ಫಿಫಾ ಸಂಭ್ರಮದಲ್ಲಿ ಸೂತಕ. ಸ್ಪೇನ್‌ ಅಭಿಮಾನಿ ಬಾಲಕ ದಾರುಣ ಸಾವು

ಪೋರ್ಚುಗಲ್ ಗಡಿ ಬಳಿಯ ಸಿಯುಡಾಡ್ ರೋಡ್ರಿಗೋ ನಗರದ ಅರ್ಬೋಲ್ ಗೋರ್ಡೊದಲ್ಲಿ ದೊಡ್ಡ ದುರಂತ ಸಂಭವಿಸಿದೆ. ವಿಜಯೋತ್ಸವದಲ್ಲಿ ತೊಡಗಿದ್ದ ಜನಸಮೂಹದ ಮೇಲೆ ಅಲ್ಲಿದ್ದ ಐತಿಹಾಸಿಕ ಫೌಂಟೇನ್‌ನ ಮೇಲಿನ ಭಾಗ ಕುಸಿದು ಬಿದ್ದಿದೆ.

2026ರ ಫಿಫಾ ವಿಶ್ವಕಪ್‌ಗೆ ಅತ್ಯಂತ ಅದ್ಧೂರಿ ತೆರೆಬಿದ್ದಿದೆ! ನ್ಯೂಜೆರ್ಸಿಯಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಕದನದಲ್ಲಿ ಸ್ಪೇನ್, ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಬಿಗ್ ಶಾಕ್ ನೀಡಿದೆ. 1-0 ಗೋಲುಗಳ ಅಂತರದಲ್ಲಿ ಮೆಸ್ಸಿ ಪಡೆಯನ್ನು ಮಣ್ಣುಮುಕ್ಕಿಸಿ, ಸ್ಪೇನ್ ಎರಡನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದಿದೆ.

ಸಂಭ್ರಮದ ನಡುವೆ ಅವಘಡ; ಬಾಲಕ ಮೃತ್ಯು

ಈ ಸಂಭ್ರಮದ ನಡುವೆ ಪೋರ್ಚುಗಲ್ ಗಡಿ ಬಳಿಯ ಸಿಯುಡಾಡ್ ರೋಡ್ರಿಗೋ ನಗರದ ಅರ್ಬೋಲ್ ಗೋರ್ಡೊದಲ್ಲಿ ದೊಡ್ಡ ದುರಂತ ಸಂಭವಿಸಿದೆ. ವಿಜಯೋತ್ಸವದಲ್ಲಿ ತೊಡಗಿದ್ದ ಜನಸಮೂಹದ ಮೇಲೆ ಅಲ್ಲಿದ್ದ ಐತಿಹಾಸಿಕ ಫೌಂಟೇನ್‌ನ ಮೇಲಿನ ಭಾಗ ಕುಸಿದು ಬಿದ್ದಿದೆ.

ಫೌಂಟೇನ್ ಬಿದ್ದ ರಭಸಕ್ಕೆ 13 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಪೈನ್‌ ಮತ್ತು ಅರ್ಜೆಂಟೀನಾ ನಡುವೆ ನಡೆಯುಯತ್ತಿದ್ದ ಪೈನಲ್‌ ವೀಕ್ಷಿಸಿಲು ಜನಸ್ತೋಮ ಒಂದೆಡೆ ನೆರೆದಿದ್ದ್ರೆ, ಇನ್ನೊಂದೆಡೆ, ಪ್ರಮುಖ ರಸ್ತೆ, ಮಾರ್ಗಗಳೂ ಕೂಡಾ ಜನ ಸಮೂಹದಿಂದ ಕೂಡಿತ್ತು.

ಈ ನಡುವೆ ಫೌಂಟೇನ್‌ ಕುಸಿದು ಬಾಲಕ ಮೃತಪಟ್ಟ ಘಟನೆ ಫೀಫಾಗೆ ಕಪ್ಪುಚುಕ್ಕೆ ಯಾಗಿದೆ. ಸ್ಪೇನ್ ವಿಶ್ವಕಪ್ ಎತ್ತಿಹಿಡಿಯುತ್ತಿದ್ದಂತೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳು ಬೀದಿಗಿಳಿದು ವಿಜಯೋತ್ಸವ ಆಚರಿಸಲು ಶುರುಮಾಡಿದ್ರು.ಫೌಂಟೇನ್ ಬಿದ್ದ ರಭಸಕ್ಕೆ 13 ವರ್ಷದ ಬಾಲಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ನು ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ

ಒಂದೆಡೆ 16 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಐತಿಹಾಸಿಕ ಖುಷಿಯಿದ್ದರೆ, ಇನ್ನೊಂದೆಡೆ ಅಭಿಮಾನಿಯೊಬ್ಬನ ಸಾವು ಇಡೀ ಸ್ಪೇನ್ ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಎಕ್ಸ್‌ಟ್ರಾ ಟೈಮ್‌ನಲ್ಲಿ ಗೋಲ್‌; ಫೀಫಾ ಮುಡಿಗೇರಿಕೊಂಡ ಸ್ಪೈನ್‌

ಅಂತಿಮ ಕ್ಷಣದಲ್ಲಿ ಪುಟಿದೇಳುವ ಅರ್ಜೆಂಟೀನಾದ ಯಾವ ತಂತ್ರವೂ ಈ ಬಾರಿ ಫಲ ನೀಡಲಿಲ್ಲ. ಸತತ 2ನೇ ಬಾರಿಗೆ ಚಾಂಪಿಯನ್ ಆಗುವ ಅರ್ಜೆಂಟೀನಾದ ಆಸೆ ಮತ್ತು ಮತ್ತೊಂದು ವಿಶ್ವಕಪ್‌ನೊಂದಿಗೆ ನಿವೃತ್ತಿಯಾಗಬೇಕೆಂದಿದ್ದ ಲಿಯೋನೆಲ್ ಮೆಸ್ಸಿಯ ಕನಸು ಭಗ್ನಗೊಂಡಿದೆ.

2010ರಲ್ಲಿ ಸ್ಪೇನ್ ಮೊದಲ ಬಾರಿ ವಿಶ್ವಕಪ್ ಗೆದ್ದಾಗಲೂ ಎಕ್ಸ್‌ಟ್ರಾ ಟೈಮ್‌ನಲ್ಲಿ ಗೋಲು ಬಾರಿಸಿತ್ತು, ಜೊತೆಗೆ 2 ವರ್ಷ ಮುಂಚೆ ಯುರೋ ಕಪ್ ಗೆದ್ದಿತ್ತು. ಈ ಬಾರಿಯೂ 2024ರಲ್ಲಿ ಯುರೋ ಕಪ್ ಗೆದ್ದು, ಈಗ ಎಕ್ಸ್‌ಟ್ರಾ ಟೈಮ್‌ನಲ್ಲೇ ಗೋಲು ಹೊಡೆದು ಇತಿಹಾಸವನ್ನು ಮರುಕಳಿಸಿದೆ!

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.