Virat Kohli : ಆಸ್ಟ್ರೇಲಿಯಾದ ಬೀದಿಗಳಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಕಟೌಟ್.. ಕ್ಯಾಪ್ಟನ್ ರೋಹಿತ್‌ಗಿಲ್ಲ ಕಟೌಟ್ ಭಾಗ್ಯ

ಪರ್ತ್ : (Virat Kohli Cutout )ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಿನ್ನು ಐದೇ ದಿನ ಬಾಕಿ.ಅಕ್ಟೋಬರ್ 16ರಿಂದ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 22ರಿಂದ ಪ್ರಧಾನ ಸುತ್ತಿನ ಪಂದ್ಯಗಳು ಶುರುವಾಗಲಿವೆ.

ಚುಟುಕು ವಿಶ್ವಕಪ್’ಗೆ (T20 World Cup 2022) ಆತಿಥ್ಯ ವಹಿಸಿರುವ ಕಾಂಗರೂ ನಾಡಿನ ಬೀದಿಗಳಲ್ಲಿ ಪ್ರತೀ ತಂಡಗಳ ಒಬ್ಬೊಬ್ಬ ಸ್ಟಾರ್ ಆಟಗಾರನ ಕಟೌಟ್’ಗಳನ್ನು ಹಾಕಲಾಗಿದೆ. ಟಿ20 ವಿಶ್ವಕಪ್’ನ ಪ್ರೊಮೋಷನ್’ಗೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಕಟೌಟ್’ಗಳನ್ನು ಹಾಕಿದ್ದು, ಭಾರತ ತಂಡದ ಪರವಾಗಿ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli )ಕಟೌಟ್ ಹಾಕಲಾಗಿದೆ. ಕಾಂಗರೂನಾಡಿನ ಗಲ್ಲಿ ಗಲ್ಲಿಗಳಲ್ಲಿ ಕಿಂಗ್ ಕೊಹ್ಲಿ ಕಟೌಟ್’ಗಳು ರಾರಾಜಿಸ್ತಾ ಇದ್ರೆ, ನಾಯಕ ರೋಹಿತ್ ಶರ್ಮಾ (Rohith Sharma)ಗೆ ಕಟೌಟ್ ಭಾಗ್ಯ ಇಲ್ಲ.

ವಿರಾಟ್ ಕೊಹ್ಲಿ ಸದ್ಯದ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಆಟಗಾರ. ಆಧುನಿಕ ಕ್ರಿಕೆಟ್’ನ ಲೆಜೆಂಡ್ ಅಂತಾನೇ ಕೊಹ್ಲಿ ಅವರನ್ನು ಕರೆಯಲಾಗುತ್ತದೆ. ಕ್ರಿಕೆಟ್’ನ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಿರುವ ಕೊಹ್ಲಿಗೆ ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೊಹ್ಲಿ ಬ್ರ್ಯಾಂಡ್, ಕೊಹ್ಲಿಗಿರುವ ಜನಪ್ರಿಯತೆಯ ಕಾರಣದಿಂದ ನಾಯಕ ರೋಹಿತ್ ಶರ್ಮಾ (Rohith Sharma)ಅವರನ್ನು ಬದಿಗೆ ಸರಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ವಿಶ್ವಕಪ್ ಪ್ರೊಮೋಷನ್’ಗೆ ವಿರಾಟ್ ಕೊಹ್ಲಿ ಅವರ ಕಟೌಟ್’ಗಳನ್ನು ಹಾಕಿದೆ.

ಇದನ್ನೂ ಓದಿ : Rishabh Pant Urvashi Rautela: “ಹೃದಯವನ್ನು ಹಿಂಬಾಲಿಸಿ ಬಂದಿದ್ದೇನೆ..” ರಿಷಭ್ ಪಂತ್‌ಗಾಗಿ ಆಸೀಸ್‌ಗೆ ಹಾರಿದ್ರಾ ನಟಿ ಊರ್ವಶಿ ರೌಟೇಲಾ..?

ಇದನ್ನೂ ಓದಿ : Prithvi Shaw: “ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇನ್ನೇನು ಮಾಡ್ಬೇಕು ಹೇಳಿ..” ಬಿಸಿಸಿಐ ವಿರುದ್ಧ ಪೃಥ್ವಿ ಶಾ ಆಕ್ರೋಶ ಸ್ಫೋಟ

ಇದನ್ನೂ ಓದಿ : David Miller daughter : ಕ್ಯಾನ್ಸರ್’ಗೆ ಬಲಿಯಾದ ಡೇವಿಡ್ ಮಿಲ್ಲರ್ ಪುತ್ರಿ, ಭಾವನಾತ್ಮಕ ಸಂದೇಶ ಹಂಚಿಕೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಅಭಿಯಾನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಆರಂಭವಾಗಲಿದೆ. ಈ ಹೈವೋಲ್ಟೇಜ್ ಪಂದ್ಯ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಭಾರತ ತಂಡ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್-2ನಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆತಿಥೇಯ ಆಸ್ಟ್ರೇಲಿಯಾ (ಅಕ್ಟೋಬರ್ 17) ಹಾಗೂ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ (ಅಕ್ಟೋಬರ್ 19) ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಗಳು ಬ್ರಿಸ್ಬೇನ್’ನಲ್ಲಿ ನಡೆಯಲಿವೆ. ಸದಸ್ಯ ಭಾರತ ತಂಡ ಪರ್ತ್’ನ ವಾಕಾ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದು, ಅಲ್ಲೇ ವೆಸ್ಟರ್ಸ್ ಆಸ್ಟ್ರೇಲಿಯಾ ತಂಡದ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಅಕ್ಟೋಬರ್ 15ರಂದು ಟೀಮ್ ಇಂಡಿಯಾ ಬ್ರಿಸ್ಬೇನ್’ಗೆ ಪ್ರಯಾಣ ಬೆಳೆಸಲಿದೆ.

Virat Kohli Cutout is raving on the streets of Australia. Captain Rohit’s Cutout Bhagya

Comments are closed.