ಲಂಡನ್‌ನಲ್ಲಿ ಕ್ರಿಸ್ ಗೇಲ್ ಭೇಟಿ ಮಾಡಿದ ಆರ್‌ಸಿಬಿ ಮಾಜಿ ಓನರ್ ವಿಜಯ್ ಮಲ್ಯ

ಲಂಡನ್: ಮದ್ಯದ ದೊರೆ ವಿಜಯ್ ಮಲ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಮೊದಲ ಮಾಲೀಕ. ಬ್ಯಾಂಕ್’ಗೆ ಸಾವಿರಾರು ಕೋಟಿ ವಂಚಿಸಿ ಲಂಡನ್”ಗೆ ಪಲಾಯನ ಮಾಡಿದ ನಂತರ RCB ಮಾಲೀಕತ್ವ ಬೇರೆಯವರ ಪಾಲಾಗಿದೆ. ಸದ್ಯ ಲಂಡನ್”ನಲ್ಲಿರುವ ವಿಜಯ್ ಮಲ್ಯ, ಅಲ್ಲಿ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಅವರನ್ನು ಭೇಟಿ ಮಾಡಿದ್ದಾರೆ (Vijay Mallya meets Chris Gayle) ಯೂನಿವರ್ಸ್ ಬಾಸ್ ಗೇಲ್”ರನ್ನು ಭೇಟಿ ಮಾಡಿರೋ ಚಿತ್ರವನ್ನು ವಿಜಯ್ ಮಲ್ಯ ಟ್ವಿಟರ್”ನಲ್ಲಿ ಹಂಚಿಕೊಂಡಿದ್ದಾರೆ.

2011ರಲ್ಲಿ ಕ್ರಿಸ್ ಗೇಲ್ (Chris Gayle) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡದ್ದೇ ಒಂದು ಇಂಟ್ರೆಸ್ಟಿಂಗ್ ಕಥೆ. 2008ರ ಐಪಿಎಲ್ ಹರಾಜಿನಲ್ಲಿ ಕ್ರಿಸ್ ಗೇಲ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿಸಿರಲಿಲ್ಲ. 2009ರ ಮತ್ತು 2010ನೇ ಸಾಲಿನ ಐಪಿಎಲ್ ವೇಳೆ ಗೇಲ್ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿದ್ದರು. ಆದರೆ ನಂತರ ಗೇಲ್ ಅವರನ್ನು ಕೆಕೆಆರ್ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿತ್ತು. ಅದೇ ಸಂದರ್ಭದಲ್ಲಿ ಆರ್’ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾ ವೇಗಿ ಡರ್ಕ್ ನ್ಯಾನ್ಸ್ ಗಾಯಗೊಂಡಿದ್ದ ಕಾರಣ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಬದಲಿ ಆಟಗಾರನ ಹುಡುಕಾಟದಲ್ಲಿತ್ತು. ಆಗ ಆರ್’ಸಿಬಿ ಕಣ್ಣಿಗೆ ಬಿದ್ದದ್ದೇ ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಸ್ ಗೇಲ್.

2011ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಸೇರಿಕೊಂಡ ಕ್ರಿಸ್ ಗೇಲ್ ನಂತರ ಆಡಿದ ಆಟವನ್ನು ಇಡೀ ಕ್ರಿಕೆಟ್ ಜಗತ್ತೇ ಕಂಡಿದೆ. 2011ರಲ್ಲಿ ಅಕ್ಷರಶಃ ಅಬ್ಬರಿಸಿದ ಗೇಲ್ ಕೇವಲ 12 ಪಂದ್ಯಗಳಿಂದ 183ರ ಸ್ಟ್ರೈಕ್’ರೇಟ್”ನಲ್ಲಿ 608 ರನ್ ಗಳಿಸಿ RCB ತಂಡ ಫೈನಲ್ ತಲುಪಲು ಕಾರಣರಾಗಿದ್ದರು,. 2011ರಿಂದ 2017ರವರೆಗೆ ಒಟ್ಟು 7 ವರ್ಷಗಳ ಕಾಲ ಬೆಂಗಳೂರು ತಂಡದ ಪರ ಆಡಿದ ಕ್ರಿಸ್ ಗೇಲ್, 91 ಪಂದ್ಯಗಳಿಂದ 43.29ರ ಸರಾಸರಿಯಲ್ಲಿ 154.40 ಸರಾಸರಿಯಲ್ಲಿ 3,420 ರನ್ ಗಳಿಸಿದ್ದಾರೆ. 2018ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದಿಂದ ಹೊರ ಬಿದ್ದಿದ್ದ ಗೇಲ್ 4 ವರ್ಷಗಳ ಕಾಲ ಪಂಜಾಬ್ ಕಿಂಗ್ಸ್ ಪರ ಆಡಿದ್ದರು.

ಐಪಿಎಲ್: ಕ್ರಿಸ್ ಗೇಲ್ ಸಾಧನೆ
ಪಂದ್ಯ 142
ರನ್ 4,965
ಸರಾಸರಿ 39.72
ಸ್ಟ್ರೈಕ್’ರೇಟ್ 148.96
ಶತಕ 06
ಅರ್ಧಶತಕ 31

RCB ಪರ ಕ್ರಿಸ್ ಗೇಲ್ ಸಾಧನೆ
ಪಂದ್ಯ 91
ರನ್ 3,420
ಸರಾಸರಿ 43.29
ಸ್ಟ್ರೈಕ್’ರೇಟ್ 154.40
ಶತಕ 05
ಅರ್ಧಶತಕ 19

ಇದನ್ನೂ ಓದಿ : Dinesh Karthik : 18 ವರ್ಷ 10 ಮಂದಿಯ ನಾಯಕತ್ವದಲ್ಲಿ ಆಡಿದ ದಿನೇಶ್‌ ಕಾರ್ತಿಕ್

ಇದನ್ನೂ ಓದಿ : Rahul Dravid : ಆ ಆಟಗಾರನ ಪರ ನಿಂತಿದ್ದಕ್ಕೆ ಕೋಚ್ ದ್ರಾವಿಡ್ ವಿರುದ್ಧ ಫ್ಯಾನ್ಸ್ ಕೆಂಡಾಮಂಡಲ

Former RCB Owner Vijay Mallya meets Chris Gayle in London

Comments are closed.