Women’s Premier League: ಯು.ಪಿ ವಿರುದ್ಧ ಆರ್‌ಸಿಬಿಗೆ ಮಾಡು ಇಲ್ಲ ಮಡಿ ಪಂದ್ಯ : ಇಂದೂ ಸೋತರೆ ರಾಯಲ್ ಚಾಲೆಂಜರ್ಸ್ ವನಿತೆಯರ ಪ್ಲೇ ಆಫ್ ಕನಸು ಭಗ್ನ

ಮುಂಬೈ: ಸತತ ಮೂರು ಸೋಲುಗಳನ್ನು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore) ಮಹಿಳಾ ಪ್ರೀಮಿಯರ್ ಲೀಗ್’ನ (Women’s Premier League) ತನ್ನ 4ನೇ ಪಂದ್ಯದಲ್ಲಿ ಬಲಿಷ್ಠ ಯು.ಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಈ ಪಂದ್ಯ ಸ್ಮೃತಿ ಮಂಧನ ನಾಯಕತ್ವದ ರಾಯಲ್ ಚಾಲೆಂಜರ್ಸ್ (Women’s RCB team) ಪಡೆಗೆ ಮಾಡು ಇಲ್ಲ ಮಡಿ ಪಂದ್ಯ. ಈಗಾಗಲೇ ಹ್ಯಾಟ್ರಿಕ್ ಸೋಲು ಕಂಡಿರುವ RCB ಈ ಪಂದ್ಯವನ್ನೂ ಸೋತರೆ ಪ್ಲೇ ಆಫ್ ರೇಸ್’ನಿಂದ ಹೊರ ಬೀಳಲಿದೆ.

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್’ಗಳ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್’ಗಳ ಭಾರೀ ಅಂತರದ ಸೋಲು ಅನುಭವಿಸಿತ್ತು. ಬುಧವಾರ ನಡೆದ 3ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 11 ರನ್’ಗಳ ಅಂತರದಲ್ಲಿ ಮುಗ್ಗರಿಸಿತ್ತು. ಸತತ ಮೂರು ಸೋಲುಗಳ ಕಾರಣ ಅಂಕಪಟ್ಟಿಯಲ್ಲಿ ಇನ್ನೂ ಖಾತೆ ತೆರೆಯಲು ವಿಫಲವಾಗಿರುವ RCB ಕೊನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ ಕನಸನ್ನು ಜೀವಂತವಾಗಿಡಲು ಸ್ಮೃತಿ ಮಂಧನ ಬಳಗ ಮುಂದಿನ ಐದೂ ಲೀಗ್ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಇದನ್ನೂ ಓದಿ : India Vs Australia 4th test match : ಖವಾಜ 150, ಕ್ಯಾಮರೂನ್ ಗ್ರೀನ್ ಚೊಚ್ಚಲ ಶತಕ; 24 ಗಂಟೆಗಳಲ್ಲಿ 2ನೇ ಬಾರಿ ಟೀಮ್ ಇಂಡಿಯಾ ವಿಕೆಟ್ ಲೆಸ್

ಇದನ್ನೂ ಓದಿ : India Vs Australia test : ಉಸ್ಮಾನ್ ಖವಾಜ ಭರ್ಜರಿ ಶತಕ, ಮೋದಿ ಸ್ಟೇಡಿಯಂನಲ್ಲಿ ಕಾಂಗರೂಗಳ ಆರ್ಭಟ, ಮೊದಲ ದಿನವೇ ಕೈಜಾರಿತಾ ಟೆಸ್ಟ್?

ಇದನ್ನೂ ಓದಿ : India Vs Australia test : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷ ಪ್ರೇಕ್ಷಕರು, ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ

WPL ಟೂರ್ನಿ: RCB ತಂಡದ ಮುಂದಿನ ಪಂದ್ಯಗಳು :

  • ಮಾರ್ಚ್ 10: Vs ಯುಪಿ ವಾರಿಯರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
  • ಮಾರ್ಚ್ 13: Vs ಡೆಲ್ಲಿ ಕ್ಯಾಪಿಟಲ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
  • ಮಾರ್ಚ್ 15: Vs ಯುಪಿ ವಾರಿಯರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
  • ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
  • ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)

Women’s RCB team: UP vs RCB match: Royal Challengers Women’s play-off dream shattered if they lose today

Comments are closed.