Bank manager suicide case: ಮಹಾಲಕ್ಷ್ಮಿ ಕೋ ಆಪರೇಟಿವ್‌ ಬ್ಯಾಂಕ್‌ ಮ್ಯಾನೇಜರ್‌ ಆತ್ಮಹತ್ಯೆ ಪ್ರಕರಣ: ಬ್ಯಾಂಕ್‌ ಅಧ್ಯಕ್ಷ ಸೇರಿ ಐವರ ವಿರುದ್ದ ದೂರು

ಉಡುಪಿ: (Bank manager suicide case) ಜಿಲ್ಲೆಯ ಮಹಾಲಕ್ಷ್ಮಿ ಕೋ ಆಪರೇಟಿವ್‌ ಬ್ಯಾಂಕ್‌ ಮ್ಯಾನೇಜರ್‌ ಸುಬ್ಬಣ್ಣ ಎನ್ನುವವರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಸಹೋದರನ ದೂರಿನ ಆಧಾರದ ಮೇಲೆ ಬ್ಯಾಂಕಿನ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ ಪಾಲ್‌ ಸುವರ್ಣ ಸೇರಿದಂತೆ ಐವರ ವಿರುದ್ದ ದೂರು ದಾಖಲಾಗಿದೆ.

ಮಾ. 8 ರಂದು ರಾತ್ರಿ ವೇಳೆ ಮಲ್ಪೆಯ ರಾಜ್‌ ಮಹಲ್‌ ಲಾಡ್ಜ್‌ ನಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ಸುಬ್ಬಣ್ಣ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಮೃತದೇಹದ ಬಳಿ ಡೆತ್‌ ನೋಟ್‌ ಕೂಡ ಕಂಡುಬಂದಿದ್ದು, ಬ್ಯಾಂಕಿನ ಆಡಳಿತ ಮಂಡಳಿಯ ಒತ್ತಡ, ಮೇಲಾಧಿಕಾರಿಯ ಅಸಹಕಾರ ಹಾಗೂ ಸಾಲಗಾರನ ಮೋಸದ ನಡವಳಿಕೆಯೇ ಸಾವಿಗೆ ಕಾರಣ ಎಂದು ಬರೆಯಲಾಗಿತ್ತು.

ಈ ಬಗ್ಗೆ ಮೃತ ಸುಬ್ಬಣ್ಣ ಅವರ ಸಹೋದರ ಸುರೇಶ್‌ ಕೆ ಅವರು ಪೊಲೀಸರಿಗೆ ದೂರು ನೀಡಿದ್ದು, ಬ್ಯಾಂಕ್‌ ಅಧ್ಯಕ್ಷ ಯಶ್‌ ಪಾಲ್‌ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್‌ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ. ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ ಹಾಗೂ ಸಾಲಗಾರ ರಿಝಾಝ್‌ ಎನ್ನುವವರು ನೀಡಿದ ಮಾನಸಿಕ ಒತ್ತಡ ಹಾಗೂ ಬ್ಯಾಂಕಿನ ಸಾಲ ತೀರಿಸಬೇಕು, ಇಲ್ಲದಿದ್ದಲ್ಲಿ ಜೀವ ತೆಗೆಯುವುದಾಗಿ ಹಾಕಿದ ಬೆದರಿಕೆ ಈ ಸಾವಿಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : BMTC ಬಸ್‌ನಲ್ಲಿ ಅಗ್ನಿ ದುರಂತ, ಕಂಡಕ್ಟರ್‌ ಸಜೀವ ದಹನ

ಇದನ್ನೂ ಓದಿ : ಮಾರ್ಕೆಟ್ ಕಾಂಪ್ಲೆಕ್ಸ್‌ನಲ್ಲಿ ಭಾರೀ ಬೆಂಕಿ ಅವಘಡ; 3 ಮಂದಿಗೆ ಗಾಯ

ಇದಲ್ಲದೇ ಈ ಸಾವಿನ ಬಗ್ಗೆ ಸಂಶಯವಿದ್ದು, ಆಡಳಿತ ಮಂಡಳಿ ಹಾಗೂ ಸಾಲಗಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸುರೇಶ್‌ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ದ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ ಅಧ್ಯಕ್ಷ ಯಶ್‌ ಪಾಲ್‌ ಸುವರ್ಣ, ಆಡಳಿತ ನಿರ್ದೇಶಕ ಜಗದೀಶ್‌ ಮೊಗವೀರ, ಮಾಜಿ ಆಡಳಿತ ನಿರ್ದೇಶಕ ಜೆ.ಕೆ. ಸೀನ ಗಂಗೊಳ್ಳಿ, ಮ್ಯಾನೇಜರ್ ಸಾರಿಕಾ ಹಾಗೂ ಸಾಲಗಾರ ರಿಝಾಝ್‌ ವಿರುದ್ದ ಪ್ರಕರಣ ದಾಖಲಾಗಿದೆ.

Bank manager suicide case: Mahalakshmi Cooperative Bank manager suicide case: Complaint against bank president and five others

Comments are closed.