Soft Rotis : ಮೃದುವಾದ ರೋಟಿ ಮಾಡಲು ಸೆಲೆಬ್ರಿಟಿ ಶೆಫ್‌ ಹೇಳುವ ಈ ಟಿಪ್ಸ್‌ ಫಾಲೋ ಮಾಡಿ

ಭಾರತೀಯರು (Indians) ಮೊದಲು ಕಲಿಯಲೇಬೇಕಾದ ಅಡುಗೆಗಳಲ್ಲಿ ಒಂದು ಮನೆಯಲ್ಲಿಯೇ ತಯಾರಿಸಬಹುದಾದ ‘ರೋಟಿ (Roti)’. ಇದು ಭಾರತೀಯರ ಆಹಾರ ಸಂಸ್ಕೃತಿಯಲ್ಲಿ ಪ್ರಧಾನವಾಗಿದೆ. ನಾವು ರೋಟಿಯ (Soft Rotis) ಜೊತೆ ದಾಲ್, ಪಲ್ಯ, ಉಪ್ಪಿನಕಾಯಿ, ಮೊಸರು ಮತ್ತು ಮುಂತಾದವುಗಳನ್ನು ಸೇರಿಸಿ ಆರೋಗ್ಯಕರ ಊಟವನ್ನು ಮಾಡುತ್ತೇವೆ. ರೋಟಿಯನ್ನು, ನಾವು ಬೆಳಗ್ಗಿನ ಉಪಹಾರಕ್ಕೆ, ಮಧ್ಯಾಹ್ನದ ಊಟಕ್ಕೆ ಮತ್ತು ರಾತ್ರಿಯ ಊಟಕ್ಕೆ ಸೇವಿಸುತ್ತೇವೆ. ಶಾಲೆ, ಕಾಲೇಜು, ಆಫಿಸ್‌ಗಳಿಗೆ ಹೋಗುವವರಿಗಂತೂ ರೋಟಿ ಬಹಳ ಪ್ರಿಯವಾದ ಆಹಾರ. ಆದರೆ ಬಹಳ ಸಮಯದವರೆಗೆ ಇಡುವ ರೋಟಿಗಳು ಗಟ್ಟಿಯಾಗಿ ಬಿಡುತ್ತದಲ್ಲವೆ? ಅದಕ್ಕಾಗಿ ಸೆಲೆಬ್ರಿಟಿ ಶೆಫ್‌ (Celebrity Chef) ಪಂಕಜ್ ಬದೌರಿಯಾ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಮೃದುವಾದ ರೋಟಿಗಳನ್ನು ಮಾಡಲು ಸಹಾಯವಾಗುವ 5 ಸರಳ ಟಿಪ್ಸ್‌ ಹಂಚಿಕೊಂಡಿದ್ದಾರೆ.

ಗೋಧಿ ಹಿಟ್ಟಿನಿಂದ ತಯಾರಿಸಲಾದ ರೋಟಿಯು ನಮ್ಮ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ರೋಟಿ ಮಾಡಲು ಯಾರಿಗೆ ಬರುವುದಿಲ್ಲ? ಹಿಟ್ಟು ಕಲಸಿ, ಚಿಕ್ಕ ಚಿಕ್ಕ ಉಂಡೆಗಳನ್ನು ಲಟ್ಟಿಸಿ, ಅದನ್ನು ಬೇಯಿಸಿದರೆ ಆಯಿತು. ಆದರೆ ಆ ರೋಟಿಗಳು ಬಹಳ ಸಮಯದವರೆಗೆ ಮೃದುವಾಗಿಯೇ ಇರುತ್ತವೆಯೇ? ಉತ್ತರ ಇಲ್ಲ. ಚಿಂತಸಬೇಡಿ, ಇಲ್ಲಿ ಸೆಲೆಬ್ರಿಟಿ ಶೆಫ್‌ ಪಂಕಜ್‌ ಬದೌರಿಯಾ ನಿಮಗಾಗಿ 5 ಸರಳ ಟಿಪ್ಸ್‌ ಹೇಳಿದ್ದಾರೆ. ಅದನ್ನು ಅನುಸರಿಸಿ ನೀವೂ ಮೃದುವಾದ ರೋಟಿ ತಯಾರಿಸಿ.

ಮೃದುವಾದ ರೋಟಿ (Soft Rotis) ಮಾಡಲು ಸೆಲೆಬ್ರಿಟಿ ಶೆಫ್‌ ಪಂಕಜ್‌ ಬದೌರಿಯಾ ನೀಡಿದ 5 ಸರಳ ಟಿಪ್ಸ್‌:

  1. ಯಾವಾಗಲೂ ಹಿಟ್ಟನ್ನು ಬೆರೆಸುವ ಮೊದಲು ಹಿಟ್ಟಿಗೆ ಸ್ವಲ್ಪ ಉಪ್ಪು ಮತ್ತು ಎಣ್ಣೆಯನ್ನು ಸೇರಿಸಿ.
  2. ಸಾಮಾನ್ಯ ನೀರಿನ ಬದಲಿಗೆ ಹಿಟ್ಟನ್ನು ಬೆರೆಸಲು ಯಾವಾಗಲೂ ಉಗುರುಬೆಚ್ಚನೆಯ ನೀರನ್ನು ಬಳಸಿ.
  3. ರೊಟ್ಟಿಗಳನ್ನು ರೋಲ್ ಮಾಡುವ ಮೊದಲು ಯಾವಾಗಲೂ ಹಿಟ್ಟನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
  4. 15 ನಿಮಿಷಗಳ ನಂತರ, ಇನ್ನೊಮ್ಮೆ ಹಿಟ್ಟನ್ನು 1 ನಿಮಿಷದವರೆಗೆ ಚೆನ್ನಾಗಿ ನಾದಿಕೊಳ್ಳಿ.
  5. ಯಾವಾಗಲೂ ರೊಟ್ಟಿಯನ್ನು ಒಂದು ಮಧ್ಯಮ ಉರಿಯಲ್ಲಿಯೇ ಬೇಯಿಸಿ.

ಈಗ, ನಿಮ್ಮ ಕುಟುಂಬಕ್ಕಾಗಿ ಮೃದುವಾದ ರೊಟ್ಟಿಗಳನ್ನು ಪ್ರತಿಬಾರಿಯೂ ತಯಾರಿಸಬಹುದು. “ಬಲೂನಿನಂತೆ ಉಬ್ಬುವ ಮೃದುವಾದ ರೊಟ್ಟಿಗಳನ್ನು ಪಡೆಯಲು ಈ ಸರಳ ಸಲಹೆಗಳನ್ನು ಅನುಸರಿಸಿ!” ಎಂದು ಶೆಫ್‌ ಪಂಕಜ್ ಬದೌರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Krishna Janmashatmi : ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ, ಮಹೂರ್ತ, ಇತಿಹಾಸ ಮತ್ತು ಮಹತ್ವ…

ಇದನ್ನೂ ಓದಿ : Ksepana Mudra : ನಿಮ್ಮ ನಕಾರಾತ್ಮಕ ಚಿಂತನೆಗಳನ್ನು ದೂರಮಾಡಲು ಸಹಾಯಮಾಡುವ ‘ಕ್ಷೇಪನ ಮುದ್ರೆ’

(Soft Roti celebrity chef shares 5 easy steps to make perfect soft rotis)

Comments are closed.