ಭಾನುವಾರ, ಏಪ್ರಿಲ್ 27, 2025
HomeSportsCricket5 ಪಂದ್ಯದಲ್ಲಿ‌ ಸತತ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಭಾರತಕ್ಕೆ ಸುಲಭವಲ್ಲ ವಿಶ್ವಕಪ್‌ ಸೆಮಿಫೈನಲ್‌...

5 ಪಂದ್ಯದಲ್ಲಿ‌ ಸತತ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ : ಭಾರತಕ್ಕೆ ಸುಲಭವಲ್ಲ ವಿಶ್ವಕಪ್‌ ಸೆಮಿಫೈನಲ್‌ ಹಾದಿ

- Advertisement -

ಭಾರತ ಕ್ರಿಕೆಟ್‌ ತಂಡ  (Indian Cricket Team)ಈ ಬಾರಿಯ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಸತತ ಐದು ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆದ್ರೂ ಭಾರತ ಕ್ರಿಕೆಟ್‌ ತಂಡ ವಿಶ್ವಕಪ್ ಸೆಮಿಫೈನಲ್‌ (world Cup 2023 Semi Final) ಪ್ರವೇಶಿಸೋದು ಅಷ್ಟು ಸುಲಭವಲ್ಲ. ಇಲ್ಲಿದೆ Exclusive Report ರಿಪೋರ್ಟ್‌

ಕಳೆದ ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಿಂದ ಹೊರಬಿದ್ದಿತ್ತು. ಆದ್ರೆ ಈ ಬಾರಿ ವಿಶ್ವಕಪ್‌ಗೆ ಮುತ್ತಿಕ್ಕಲು ಭಾರತ ತಂಡ ಸರ್ವ ರೀತಿಯಲ್ಲಿಯೂ ಸಜ್ಜಾಗಿದೆ. ಏಷ್ಯಾಕಪ್‌, ಆಸ್ಟ್ರೇಲಿಯಾ ವಿರುದ್ದದ ಸರಣಿಯನ್ನು ಗೆದ್ದು ಬೀಗಿರುವ ಭಾರತ ವಿಶ್ವಕಪ್‌ ಆರಂಭದಿಂದಲೇ ಆರ್ಭಟಿಸುತ್ತಿದೆ. ಸತತ ಐದು ಪಂದ್ಯಗಳನ್ನು ಗೆದ್ದಿರುವ ಭಾರತ 10 ಅಂಕಗಳನ್ನು ಪಡೆದು ವಿಶ್ವಕಪ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

world cup 2023 Win in 5 matches top the table India path to the World Cup semifinals will not be easy
Image Credit to Original Source

ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡ ಈಗಾಗಲೇ ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ತಂಡಗಳ ವಿರುದ್ದ ಭರ್ಜರಿ ಗೆಲುವು ದಾಖಲಿಸಿದೆ. ಜೊತೆಗೆ ಬಾಂಗ್ಲಾ, ಅಪ್ಘಾನಿಸ್ತಾನ ತಂಡಗಳನ್ನು ಸೋಲಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ ಮುಂದಿನ ಹಾದಿ ಭಾರತಕ್ಕೆ ಹೇಳಿಕೊಳ್ಳುವಷ್ಟು ಸುಲಭವಲ್ಲ.

ಇದನ್ನೂ ಓದಿ : ಹಾರ್ದಿಕ್‌ ಪಾಂಡ್ಯ ಬೆನ್ನಲ್ಲೇ ರೋಹಿತ್‌ ಶರ್ಮಾ- ವಿರಾಟ್‌ ಕೊಹ್ಲಿ ಔಟ್‌ !

ಭಾರತ ತಂಡದಿಂದ ಹಾರ್ದಿಕ್‌ ಪಾಂಡ್ಯ ಗಾಯಗೊಂಡಿರುವುದನ್ನು ಹೊರತು ಪಡಿಸಿದ್ರೆ ಸದ್ಯ ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆಯಿಲ್ಲ. ಇನ್ನು ಭಾರತ ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ತಂಡಕ್ಕೂ ವಿಶ್ವಕಪ್‌ ನಲ್ಲಿ ಭಾರತವನ್ನು ಸೋಲಿಸೋದಕ್ಕೆ ಸಾಧ್ಯವಾಗಿಲ್ಲ.

ಸದ್ಯ ಭಾರತ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡ ಎನ್ನಲಾಗುತ್ತಿದೆ. ಜೊತೆಗೆ ಅಂಕಪಟ್ಟಿಯನ್ನು ನೋಡಿದ್ರೆ ಭಾರತ ಸುಲಭವಾಗಿಯೇ ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸಲಿದೆ. ಆದರೆ ಅಸಲಿ ವಿಚಾರ ಇರೋದೆ ಇಲ್ಲಿ. ಯಾಕೆಂದ್ರ ಭಾರತ ಮುಂದಿನ ಪಂದ್ಯವನ್ನು ಇಂಗ್ಲೆಂಡ್‌, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ನೆದರ್‌ಲ್ಯಾಂಡ್‌ ತಂಡದ ವಿರುದ್ದ ಸೆಣೆಸಾಡಲಿದೆ.

world cup 2023 Win in 5 matches top the table India path to the World Cup semifinals will not be easy
Image credit to Original Source

ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ ಪಂದ್ಯದಿಂದ ಹೊರಬಿದ್ದಿತ್ತು. ಇದಕ್ಕೆ ಕಾರಣವಾಗಿರೋದು ಇಂಗ್ಲೆಂಡ್‌ ತಂಡ. ಅಷ್ಟೇ ಅಲ್ಲಾ ಕಳೆದ ಬಾರಿ ಇಂಗ್ಲೆಂಡ್‌ ವಿಶ್ವಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆದ್ರೆ ಭಾರತ ಇದೇ ಇಂಗ್ಲೆಂಡ್‌ ತಂಡದ ವಿರುದ್ದ ಮುಂದಿನ ಪಂದ್ಯವನ್ನು ಆಡಲಿದೆ.

ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಂತಹ ಬಲಿಷ್ಠ ತಂಡವನ್ನು ಬಗ್ಗು ಬಡಿದಿರುವ ಭಾರತಕ್ಕೆ ಇಂಗ್ಲೆಂಡ್‌ ವಿರುದ್ದದ ಗೆಲುವು ಕಷ್ಟವೇನಲ್ಲ. ಆದ್ರೆ ಇದೇ ಇಂಗ್ಲೆಂಡ್‌ ತಂಡ ಕಳೆದ ಭಾರತ ತಂಡವನ್ನು ವಿಶ್ವಕಪ್‌ ನಿಂದಲೇ ಹೊರದಬ್ಬಿತ್ತು. ಬರೋಬ್ಬರಿ ಹತ್ತು ವಿಕೆಟ್‌ಗಳ ಅಂತರದಿಂದ ಭಾರತವನ್ನು ಸೋಲಿಸುವ ಮೂಲಕ ಭಾರತೀಯರಿಗೆ ನಿರಾಸೆ ಮೂಡಿಸಿತ್ತು.

ಇದನ್ನೂ ಓದಿ : ICC World Cup 2023 : ಅಫ್ಘಾನಿಸ್ತಾನ ಗೆಲುವಿನ ಹಿಂದಿದೆ ಟೀಂ ಇಂಡಿಯಾ ಆಟಗಾರ‌ ಅಜಯ್ ಜಡೇಜಾ ಚಾಣಾಕ್ಷತೆ !

ಇನ್ನು ಏಷ್ಯಾಕಪ್‌ ಸೇರಿದಂತೆ ಹಲವು ಸರಣಿಗಳಲ್ಲಿ ಪೈಪೋಟಿಯನ್ನು ನೀಡುತ್ತಿರುವ ಶ್ರೀಲಂಕಾ ಈ ಬಾರಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡುತ್ತಿಲ್ಲ. ಆದರೆ ಶ್ರೀಲಂಕಾ ಭಾರತ ತಂಡದ ಪಾಲಿಗೆ ಡೇಂಜರಸ್.‌ 2007 ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸುವ ಮೂಲಕ ವಿಶ್ವಕಪ್‌ನಿಂದ ಹೊರ ನಡೆಯುವಂತೆ ಮಾಡಿತ್ತು.

ಇದೀಗ ಶ್ರೀಲಂಕಾ ತಂಡದ ವಿರುದ್ದ ಭಾರತ ನವೆಂಬರ್‌ 2 ರಂದು ಪಂದ್ಯವನ್ನು ಆಡಲಿದೆ. ಇಂಗ್ಲೆಂಡ್‌, ಶ್ರೀಲಂಕಾ ಪಂದ್ಯದ ಬಳಿಕ ಭಾರತ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಸದ್ಯ ದಕ್ಷಿಣ ಆಫ್ರಿಕಾ ಭರ್ಜರಿ ಫಾರ್ಮ್‌ನಲ್ಲಿದೆ.  ಡಿಕಾಕ್‌ ಶತಕದ ಮೇಲೆ ಶತಕ ಬಾರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಕೂಡ ಈ ಬಾರಿ ವಿಶ್ವಕಪ್‌ ಗೆಲ್ಲುವ ಫೇವರೇಟ್‌ ತಂಡಗಳಲ್ಲೊಂದು.

world cup 2023 Win in 5 matches top the table India path to the World Cup semifinals will not be easy
Image Credit to Original Source

ಅದ್ಬುತ ಫಾರ್ಮ್‌ನಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ಆಟಗಾರರು ಭಾರತಕ್ಕೆ ತಲೆನೋವು ತಂದೊಡ್ಡುವ ಸಾಧ್ಯತೆಯಿದೆ. ಆದರೆ ಅಂತಿಮ ಪಂದ್ಯದಲ್ಲಿ ಭಾರತ ನೆದರ್‌ಲ್ಯಾಂಡ್‌ ತಂಡವನ್ನು ಎದುರಿಸಲಿದೆ. ಆದರೆ ಈ ಬಾರಿಯ ವಿಶ್ವಕಪ್‌ನಲ್ಲಿ ನೆದರ್‌ಲ್ಯಾಂಡ್‌ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದೆ. ಹೀಗಾಗಿ ಭಾರತ ನೆದರ್‌ಲ್ಯಾಂಡ್‌ ತಂಡವನ್ನು ಲಘುವಾಗಿ ಪರಿಗಣಿಸುವಂಲ್ಲ.

ಸತತ ಐದು ಪಂದ್ಯಗಳನ್ನು ಜಯಿಸಿರುವ ಭಾರತ ತಂಡ ಮುಂದಿನ ನಾಲ್ಕು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ ಅಜೇಯವಾಗಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ವಿಶ್ವಕಪ್‌ ಸೆಮಿಫೈನಲ್‌ಗೆ ಭಾರತ ಎಂಟ್ರಿ ಕೊಡಲಿದೆ. ಒಂದೊಮ್ಮೆ ಮುಂದಿನ ಎರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೂ ಕೂಡ ಭಾರತಕ್ಕೆ ಸೆಮಿಫೈನಲ್‌ ಹಾದಿ ಸುಲಭವಲ್ಲ.

ಇದನ್ನೂ ಓದಿ : KL Rahul Captain : ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಕ್ಕೆ ಕನ್ನಡಿಗ ಕೆಎಲ್‌ ರಾಹುಲ್‌ ನಾಯಕ !

ಒಂದೊಮ್ಮೆ ಮುಂದಿನ ಮೂರು ಪಂದ್ಯಗಳಲ್ಲಿ ಸೋಲನ್ನು ಕಂಡ್ರೂ ಕೂಡ ಇತರರ ತಂಡಗಳ ಗೆಲುವಿನ ಲೆಕ್ಕಾಚಾರದ ಮೇಲೆ ಭಾರತದ ಸೆಮಿಫೈನಲ್‌ ಭವಿಷ್ಯ ಅಡಗಿರಲಿದೆ. ಒಟ್ಟಿನಲ್ಲಿ ಭಾರತ ಮುಂದಿನ ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶಿಸಲಿ ಅಂತಾ ಕೋಟ್ಯಾಂತರ ಅಭಿಮಾನಿಗಳು ಹಾರೈಸುತ್ತಿದ್ದಾರೆ.

world cup 2023 Win in 5 matches, top the table: India path to the World Cup semifinals will not be easy

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular