WTC Points Table 2023-25: ಇಂಗ್ಲೆಂಡ್ ತಂಡದ ವಿರುದ್ದ ಭಾರತ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಈ ಮೂಲಕ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯನ್ನು ಭಾರತ ಜಯಿಸಿದೆ. ರಾಂಚಿ ಟೆಸ್ಟ್ ಗೆಲುವಿನ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ(World Test ಭಾರತ ಎರಡನೇ ಸ್ಥಾನಕ್ಕೇರಿದೆ.
2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಇಂಗ್ಲೆಂಡ್, 9 ಟೆಸ್ಟ್‌ಗಳನ್ನು ಆಡಿದ ನಂತರವೂ ಅದೇ ಸ್ಥಾನದಲ್ಲಿಯೇ ಮುಂದುವರಿದಿದೆ. ಆದರೆ ಭಾರತ ತಂಡ ರಾಂಚಿ ಟೆಸ್ಟ್ ವಿರುದ್ದದ ಗೆಲುವಿನ ನಂತರ ಎರಡನೇ ಸ್ಥಾನಕ್ಕೇರಿದೆ. ಸದ್ಯ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲಿಯೇ ಮುಂದುವರಿದೆ.

ಭಾರತ ತಂಡದ ರಾಂಚಿ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದ್ದರೂ ಕೂಡ ವಿಕೆಟ್ ಕೀಪರ್ ಧ್ರುವ್ ಜುರೆಲ್ 1ನೇ ಮತ್ತು 2ನೇ ಇನ್ನಿಂಗ್ಸ್‌ನಲ್ಲಿ ಕ್ರಮವಾಗಿ 90 ಮತ್ತು 39* ರನ್ ಬಾರಿಸಿದ್ದರು. ಭಾರತ ತಂಡ ಟೆಸ್ಟ್ ಗೆಲುವಿನ ಮೂರ ಸರಣಿಯನ್ನು 3-1 ಅಂತರದಿಂದ ಮುನ್ನಡೆ ಸಾಧಿಸಿದೆ. WTC ಅಂಕಪಟ್ಟಿಯಲ್ಲಿ ಭಾರತ ತಂಡ ಸದ್ಯ 64.58 ಶೇಕಡಾ ಅಂಕಗಳೊಂದಿಗೆ 2 ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ 75 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಇದನ್ನೂ ಓದಿ : ಐಪಿಎಲ್ 2024ಗೆ ಹಾರ್ದಿಕ್ ಪಾಂಡ್ಯ ಎಂಟ್ರಿ ಫಿಕ್ಸ್ : ಎನ್‌ಸಿಎನಲ್ಲಿ ಅಭ್ಯಾಸ ಪಂದ್ಯವಾಡಿದ ಮುಂಬೈ ಇಂಡಿಯನ್ಸ್ ನಾಯಕ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿ :
ತಂಡಗಳು : ಆಡಿದ ಪಂದ್ಯ ಗೆಲುವು ಸೋಲು ಅಂಕ
ನ್ಯೂಜಿಲ್ಯಾಂಡ್ 4 3 1 75
2 ಭಾರತ 8 5 2 64.58
3 ಆಸ್ಟ್ರೇಲಿಯಾ 10 6 3 55
4 ಬಾಂಗ್ಲಾದೇಶ 2 1 1 50
5 ಪಾಕಿಸ್ತಾನ 5 2 3 36.66
6 ವೆಸ್ಟ್ ಇಂಡೀಸ್ 4 1 2 33.33
7 ದಕ್ಷಿಣ ಆಫ್ರಿಕಾ 4 1 3 25
8 ಇಂಗ್ಲೆಂಡ್ 9 3 5 19.44
9 ಶ್ರೀಲಂಕಾ 2 0 2 0
ಇದನ್ನೂ ಓದಿ : IPL 2024 : ಡೆಲ್ಲಿ ಕ್ಯಾಪಿಟಲ್ಸ್‌ಗೆ ರಿಷಬ್ ಪಂತ್ ನಾಯಕ

ಭಾರತದ ಉಳಿದ ಟೆಸ್ಟ್ ಪಂದ್ಯಗಳು :
ಮಾರ್ಚ್ 7-11: ಭಾರತ vs ಇಂಗ್ಲೆಂಡ್ 5 ನೇ ಟೆಸ್ಟ್
ಸೆಪ್ಟೆಂಬರ್: ಭಾರತ vs ಬಾಂಗ್ಲಾದೇಶ 1 ನೇ ಟೆಸ್ಟ್
ಸೆಪ್ಟೆಂಬರ್: ಭಾರತ vs ಬಾಂಗ್ಲಾದೇಶ 2 ನೇ ಟೆಸ್ಟ್
ಅಕ್ಟೋಬರ್: ಭಾರತ vs ನ್ಯೂಜಿಲೆಂಡ್ 1 ನೇ ಟೆಸ್ಟ್
ಅಕ್ಟೋಬರ್: ಭಾರತ vs ನ್ಯೂಜಿಲೆಂಡ್ 2 ನೇ ಟೆಸ್ಟ್
ನವೆಂಬರ್: ಭಾರತ vs ನ್ಯೂಜಿಲೆಂಡ್ 3 ನೇ ಟೆಸ್ಟ್
ನವೆಂಬರ್: ಆಸ್ಟ್ರೇಲಿಯಾ vs ಭಾರತ 1 ನೇ ಟೆಸ್ಟ್
ನವೆಂಬರ್: ಆಸ್ಟ್ರೇಲಿಯಾ vs ಭಾರತ 2 ನೇ ಟೆಸ್ಟ್
ಡಿಸೆಂಬರ್: ಆಸ್ಟ್ರೇಲಿಯಾ vs ಭಾರತ 3ನೇ ಟೆಸ್ಟ್
ಜನವರಿ 2025: ಆಸ್ಟ್ರೇಲಿಯಾ ವಿರುದ್ಧ ಭಾರತ 4ನೇ ಟೆಸ್ಟ್
ಜನವರಿ 2025: ಆಸ್ಟ್ರೇಲಿಯಾ ವಿರುದ್ಧ ಭಾರತ 5ನೇ ಟೆಸ್ಟ್
ಇದನ್ನೂ ಓದಿ : IPL 2024 : ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರುತುರಾಜ್ ಗಾಯಕ್ವಾಡ್ ನಾಯಕ
WTC Points Table 2023-25: India vs England test series India win by 3-1