲೀಗ್ : RCBಗೆ ಇಂದು ಡೆಲ್ಲಿ ಚಾಲೆಂಜ್, ಇಲ್ಲಿದೆ ಹೈವೋಲ್ಟೇಜ್ ಪಂದ್ಯದ ಕಂಪ್ಲೀಟ್ ಮಾಹಿತಿ

ಮುಂಬೈ : ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (Women’s Premier League 2023) ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಹೈವೋಲ್ಟೇಜ್ ಪಂದ್ಯ ಮುಂಬೈನ ಬ್ರೊಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಶನಿವಾರ ನಡೆದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು .. ರನ್’ಗಳಿಂದ ಭರ್ಜರಿಯಾಗಿ ಸೋಲಿಸಿ ಶುಭಾರಂಭ ಮಾಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಟೀಮಾ ಇಂಡಿಯಾ ಸೂಪರ್ ಸ್ಟಾರ್ ಸ್ಮೃತಿ ಮಂಧನ ಮುನ್ನಡೆಸಲಿದ್ರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಐಸಿಸಿ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮುನ್ನಡೆಸಲಿದ್ದಾರೆ. ಈ ಪಂದ್ಯ ಕ್ರಿಕೆಟ್ ಜಗತ್ತಿನ ಸ್ಟಾರ್ ಆಟಗಾರ್ತಿಯರ ಮುಖಾಮುಖಿಗೆ ಸಾಕ್ಷಿಯಾಗಲಿದೆ.

Women’s Premier League 2023 : ಕ್ಲ್ಯಾಷ್ ಆಫ್ ಸ್ಟಾರ್ಸ್
ಸ್ಮೃತಿ ಮಂಧನ Vs ಜೆಮೈಮಾ ರಾಡ್ರಿಗ್ಸ್
ಶೆಫಾಲಿ ವರ್ಮಾ Vs ರಿಚಾ ಘೋಷ್
ಎಲೀಸ್ ಪೆರಿ Vs ಮೆಗ್ ಲ್ಯಾನಿಂಗ್
ಡೇನ್ ವಾನ್ ನೀಕರ್ಕ್ Vs ಮರಿಜಾನ್ ಕಪ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ಪ್ಲೇಯಿಂಗ್ XI :
1.ಸ್ಮೃತಿ ಮಂಧನ (ನಾಯಕಿ), 2.ಸೋಫಿ ಡಿವೈನ್, 3.ಹೆದರ್ ನೈಟ್, 4.ಎಲೀಸ್ ಪೆರಿ, 5.ರಿಚಾ ಘೋಷ್ (ವಿಕೆಟ್ ಕೀಪರ್), 6.ದಿಶಾ ಕಸಟ್, 7.ಕೋಮಲ್ ಜನ್ಜದ್, 8.ಮೆಗಾನ್ ಶುಟ್, 9.ರೇಣುಕಾ ಸಿಂಗ್ ಠಾಕೂರ್, 10.ಪ್ರೀತಿ ಬೋಸ್, 11.ಶ್ರೇಯಾಂಕಾ ಪಾಟೀಲ್.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ XI :
1.ಶೆಫಾಲಿ ವರ್ಮಾ, 2.ಜೆಮೈಮಾ ರಾಡ್ರಿಗ್ಸ್, 3.ಮೆಗ್ ಲ್ಯಾನಿಂಗ್, 4.ಮರಿಜಾನ್ ಕಪ್, 5.ಲೌರಾ ಹ್ಯಾರಿಸ್, 6.ಜೇಸಿಯಾ ಅಖ್ತರ್, 7.ತಾನಿಯಾ ಭಾಟಿಯಾ (ವಿಕೆಟ್ ಕೀಪರ್), 8.ಜೆಸ್ ಜೊನಾಸೆನ್, 9.ರಾಧಾ ಯಾದವ್, 10.ಶಿಖಾ ಪಾಂಡೆ, 11.ಟಾರಾ ನೊರಿಸ್.

ಇದನ್ನೂ ಓದಿ : Yashasvi Jaiswal: ಇರಾನಿ ಕಪ್‌ನಲ್ಲಿ ಡಬಲ್ ಧಮಾಕ,15 ಪಂದ್ಯಗಳಲ್ಲಿ 9 ಶತಕ, 3 ದ್ವಿಶತಕ; ಭಾರತ ತಂಡದ ಬಾಗಿಲು ಬಡಿಯುತ್ತಿದ್ದಾನೆ ಪಾನಿಪುರಿ ಹುಡುಗ

ಇದನ್ನೂ ಓದಿ : ಸಾಮಾನ್ಯರಂತೆ ಉಜ್ಜಯನಿ ಮಹಾಕಾಲೇಶ್ವರ ದರ್ಶನ ಪಡೆದ ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ

ಇದನ್ನೂ ಓದಿ : WPL 2023 : ಇಂದಿನಿಂದ ಮಹಿಳಾ ಪ್ರೀಮಿಯರ್‌ ಲೀಗ್‌ ಆರಂಭ, ತಂಡಗಳ ಬಲಾಬಲ, ವೇಳಾಪಟ್ಟಿ, ನೇರಪ್ರಸಾರ; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಮಹಿಳಾ ಪ್ರೀಮಿಯರ್ ಲೀಗ್ 2023 (Women’s Premier League 2023) :
ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ಡೆಲ್ಲಿ ಕ್ಯಾಪಿಟಲ್ಸ್
ಪಂದ್ಯ ಆರಂಭ: ರಾತ್ರಿ 7.30ಕ್ಕೆ
ಸ್ಥಳ: ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ
ನೇರ ಪ್ರಸಾರ: ಸ್ಪೋರ್ಟ್ಸ್ 18
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ

Women’s Premier League 2023 : Delhi Challenge for RCB today, here is the complete information of the high voltage match

Comments are closed.